ETV Bharat / bharat

4 ವರ್ಷದಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ 47 ಸಾವಿರ ದೂರು: ಜಾತಿ ನಿಂದನೆ ಕೇಸ್​​ಗಳೇ ಹೆಚ್ಚು

ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಕಳೆದ ನಾಲ್ಕು ವರ್ಷಗಳಲ್ಲಿ 47 ಸಾವಿರಕ್ಕೂ ಅಧಿಕ ದೂರುಗಳು ಬಂದಿವೆ. ಇದರಲ್ಲಿ ಜಾತಿ ನಿಂದನೆ ಕೇಸ್​​ಗಳೇ ಹೆಚ್ಚು ಎಂದು ಅಂಕಿಅಂಶಗಳು ತಿಳಿಸಿವೆ.

ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ
ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ (ETV Bharat)
author img

By PTI

Published : Oct 13, 2024, 9:33 PM IST

ನವದೆಹಲಿ: ಜಾತಿ ನಿಂದನೆ, ಭೂಮಿ, ಸರ್ಕಾರಿ ಉದ್ಯೋಗಗಳಿಗೆ ಸಂಬಂಧಿಸಿದ ವಿವಾದಗಳು ಸೇರಿದಂತೆ ಕಳೆದ ನಾಲ್ಕು ವರ್ಷಗಳಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ (ಎನ್​​ಸಿಎಸ್​​ಸಿ) 47 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ.

ಮಾಹಿತಿ ಹಕ್ಕು ಕಾಯ್ದೆಯಡಿ ಈ ವಿವರ ಲಭ್ಯವಾಗಿದ್ದು, ಇದರಲ್ಲಿ ಜಾತಿ ನಿಂದನೆಯ ಪ್ರಕರಣಗಳು ಹೆಚ್ಚಿವೆ. ನಂತರದಲ್ಲಿ ಭೂ ವಿವಾದ, ಸರ್ಕಾರಿ ಉದ್ಯೋಗಿಗಳ ವ್ಯಾಜ್ಯಗಳು ಬಂದಿವೆ. ನಾಲ್ಕು ವರ್ಷಗಳ ಪೈಕಿ 2020-21 ರಲ್ಲಿ 11,917 ದೂರುಗಳು, 2021-22 ರಲ್ಲಿ 13,964 ದೂರುಗಳು, 2022-23 ರಲ್ಲಿ 12,402 ಮತ್ತು 2024 ರಲ್ಲಿ 9,550 ದೂರುಗಳು ದಾಖಲಾಗಿವೆ.

ಸಹಾಯವಾಣಿಗೂ ದೂರುಗಳ ಸುರಿಮಳೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಮೇಲಿನ ದೌರ್ಜನ್ಯಗಳ ಕುರಿತು ರಾಷ್ಟ್ರೀಯ ಸಹಾಯವಾಣಿಗೂ ದೂರುಗಳ ಸುರಿಮಳೆಯಾಗಿದೆ. ಅಂಕಿಅಂಶಗಳ ಪ್ರಕಾರ, ಈವರೆಗೆ 6,02,177 ಕರೆಗಳು ಬಂದಿವೆ. ಈ ಪೈಕಿ 1,784 ಇತ್ಯರ್ಥಗೊಂಡಿದ್ದರೆ, 5,843 ಬಾಕಿ ಇವೆ. 13 ರಾಜ್ಯಗಳಿಂದ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಉತ್ತರ ಪ್ರದೇಶದಿಂದ ಅತಿ ಹೆಚ್ಚು ದೂರುಗಳು ಬಂದಿವೆ. 3,10,623 ಈ ರಾಜ್ಯದಿಂದ ಬಂದಿವೆ. ಬಳಿಕ ರಾಜಸ್ಥಾನದಿಂದ 8,651 (ಶೇ. 16.75) ಮತ್ತು ಮಧ್ಯಪ್ರದೇಶದಿಂದ 7,732 (ಶೇ. 14.97) ದೂರುಗಳು ಬಂದಿವೆ.

ಈ ಬಗ್ಗೆ ಮಾಹಿತಿ ನೀಡಿರುವ ಎನ್‌ಸಿಎಸ್‌ಸಿ ಅಧ್ಯಕ್ಷ ಕಿಶೋರ್ ಮಕ್ವಾನಾ, "ಆಯೋಗವು ಅತಿ ಹೆಚ್ಚು ಜಾತಿ ನಿಂದನೆ ದೂರುಗಳನ್ನು ಸ್ವೀಕರಿಸಿದೆ. ನಂತರ ಭೂ ವಿವಾದಗಳು ಮತ್ತು ಸರ್ಕಾರಿ ವಲಯದಲ್ಲಿನ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳಾಗಿವೆ. ದೂರುಗಳನ್ನು ತ್ವರಿತವಾಗಿ ಪರಿಹರಿಸುವ ಸಲುವಾಗಿ ಮುಂದಿನ ತಿಂಗಳಿನಿಂದ ರಾಜ್ಯ ಕಚೇರಿಗಳಿಗೆ ಭೇಟಿ ನೀಡಲಾಗುತ್ತಿದೆ" ಎಂದರು.

"ನಾನು ಅಧಿಕಾರ ವಹಿಸಿಕೊಂಡ ನಂತರ, ಜನರನ್ನು ಭೇಟಿ ಮಾಡಲು ನನ್ನ ಕಚೇರಿಯನ್ನು ಮುಕ್ತವಾಗಿಡಲಾಗಿದೆ. ಜನರನ್ನು ಭೇಟಿ ಮಾಡಲು ಮತ್ತು ಅವರ ಸಮಸ್ಯೆಗಳನ್ನು ಆಲಿಸಲು ವಾರಕ್ಕೆ ನಾಲ್ಕು ಬಾರಿ ಸಂವಾದ ನಡೆಸುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ: ಬಂಗಾಳ ವೈದ್ಯೆ ಕೊಲೆ ಕೇಸ್​: ಮತ್ತೆ 77 ವೈದ್ಯರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.