ETV Bharat / bharat

ಇನ್ಮುಂದೆ ನೀವು FASTag ಲಗತ್ತಿಸುವ ಅಗತ್ಯ ಇಲ್ಲವೇ?: ಮೇ 1 ರಿಂದ ಜಾರಿ ಆಗುತ್ತಾ ಹೊಸ ನೀತಿ? : ಈ ಗೊಂದಲಗಳಿಗೆ ತೆರೆ ಎಳೆದ NHAI! - NEW TOLL SYSTEM IN INDIA

ಮೇ1 ರಿಂದ ದೇಶಾದ್ಯಂತ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಚಿಂತನೆ ನಡೆಸುತ್ತಿಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸ್ಪಷ್ಟಪಡಿಸಿದೆ

no-more-fastag-nhai-to-introduce-gnss-based-toll-system
FASTag ಲಗತ್ತಿಸುವ ಅಗತ್ಯವೇ ಇಲ್ಲ ((IANS Photo))
author img

By ETV Bharat Karnataka Team

Published : April 18, 2025 at 8:03 AM IST

3 Min Read

ಹೈದರಾಬಾದ್​: ರಸ್ತೆಗಳಲ್ಲಿ ಪ್ರಯಾಣ ಮಾಡುವುದು ಈಗ ವಾಹನ ಸವಾರರಿಗೆ ಮತ್ತಷ್ಟು ಸುಲಭವಾಗಲಿದೆ. ಮೇ 1, 2025 ರಿಂದ ದೇಶದಲ್ಲಿ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಅದ್ಭುತ ಬದಲಾವಣೆ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿತ್ತು.

ಈ ನಿಟ್ಟಿನಲ್ಲಿ ವಾಹನ ಸವಾರರಲ್ಲಿ ಉಂಟಾಗಿರುವ ಗೊಂದಲಕ್ಕೆ ಕೇಂದ್ರ ಸರ್ಕಾರ ಶುಕ್ರವಾರ ಸ್ಪಂದಿಸಿದೆ. ಜಿಪಿಎಸ್ ಟೋಲ್ ವ್ಯವಸ್ಥೆ ಕುರಿತ ಸುದ್ದಿಯನ್ನು ಅದು ನಿರಾಕರಿಸಿದೆ. ಅಂತಹ ಯಾವುದೇ ನಿರ್ಧಾರವನ್ನು ಇನ್ನೂ ತೆಗೆದುಕೊಂಡಿಲ್ಲ ಎಂದು ಹೇಳಿದೆ. ಮುಂದಿನ ತಿಂಗಳ 1ರಿಂದ ದೇಶಾದ್ಯಂತ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಚಿಂತನೆ ನಡೆಸುತ್ತಿಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸ್ಪಷ್ಟಪಡಿಸಿದೆ.

ಈ ಮೊದಲು FASTag ಬದಲಿಗೆ GPS ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಪರಿಚಯಿಸಲಿದೆ ಎಂಬ ಸುದ್ದಿ ಪ್ರಚಲಿತದಲ್ಲಿತ್ತು. ಈ ಹೊಸ ನೀತಿಯು ಪಾರದರ್ಶಕ ಟೋಲ್ ಸಂಗ್ರಹವನ್ನು ಖಚಿತಪಡಿಸುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು ಎಂದು ವರದಿಯಾಗಿತ್ತು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ನಾಗ್ಪುರದಲ್ಲಿ ಹೊಸ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯ ಕುರಿತು ಮಾತನಾಡಿದ್ದರು. ಹೊಸ ಟೋಲ್ ನೀತಿಯನ್ನು 15 ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದ್ದರು. ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS) ಅನ್ನು FASTag ನೊಂದಿಗೆ ಬದಲಾಯಿಸಲಾಗುವುದು ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಹೆದ್ದಾರಿ ಸಚಿವಾಲಯ ಅಂತಹ ಯಾವುದೇ ನಿರ್ಧಾರವನ್ನು ಇನ್ನೂ ತೆಗೆದುಕೊಂಡಿಲ್ಲ ಎಂದು ಹೇಳಿದೆ.

ಆದರೆ ಟೋಲ್ ಪ್ಲಾಜಾಗಳ ಮೂಲಕ ವಾಹನಗಳ ತಡೆರಹಿತ, ತಡೆ-ಮುಕ್ತ ಚಲನೆಯನ್ನು ಸಕ್ರಿಯಗೊಳಿಸಲು ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡಲು 'ANPR-ಫಾಸ್ಟ್ಯಾಗ್ ಆಧಾರಿತ ತಡೆ - ಕಡಿಮೆ ಟೋಲಿಂಗ್ ಸಿಸ್ಟಮ್' ಅನ್ನು ಆಯ್ದ ಟೋಲ್ ಪ್ಲಾಜಾಗಳಲ್ಲಿ ಅಳವಡಿಸಲಾಗುವುದು ಎಂಬ ಮಾಹಿತಿ ಹೊರಬಿದ್ದಿದೆ.

GNSS ಎಂದರೇನು? ಫಾಸ್ಟ್ಯಾಗ್ ಬದಲಿಸುವ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್ಎಸ್ಎಸ್) ತಂತ್ರಜ್ಞಾನವನ್ನು ಬಳಸಿಕೊಂಡು, ವಾಹನಗಳು ರಸ್ತೆಯಲ್ಲಿ ಪ್ರಯಾಣಿಸುವ ದೂರವನ್ನು ಆಧರಿಸಿ ಸ್ವಯಂಚಾಲಿತವಾಗಿ ಟೋಲ್ ಶುಲ್ಕವನ್ನು ಸಂಗ್ರಹಿಸುತ್ತವೆ. ಇದು ಟೋಲ್ ಪ್ಲಾಜಾಗಳಲ್ಲಿ ವಾಹನಗಳನ್ನು ನಿಲ್ಲಿಸುವ ಅಗತ್ಯವನ್ನು ನಿವಾರಿಸುತ್ತದೆ. ಇದರಿಂದ ಸಂಚಾರ ದಟ್ಟಣೆಯೂ ಕಡಿಮೆಯಾಗಲಿದೆ.

2016 ರಲ್ಲಿ ಪರಿಚಯಿಸಲಾದ ಫಾಸ್ಟ್ಯಾಗ್ ಬದಲಿಸಲು GNSS ಅನ್ನು ಪರಿಚಯಿಸಲಾಗುವುದು. ಆದರೆ, FASTag ಬಂದ ನಂತರ, ಟೋಲ್ ಸಂಗ್ರಹಣೆಯು ವೇಗ ಪಡೆದುಕೊಂಡಿದೆ ಎಂಬುದನ್ನು ನಾವು - ನೀವೆಲ್ಲ ಗಮನಿಸಬಹುದು. ಆದರೆ, ಕೆಲವೊಮ್ಮೆ ಟೋಲ್ ಪ್ಲಾಜಾಗಳಲ್ಲಿ ತಾಂತ್ರಿಕ ದೋಷಗಳಿಂದ ವಿಳಂಬವಾಗಿತ್ತು. ಇದರಿಂದ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಪರದಾಡಿದ ಬಹಳಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಈ ಕ್ರಮದಲ್ಲಿ, FASTag ಬದಲಿಸಲು GNSS ಅನ್ನು ಪರಿಚಯಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಲಾಗುತ್ತಿದೆ ಎಂದು ಹೇಳಲಾಗಿದೆ.

GNSS ಆಧಾರಿತ ಟೋಲ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?: FASTag ನಂತೆ, GNSS ಸಹ RFID ತಂತ್ರಜ್ಞಾನವನ್ನು ಬಳಸಿಕೊಂಡು ಕೆಲಸ ಮಾಡಲಿದೆ. ಈ ಟ್ಯಾಗ್ ಅನ್ನು ವಿಂಡ್ ಶೀಲ್ಡ್​​ ನಲ್ಲಿ ಇರಿಸಬೇಕು. ಆ ನಂತರ GNSS ಉಪಗ್ರಹಗಳ ಮೂಲಕ ವಾಹನ ಚಲನೆಯನ್ನು ಇದು ಟ್ರ್ಯಾಕ್ ಮಾಡುತ್ತದೆ. ಅಷ್ಟೇ ಅಲ್ಲ ವಾಹನವು ಪ್ರಯಾಣಿಸುವ ದೂರವನ್ನು ಆಧರಿಸಿ ಟೋಲ್ ಶುಲ್ಕ ಸಂಗ್ರಹಿಸುತ್ತದೆ. GNSS ಆಧಾರದ ಮೇಲೆ ನಿಮ್ಮ ಬ್ಯಾಂಕ್ ಖಾತೆಯಿಂದ ಮೊತ್ತವನ್ನು ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಹೊಸ ಟೋಲ್ ವ್ಯವಸ್ಥೆಯು ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಬಿಲ್ಲಿಂಗ್ ಆಯ್ಕೆಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.

GNSS ನ ಪ್ರಯೋಜನಗಳೇನು?: ಫಾಸ್ಟ್ಯಾಗ್ ಬದಲಿಸುವ ಹೊಸ ಟೋಲ್ ವ್ಯವಸ್ಥೆಯು ನೀವು ಪ್ರಯಾಣಿಸುವ ದೂರವನ್ನು ಆಧರಿಸಿ ನಿಮಗೆ ಟೋಲ್​ ಗಳ ಶುಲ್ಕವನ್ನು ವಿಧಿಸುತ್ತದೆ. ಹೊಸ ಟೋಲ್ ವ್ಯವಸ್ಥೆ ಜಾರಿಗೆ ಬಂದ ನಂತರ ಟೋಲ್ ಪ್ಲಾಜಾಗಳನ್ನು ತೆಗೆದುಹಾಕಿದರೆ ಟ್ರಾಫಿಕ್ ಸಮಸ್ಯೆಗಳು ಕೂಡಾ ಕಡಿಮೆಯಾಗುತ್ತವೆ. ಇದು ಹೆದ್ದಾರಿಯಲ್ಲಿ ಆರಾಮದಾಯಕ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆ. ಕಡಿಮೆಯಾದ ದಟ್ಟಣೆಯು ವಾಯು ಮಾಲಿನ್ಯವನ್ನು ಸಹ ಕಡಿಮೆ ಮಾಡುತ್ತದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಆರಂಭಿಕ ಹಂತದಲ್ಲಿ ಟ್ರಕ್‌ಗಳು ಮತ್ತು ಬಸ್‌ಗಳಂತಹ ವಾಣಿಜ್ಯ ವಾಹನಗಳಿಗೆ ಹೊಸ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರಲು ಯೋಜಿಸಿದೆ. ನಂತರದ ಹಂತದಲ್ಲಿ ಖಾಸಗಿ ವಾಹನಗಳನ್ನು ಇದೇ ವ್ಯವಸ್ಥೆಗೆ ಸೇರಿಸಲು ಯೋಜಿಸಲಾಗಿದೆಯಂತೆ.

ಇದನ್ನು ಓದಿ: ಬಿಎಂಆರ್​ಸಿಎಲ್​ನಲ್ಲಿ ಸಿವಿಲ್​ ಇಂಜಿನಿಯರಿಂಗ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.