ಕೋಟಾ: ಇತ್ತೀಚೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) (ಪದವಿಪೂರ್ವ) ಯಲ್ಲಿ ಟಾಪರ್‌ಗಳ ಅಂಕಗಳಲ್ಲಿನ ಕುಸಿತವು ಪರೀಕ್ಷೆಯಲ್ಲಿ ತೀವ್ರವಾಗಿ ಪರೀಕ್ಷಿಸಲ್ಪಡುವ ಪ್ರತಿಭೆಯ ಸೂಚಕವಾಗಿದೆ. ನೀಟ್ ಫಲಿತಾಂಶ ಜೂನ್ 14 ರಂದು ಘೋಷಣೆಯಾಯಿತು.
ಹಿಂದಿನ ಕೆಲವು ವರ್ಷಗಳಿಗೆ ಹೋಲಿಸಿದರೆ ಕೆಲವು ಅಭ್ಯರ್ಥಿಗಳು ಉನ್ನತ ಅಂಕಗಳನ್ನು ಗಳಿಸಿದ್ದಾರೆ ಎಂದು ಶಿಕ್ಷಣ ತಜ್ಞ ದೇವ್ ಶರ್ಮಾ ಬಹಿರಂಗಪಡಿಸಿದ್ದಾರೆ.
"ನೀಟ್ ಪರೀಕ್ಷೆ ಫಲಿತಾಂಶದಲ್ಲಿ ಈ ಬಾರಿ ಗರಿಷ್ಠ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳು ಕೇವಲ ಒಂದೆರಡು. ಆದರೆ ಕಡಿಮೆ ಶ್ರೇಣಿಗಳನ್ನು ಹೊಂದಿರುವ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳು 5000 ರಷ್ಟಿದ್ದಾರೆ. ಈ ಮೊದಲು 50 ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿರುತ್ತಿದ್ದರು."
ಕಳೆದ ಕೆಲವು ವರ್ಷಗಳಲ್ಲಿ ಹಲವು ಅಭ್ಯರ್ಥಿಗಳು ಮೊದಲ ಶ್ರೇಣಿಯನ್ನು ಪಡೆಯುತ್ತಿದ್ದರು. ಆದರೆ ಈ ಬಾರಿ ಕೇವಲ ಇಬ್ಬರು ಮಾತ್ರ ಇದ್ದಾರೆ. ಒಟ್ಟು 720 ಅಂಕಗಳಲ್ಲಿ 73 ಅಭ್ಯರ್ಥಿಗಳು 651 ರಿಂದ 686 ಅಂಕಗಳನ್ನು ಗಳಿಸಿದ್ದಾರೆ. ಮತ್ತೊಂದೆಡೆ, 144 ರಿಂದ 200 ಅಂಕಗಳನ್ನು ಗಳಿಸಿರುವ 3.03 ಲಕ್ಷ ಅಭ್ಯರ್ಥಿಗಳಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಶ್ನೆಗಳಲ್ಲಿನ ಬದಲಾವಣೆ, ನವೀನ ಸಾಮರ್ಥ್ಯಗಳು ಮತ್ತು ವಿಭಿನ್ನ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಪ್ರತಿಕ್ರಿಯೆಯನ್ನು ಮೌಲ್ಯಮಾಪನ ಮಾಡುವುದು ಪರೀಕ್ಷೆಯ ಉದ್ದೇಶವಾಗಿದೆ. ಈ ಕಾರಣಕ್ಕಾಗಿಯೇ ಈ ಬಾರಿ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿನ ವರ್ಷಗಳ ಪ್ರಶ್ನೆಗಳ ಪುನರಾವರ್ತನೆ ಇರಲಿಲ್ಲ. ಪ್ರಶ್ನೆಗಳು ವಿಭಿನ್ನವಾಗಿದ್ದವು ಮಾತ್ರವಲ್ಲದೆ ಹೊಸ ರೀತಿಯಲ್ಲಿ ಕೇಳಲಾಗಿತ್ತು.
2024 ರಲ್ಲಿ 600 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ 80,000 ಕ್ಕಿಂತ ಹೆಚ್ಚಿತ್ತು ಮತ್ತು 2023 ರಲ್ಲಿ 22,000 ಕ್ಕಿಂತ ಹೆಚ್ಚಿತ್ತು ಎಂದು ಶರ್ಮಾ ಹೇಳಿದರು. ಇದು 2025 ರಲ್ಲಿ 1382 ಕ್ಕೆ ಇಳಿದರೆ 500 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ 51,511 ಕ್ಕೆ ಇಳಿದಿದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕೆ ಕಳೆದ ವರ್ಷ ಕಟ್ ಆಫ್ 652 ರಷ್ಟಿತ್ತು, ಆದರೆ ಈ ಬಾರಿ ಅದು ಸುಮಾರು 525 ಕ್ಕೆ ಇಳಿಯುವ ನಿರೀಕ್ಷೆಯಿದೆ ಅಂತಾ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ನೀಟ್ ಪರೀಕ್ಷೆಗೆ ಹಾಜರಾಗುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಕಠಿಣ ಪ್ರಶ್ನೆ ಪತ್ರಿಕೆ ಮತ್ತು ಕಡಿಮೆ ಕಟ್ ಆಫ್ ಕಾರಣದಿಂದಾಗಿ 2025 ರ ನಂತರ ಈ ಪ್ರವೃತ್ತಿ ನಿಲ್ಲುವ ನಿರೀಕ್ಷೆಯಿದೆ. ಕಳೆದ ಕೆಲವು ವರ್ಷಗಳಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಕೇವಲ ಮೋಜಿಗಾಗಿ ಮತ್ತು ತಮ್ಮ ಸ್ಥಾನಮಾನವನ್ನು ಮೌಲ್ಯಮಾಪನ ಮಾಡಲು ಪರೀಕ್ಷೆಗೆ ಹಾಜರಾಗುತ್ತಿದ್ದರು ಎಂದು ಶಿಕ್ಷಣ ತಜ್ಞ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: ಅಪ್ಪಸೆಕ್ಯೂರಿಟಿ ಗಾರ್ಡ್, ಬಡತನಕ್ಕೆ ಬರವಿಲ್ಲ: ಆದರೂ ಕೋಚಿಂಗ್ ಇಲ್ಲದೇ NEET ಪಾಸ್ ಮಾಡಿದ ಸಾಧಕಿ
ಇದನ್ನೂ ಓದಿ: NEET ಟಾಪರ್ ಮಹೇಶ್ ಕುಮಾರ್ ಯಶಸ್ಸಿನ ಗುಟ್ಟೇನು?; ಈ ಸಾಧನೆಗೆ ಅವರು ಅನುಸರಿಸಿದ ಮಾರ್ಗವೇನು?