ETV Bharat / bharat

ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಸಿರುವುದು ಎನ್‌ಡಿಡಿಬಿ ವರದಿಯಿಂದ ದೃಢ: ಟಿಡಿಪಿ ಆರೋಪ - Animal Fat In Tirupati Laddu

ವೈಎಸ್‌ಆರ್‌ಸಿಪಿ ಆಡಳಿತಾವಧಿಯಲ್ಲಿ ತಿರುಮಲದ ಲಡ್ಡು ತಯಾರಿಕೆಗೆ ಬಳಸುತ್ತಿದ್ದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇರುವುದನ್ನು ಎನ್‌ಡಿಡಿಬಿ ಲ್ಯಾಬ್ ವರದಿ ದೃಢಪಡಿಸಿದೆ. ಲಡ್ಡುಗಳ ಗುಣಮಟ್ಟವನ್ನು ನಿರ್ಣಯಿಸಲು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯು ಈ ವಿಶ್ಲೇಷಣೆ ನಡೆಸಿದೆ.

author img

By ETV Bharat Karnataka Team

Published : Sep 19, 2024, 9:41 PM IST

tirupati laddu
ತಿರುಪತಿ ಲಡ್ಡು (ETV Bharat)

ನೆಲ್ಲೂರು (ಆಂಧ್ರಪ್ರದೇಶ): ಮಹತ್ವದ ಬೆಳವಣಿಗೆಯಲ್ಲಿ, ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಸುವ ತುಪ್ಪದ ಗುಣಮಟ್ಟದ ಬಗ್ಗೆ ತೆಲುಗು ದೇಶಂ ಪಕ್ಷ (ಟಿಡಿಪಿ), ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ವಿರುದ್ಧ ಗಂಭೀರ ಆರೋಪ ಮಾಡಿದೆ.

ತಿರುಪತಿ ಲಡ್ಡು ತಯಾರಿಕೆ ಕುರಿತಂತೆ, ಟಿಡಿಪಿ ವಕ್ತಾರ ಆನಂ ವೆಂಕಟ ರಮಣ ರೆಡ್ಡಿ, ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಮಾಧ್ಯಮಗಳ ಎದುರು ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಎನ್‌ಡಿಡಿಬಿ ಲ್ಯಾಬ್ ವರದಿ ಬಹಿರಂಗಪಡಿಸಿದರು. ತಿರುಪತಿ ಲಡ್ಡು ಸಿದ್ಧಪಡಿಸಲು ಕಲಬೆರಕೆ ತುಪ್ಪದ ಬಳಸಿರುವುದನ್ನು ಅವರು ದೃಢಪಡಿಸಿದ್ದಾರೆ.

ಹಸುವಿನ ತುಪ್ಪದ ಬದಲು ಎಲ್ಲ ಎಣ್ಣೆಗಳ ಬಳಕೆ ಆರೋಪ; ಈ ಹಿಂದಿನ ವೈಎಸ್‌ಆರ್‌ಸಿಪಿ ಆಡಳಿತಾವಧಿಯಲ್ಲಿ ಲಡ್ಡು ತಯಾರಿಕೆಗೆ ಸರಬರಾಜು ಮಾಡಲಾದ ತುಪ್ಪವು ವಿವಿಧ ಸಂಶಯಾಸ್ಪದ ಅಂಶಗಳನ್ನು ಒಳಗೊಂಡಿದೆ. ತುಪ್ಪವು ಸೋಯಾಬೀನ್, ಗೋವಿನ ಜೋಳದ ಎಣ್ಣೆ, ಆಲಿವ್ ಎಣ್ಣೆ, ಗೋಧಿ ಹೊಟ್ಟಿನ ಎಣ್ಣೆ, ಜೋಳದ ಎಣ್ಣೆ, ಹತ್ತಿಬೀಜದ ಎಣ್ಣೆ, ಮೀನಿನ ಎಣ್ಣೆ, ಗೋವಿನ ಕೊಬ್ಬು, ತಾಳೆ ಎಣ್ಣೆ ಮತ್ತು ಹಂದಿಯ ಕೊಬ್ಬನ್ನು ಒಳಗೊಂಡಿತ್ತು. ಇದರಲ್ಲಿ, ಸಾಂಪ್ರದಾಯಿಕ ಹಸುವಿನ ತುಪ್ಪಕ್ಕೆ ದೂರವಾದ ಮಿಶ್ರಣವಿದೆ ಎಂದು ಆರೋಪಿಸಿದ್ದಾರೆ.

ಹಿಂದಿನ ಸರ್ಕಾರದ ವಿರುದ್ಧ ಗಂಭೀರ ಆರೋಪ: ತುಪ್ಪದ ಗುಣಮಟ್ಟದ ನಿಯಂತ್ರಣದಲ್ಲಿ ಮಾಜಿ ಮುಖ್ಯಮಂತ್ರಿ ಜಗನ್​ಮೋಹನ್ ರೆಡ್ಡಿ ಸರ್ಕಾರದ ಸ್ಪಷ್ಟ ಲೋಪ ಎದ್ದು ಕಾಣುತ್ತಿದೆ ಎಂದು ರೆಡ್ಡಿ ಟೀಕಿಸಿದ್ದಾರೆ. ಪ್ರೀಮಿಯಂ ಗುಣಮಟ್ಟದ ತುಪ್ಪದ ಬೆಲೆ ಸಾಮಾನ್ಯವಾಗಿ ಪ್ರತಿ ಕೆ.ಜಿಗೆ 1,000 ರೂ. ಇರುತ್ತದೆ. ಆದರೆ, ಇಲ್ಲಿ ತುಪ್ಪವನ್ನು ಕೆ.ಜಿ.ಗೆ ಕೇವಲ 320 ರೂ.ಗೆ ನೀಡಲಾಗಿದೆ. ಇಷ್ಟೊಂದು ಕಡಿಮೆ ಬೆಲೆಗೆ ಕಳಪೆ ಸರಬರಾಜು ಅಥವಾ ಭ್ರಷ್ಟಾಚಾರದ ಮೂಲಕ ಮಾತ್ರ ತುಪ್ಪವನ್ನು ಪೂರೈಸಬಹುದು ಎಂದು ಟೆಂಡರ್ ಪ್ರಕ್ರಿಯೆಯ ಬಗ್ಗೆ ಅವರು ಪ್ರಶ್ನಿಸಿದ್ದಾರೆ. 15,000 ಕೆಜಿ ತುಪ್ಪದ ಟೆಂಡರ್ ಲಂಚದ ಹಿನ್ನೆಲೆ ಹೊಂದಿದೆ ಎಂದು ಆರೋಪಿಸಿದ ಅವರು, ಸರ್ಕಾರಿ ಕಂಟ್ರಾಕ್ಟ್​​ಗಳಲ್ಲಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ವೈಎಸ್‌ಆರ್‌ಸಿಪಿ ಸರ್ಕಾರವು ಕೇವಲ 75 ಲಕ್ಷ ರೂಪಾಯಿಗಳ ಹೂಡಿಕೆಯೊಂದಿಗೆ ತುಪ್ಪ ಪ್ರಮಾಣೀಕರಣಕ್ಕಾಗಿ ಮೀಸಲಾದ ಲ್ಯಾಬ್ ಅನ್ನು ಸುಲಭವಾಗಿ ಸ್ಥಾಪಿಸಬಹುದಿತ್ತು ಎಂದು ರೆಡ್ಡಿ ಗಮನ ಸೆಳೆದರು. ವೆಂಕಟ ರಮಣ ರೆಡ್ಡಿ ಆರೋಪಗಳು, ವೈಎಸ್‌ಆರ್‌ಸಿಪಿ ಆಡಳಿತದ ಬಗ್ಗೆ ಹಲವು ಪ್ರಶ್ನೆಗಳನ್ನು ಮೂಡಿಸಿದೆ. ಅಲ್ಲದೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಭರವಸೆ ಸೇರಿ ಪ್ರಮುಖ ವಿಚಾರಗಳ ಬಗ್ಗೆ ಗಮನ ಸೆಳೆದವು. ವಿಶೇಷವಾಗಿ ಆಂಧ್ರಪ್ರದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುವ ಉತ್ಪನ್ನವಾದ ತಿರುಪತಿ ಲಡ್ಡು ಗುಣಮಟ್ಟದ ಬಗ್ಗೆ ಪ್ರಶ್ನೆ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದಕ್ಕೆ ಪ್ರಾಣಿಗಳ ಕೊಬ್ಬು ಬಳಕೆ ಆಗಿತ್ತು: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಆರೋಪ - Tirupati Laddu

ETV Bharat Logo

Copyright © 2024 Ushodaya Enterprises Pvt. Ltd., All Rights Reserved.