ನಾರಾಯಣಪೇಟೆ: ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ನಾರಾಯಣಪೇಟೆ ಜಿಲ್ಲೆಯ ಕೃಷ್ಣ ಮಂಡಲದ ಕೃಷ್ಣಾ ನದಿಯ ದಡದಲ್ಲಿರುವ ಪ್ರಾಚೀನ ಮುದುಮಲ್ ಮೆಗಾಲಿಥಿಕ್ ಕಂಬಗಳು ಪರಿಗಣಿಸುವಂತೆ ಭಾರತ ಪ್ರಸ್ತಾಪ ಸಲ್ಲಿಸಿದೆ. ಭಾರತದ ಆರು ತಾಣಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸುವಂತೆ ಮಾರ್ಚ್ 7ರಂದು ಮನವಿ ಸಲ್ಲಿಸಲಾಗಿದೆ.
ನಾರಾಯಣಪೇಟೆಯ ಈ ಮುದುಮಲ್ ಮೆಗಾಲಿಥಿಕಲ್ ಕಂಬಗಳು ನಿಗೂಢ ಕಲ್ಲಿನ ರಚನೆಯಾಗಿದ್ದು, ಇದನ್ನು ಖಗೋಳ ವಿಜ್ಞಾನದ ಅವಶೇಷಗಳು ಎಂದು ನಂಬಲಾಗಿದೆ.
ಯುನೆಸ್ಕೋ ಮಾನ್ಯತೆ ಭಾರತ ಪ್ರಸ್ತಾಪಿಸಿರುವ ಭಾರತದ ಆರು ತಾಣಗಳಿವು:
ಮುದುಮಲ್ ಮೆಗಾಲಿಥಿಕಲ್ ಕಂಬದ ಹೊರತಾಗಿ ಐದು ತಾಣಗಳನ್ನು ಕೂಡ ಪಾರಂಪರಿಕೆ ಪಟ್ಟಿಗೆ ಸೇರಿಸುವಂತೆ ಪ್ರಸ್ತಾಪಿಸಲಾಗಿದೆ. ಅವುಗಳೆಂದರೆ,
- ಛತ್ತೀಸ್ಗಢದ ಕಂಗೆರ್ ಕಣಿವೆ ರಾಷ್ಟ್ರೀಯ ಉದ್ಯಾನವನ
- ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಎರ್ರಗುಡಿಯಲ್ಲಿನ ಅಶೋಕನ ಕಲ್ಲಿನ ಶಾಸನಗಳು
- ಮಧ್ಯಪ್ರದೇಶ, ಒಡಿಶಾದ ಚೌಸತ್ ಯೋಗಿನಿ ದೇವಾಲಯಗಳ ಸರಣಿ
- ಉತ್ತರ ಭಾರತದಲ್ಲಿ ಗುಪ್ತರ ಕಾಲದ ದೇಗುಲಗಳು
- ಮಧ್ಯಪ್ರದೇಶ, ಉತ್ತರ ಪ್ರದೇಶದ ಬುಂದೇಲರ ಅರಮನೆ- ಕೋಟೆಗಳು.
ಈ ಆರು ತಾಣಗಳನ್ನು ಯುನೆಸ್ಕೋ ಪರಿಗಣಿಸಿದಲ್ಲಿ ಭಾರತದಲ್ಲಿ ಯುನೆಸ್ಕೋ ಮಾನ್ಯತೆ ಪಡೆದ ಪಾರಂಪರಿಕ ತಾಣಗಳ ಪಟ್ಟಿ ಸಂಖ್ಯೆ 56ಕ್ಕೆ ಏರಲಿದೆ.
ಪ್ರಾಚೀನ ಖಗೋಳ ವೀಕ್ಷಣಾಲಯ: ಈ ಮುದಮಲ್ ಕಂಬಳನ್ನು ಮೊದಲ ಬಾರಿಗೆ ಹೈದರಾಬಾದ್ ಸೆಂಟ್ರಲ್ ಯುನಿವರ್ಸಿಟಿಯ ಪ್ರೊ ಕೆ.ಪಿ ರಾವ್ ಪತ್ತೆ ಮಾಡಿದರು. ಇವುಗಳನ್ನು ಮೆಗಾಲಿಥಿಕ್ ಮೆನ್ಹಿರ್ಸ್ (ಕಲ್ಲಿನ ಬೆಂಚು ರೀತಿ ಜೋಡಣೆ) ಎಂದು ಗುರುತಿಸಿದರು. ಇವು 5000 ವರ್ಷದ ಹಳೆವುಗಳಾಗಿವೆ ಎಂದು ಅಂದಾಜಿಸಲಾಗಿದೆ. ಇವುಗಳನ್ನು ಹಿಂದಿನ ಕಾಲದಲ್ಲಿ ಖಗೋಳಶಾಸ್ತ್ರಜ್ಞರು ಖಗೋಳದ ಘಟನೆಗಳ ವೀಕ್ಷಣೆಗಳನ್ನು ಅಧ್ಯಯನಕ್ಕೆ ಬಳಕೆ ಮಾಡುತ್ತಿದ್ದರು ಎಂದು ನಂಬಲಾಗಿದೆ. ಈ ಕಂಬಗಳು ಸೂರ್ಯನ ಚಲನೆ ಮತ್ತು ಋತುಮಾನದ ಲೆಕ್ಕಾಚಾರ, ದಿಕ್ಕುಗಳು ಮತ್ತು ಹವಾಮಾನ ಪರಿಸ್ಥಿತಿ ಪತ್ತೆಗೆ ವ್ಯವಸ್ಥೆ ಮಾಡಲು ಈ ಕಂಬಗಳನ್ನು ಜೋಡಿಸಲಾಗಿತ್ತು.
- ಈ ತಾಣದಲ್ಲಿ ಮೂಲ 100 ಕಂಬಗಳು ಇದ್ದು, ಇವು 10 ರಿಂದ 14 ಅಡಿ ಎತ್ತರವಿದೆ.
- ನೈಸರ್ಗಿಕ ಘಟನೆ ಮತ್ತು ಮಾನವ ಚಟವಟಿಕೆಗಳಿಂದ ಇಂದು, ಕೇವಲ ಬೆರಳೆಣಿಕೆಯಷ್ಟು ಕಂಬಗಳು ಇವೆ
- ಇದರಲ್ಲಿ ಒಂದು ಕಂಬದಲ್ಲಿ ಸಪ್ತಋಷಿ ಮಂಡಲ ಕಾಣಬಹುದಾಗಿದೆ.
- ಈ ತಾಣವೂ ವೃತ್ತಕಾರದ ಲಕ್ಷಣ ಹೊಂದಿದ್ದು, 50 ಎಕರೆ ಪ್ರದೇಶದಲ್ಲಿ ಹರಡಿದೆ. ಕೆಲವು ಇತಿಹಾಸ ತಜ್ಞರು ಇದನ್ನು ಪ್ರಾಚೀನ ಸಮಾಧಿ ಸ್ಥಳ ಎಂದಿದ್ದಾರೆ.
ಸಂರಕ್ಷಣಾ ಪ್ರಯತ್ನ: ಈ ಐತಿಹಾಸಿಕ ಕಂಬಗಳ ರಕ್ಷಣೆಯ ಹೊಣೆಯನ್ನು ಡೆಕ್ಕನ್ ಹೆರಿಟೇಜ್ ಅಕಾಡೆಮಿ ಟ್ರಸ್ಟ್ ಹೊಂದಿದ್ದು, ಇದಕ್ಕೆ ಸರ್ಕಾರದ ಬೆಂಬಲ ಕೂಡ ಇದೆ. ಇದರ ಸುತ್ತಲೂ ರಕ್ಷಣೆಗಾಗಿ ಕಬ್ಬಿಣದ ಬೇಲಿಯನ್ನು ಹಾಕಿ, ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಲು ಭದ್ರತೆಗೆ ಸಿಬ್ಬಂದಿ ನೇಮಕ ಮಾಡಲಾಗಿತ್ತು.
ಟಿಐಟಿಎ ಗ್ಲೋಬಲ್ ಟ್ರಸ್ಟ್ ಸಂಸ್ಥಾಪಕರಾದ ಸಂದೀಪ್ ಮಕ್ಟಲ ಅವರ ನಾಯಕತ್ವದಲ್ಲಿ ಈ ತಾಣದ ಮಹತ್ವ ಸಾರಲು ಅನೇಕ ಡಾಕ್ಯುಮೆಂಟರಿ ಮತ್ತು ಜಾಗೃತಿ ಅಭಿಯಾನ ನಡೆಸಲಾಗಿದೆ.
ಈ ತಾಣಕ್ಕೆ ಯುನೆಸ್ಕೋ ವಿಶ್ವ ಪರಂಪರೆ ಸ್ಥಾನ ನೀಡಿದಲ್ಲಿ, ಇದು ಅಂತಾರಾಷ್ಟ್ರೀಯ ಸ್ಥಾನಮಾನ ಪಡೆಯಲಿದ್ದು, ವಿಶಿಷ್ಟ ಪ್ರಾಚೀನ ಭಾರತದ ವಿಜ್ಞಾನ ಮತ್ತು ಸಂಸ್ಕೃತಿಯ ಪರಂಪರೆಯನ್ನು ಸುರಕ್ಷಿಸುವ ಕೆಲಸ ಮತ್ತಷ್ಟು ಉತ್ತಮಗೊಳ್ಳಲಿದೆ.
ಇದನ್ನೂ ಓದಿ : ಕೈಗೆ ಸಿಗದಂತೆ ಏರಿಕೆ ಕಾಣುತ್ತಿದೆ ಬಂಗಾರ: ಇದೇ ಮೊದಲ ಬಾರಿಗೆ 90 ಸಾವಿರದ ಗಡಿದಾಟಿದ ಚಿನ್ನ: ಬೆಂಗಳೂರಲ್ಲಿ ಇಂದಿನ ದರ ಎಷ್ಟು?
ಇದನ್ನೂ ಓದಿ: ಯುನೆಸ್ಕೊ ವಿಶ್ವ ಪರಂಪರೆ ತಾತ್ಕಾಲಿಕ ಪಟ್ಟಿಗೆ ಭಾರತದ 6 ತಾಣಗಳು ಸೇರ್ಪಡೆ; ಯಾವವು ಆ ಸ್ಥಳಗಳು?