ದೇವಘರ್, ಜಾರ್ಖಂಡ್ : ಸಾಮಾನ್ಯವಾಗಿ ಮನುಷ್ಯರು ಮನುಷ್ಯರನ್ನು ಮಾತ್ರ ಪ್ರೀತಿಸುತ್ತಾರೆ ಎಂದು ನಾವು ನೀವೆಲ್ಲ ಅಂದುಕೊಂಡಿದ್ದೇವೆ. ಆದರೆ, ಪ್ರಾಣಿಯು ಮನುಷ್ಯರನ್ನು ಪ್ರೀತಿಸಿದಾಗ ಅದಕ್ಕೆ ಯಾವುದೇ ಮಿತಿಯೇ ಇರುವುದಿಲ್ಲ. ದೇವಘರ್ ಜಿಲ್ಲೆಯ ಬ್ರಾಮ್ಸೋಲಿ ಗ್ರಾಮದಲ್ಲಿ ಇದೇ ರೀತಿಯ ದೃಶ್ಯ ಕಂಡು ಬಂದಿದೆ.
ವಾಸ್ತವವಾಗಿ ಬ್ರಾಮ್ಸೋಲಿಯ ನಿವಾಸಿ ಮುನ್ನಾ ಸಿಂಗ್ ಇದ್ದಕ್ಕಿದ್ದಂತೆ ನಿಧನರಾಗಿದ್ದರು. ಅವರನ್ನು ನೋಡಲು ಇಡೀ ಗ್ರಾಮದ ಜನರು ಅವರ ಮನೆಗೆ ಧಾವಿಸಿದ್ದರು. ಮಾಜಿ ರಾಜ್ಯ ಸಚಿವ ಮತ್ತು ಮಾಜಿ ಶಾಸಕ ರಣಧೀರ್ ಸಿಂಗ್ ಕೂಡ ಮುನ್ನಾ ಸಿಂಗ್ ಅವರ ಮೃತ ದೇಹದ ಅಂತಿಮ ದರ್ಶನಕ್ಕೆ ಬಂದಿದ್ದರು.
ವಿಡಿಯೋ ವೈರಲ್: ಈ ಸಂದರ್ಭದಲ್ಲಿ ಮಂಗವೊಂದು ಮುನ್ನಾ ಸಿಂಗ್ ಅವರ ಮೃತ ದೇಹವನ್ನು ನೋಡಲು ಇದ್ದಕ್ಕಿದ್ದಂತೆ ಅಲ್ಲಿಗೆ ಬಂದಿತ್ತು. ಮೃತ ವ್ಯಕ್ತಿ ಪಾರ್ಥಿವ ಶರೀರದ ಮುಂದೆ ಮಂಗ ಅತ್ಯಂತ ಭಾವನಾತ್ಮಕವಾಗಿ ನಡೆದುಕೊಂಡ ದೃಶ್ಯ ಎಲ್ಲರನ್ನು ಒಂದು ಕ್ಷಣ ಅಚ್ಚರಿಗೆ ದೂಡಿದ್ದಂತೂ ಸುಳ್ಳಲ್ಲ. ಹೀಗೆ ಬಂದ ಮಂಗ ಅಲ್ಲಿ ಬಹಳ ಹೊತ್ತು ಕುಳಿತಿತ್ತು. ಮೃತ ಮುನ್ನಾ ಸಿಂಗ್ ಅವರನ್ನು ನೋಡಲು ಲಂಗೂರ್( ಮುಶ್ಯಾ) ಬಂದಾಗ, ಎಲ್ಲಾ ಜನರು ಭಾವುಕರಾಗಿ ಅದರ ವಿಡಿಯೋ ತೆಗೆದು ಕೊಂಡರು. ಈ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ.
ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಟ್ಟಾಗ ಮಂಗ ಬಂದು ಮುನ್ನಾ ಸಿಂಗ್ ಅವರ ಮೃತ ದೇಹವನ್ನು ಚುಂಬಿಸಲು ಪ್ರಾರಂಭಿಸಿತು. ಅಷ್ಟೇ ಅಲ್ಲ ಗಂಟೆಗಟ್ಟಲೆ ಅಲ್ಲಿಯೇ ಕುಳಿತಿತ್ತು. ಮುನ್ನಾ ಸಿಂಗ್ ಬದುಕಿದ್ದಾಗ ಅವರು ತಮ್ಮ ಸುತ್ತಲಿನ ಪ್ರಾಣಿಗಳು ಮತ್ತು ಮಂಗಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದರು, ಅವುಗಳಿಗೆ ಆಹಾರ ನೀಡುತ್ತಿದ್ದರು ಎಂದು ಸ್ಥಳೀಯರು ನೆನಪಿಸಿಕೊಂಡರು.

ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಮಂಗ ಕೂಡಾ ಭಾಗಿಯಾಗಿ ಅಂತಿಮ ನಮನ ಸಲ್ಲಿಸಿತು. ಈ ದೃಶ್ಯ ನೋಡಿದ ಸ್ಥಳೀಯರು ಮಂಗನಿಗೆ ನಮಸ್ಕರಿಸಲು ಪ್ರಾರಂಭಿಸಿದರು. ಅಷ್ಟೇ ಅಲ್ಲ ಇದು ಗ್ರಾಮದ ಜನರ ಚರ್ಚಾ ವಿಷಯವೂ ಆಯಿತು.
ಥಾಣೆ ರೈಲು ಅಪಘಾತ: ಸ್ವಯಂ ಚಾಲಿತ ಬಾಗಿಲು ಅಳವಡಿಸಲು ರೈಲ್ವೆ ಮಂಡಳಿ ಮಹತ್ವದ ನಿರ್ಧಾರ