ETV Bharat / bharat

'ಸುಳ್ಳು ಹಾವು': ಇದರಲ್ಲಿ ವಿಷದ ಪ್ರಮಾಣ ಎಷ್ಟಿರುತ್ತೆ ಗೊತ್ತಾ? - LYING SNAKE

ವ್ಯಗ್ರತೆ ಮತ್ತು ವಿಷದಿಂದಾಗಿ ಹಾವುಗಳ ಸಮೀಪ ಸುಳಿಯಲು ಭಯವಾಗುತ್ತದೆ. ಈ ಹಾವು ಕಂಡಾಗಲೂ ಹಾಗೇ ಅನ್ನಿಸುತ್ತದೆ. ಆದರೆ, ಸತ್ಯ ಮಾತ್ರ ತದ್ವಿರುದ್ಧವಾಗಿದೆ. ಅದೇನು ಎಂಬುದನ್ನು ಮುಂದೆ ಓದಿ..

LYING SNAKE
ಸುಳ್ಳು ಹಾವು (ETV Bharat)
author img

By ETV Bharat Karnataka Team

Published : Feb 5, 2025, 3:06 PM IST

ಬಗಹಾ (ಬಿಹಾರ) : ನೀವು ಹಾವುಗಳನ್ನು ನೋಡೇ ಇರ್ತೀರಾ. ಆದರೆ, ಸುಳ್ಳು ಹಾವನ್ನು ಕಂಡಿದ್ದೀರಾ? ಹಾ.. ಇದೇನಿದು ಸುಳ್ಳು ಹಾವು (झूठा सांप) ಅಂತೀರಾ. ಇದನ್ನು ಓದಿ.

ಹಾವುಗಳಲ್ಲಿ ಹಲವು ವಿಧಗಳಿವೆ. ಅದರಲ್ಲಿ ಒಂದು ಈ 'ಸುಳ್ಳು ಹಾವು'. ಇದು ಎದುರಿಗೆ ಕಂಡಾಗ ಅದರ ಆಕಾರ ಮತ್ತು ವ್ಯಗ್ರತೆಗೆ ಎದೆ ಝಲ್​ ಎನ್ನದೆ ಇರದು. ವಿಪರ್ಯಾಸವೆಂದರೆ, ಇದಕ್ಕೆ ವಿಷವೇ ಇಲ್ಲವಂತೆ. ಹೀಗಾಗಿ, ಇದು ನೋಡಲು ಭಯ ಹುಟ್ಟಿಸಿದರೂ, ಶೂನ್ಯ ವಿಷದಿಂದಾಗಿ ಸುಳ್ಳು ಹಾವು ಎಂದು ಗುರುತಿಸಲ್ಪಟ್ಟಿದೆ.

ಮಾಕ್ ವೈಪರ್ ಎಂದು ಕರೆಯಲ್ಪಡುವ ಈ ಸುಳ್ಳು ಹಾವುಗಳು ಬಿಹಾರದ ವಾಲ್ಮೀಕಿ ಅಭಯಾರಣ್ಯದಲ್ಲಿ ಯಥೇಚ್ಛವಾಗಿವೆ. ಆದರೆ, ಇವುಗಳು ಕಣ್ಣಿಗೆ ಬೀಳುವುದು ವಿರಳ. ಇವುಗಳು ದಟ್ಟವಾದ ಪೊದೆ, ಹುಲ್ಲುಗಾವಲಿನಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಹೀಗಾಗಿ, ಕಾಣಲು ಸಿಗುವುದಿಲ್ಲ.

ಕಿತ್ತಳೆ ಬಣ್ಣ, 2 ಅಡಿ ಉದ್ದ : ಈ ಹಾವು ಇತರ ವೈಪರ್ ಹಾವುಗಳಂತೆಯೇ ಕಾಣುತ್ತವೆ. ಚುರುಕಾಗಿದ್ದರೂ, ಇದು ಮಾರಕ ಅಥವಾ ವಿಷಕಾರಿಯಲ್ಲ. ಮಾಕ್ ವೈಪರ್ ಕಿತ್ತಳೆ ಬಣ್ಣದಿಂದ ಕೂಡಿದ ಸುಂದರವಾದ ಹಾವು. ಇದರ ಉದ್ದ 2 ಅಡಿಯವರೆಗೆ ಇರುತ್ತದೆ ಎಂದು ವನ್ಯಜೀವಿ ತಜ್ಞ ವಿ. ಡಿ. ಸಂಜು ಅವರು ಹೇಳುತ್ತಾರೆ.

ಓದಿ: ವಿಶ್ವ ಹಾವು ದಿನ: ಸರ್ಪಗಳ ಬಗ್ಗೆ ನೀವು ತಿಳಿಯಲೇಬೇಕಾದ ಹಲವು ಸಂಗತಿಗಳು ಇಲ್ಲಿವೆ! - World Snake Day 2024

ಮಾಕ್ ವೈಪರ್​ ಹಾವುಗಳು ಕಾಡಿನಿಂದ ಹೊರಗೆ ಬರುವುದೇ ಅಪರೂಪ. ವಾಲ್ಮೀಕಿ ಅಭಯಾರಣ್ಯದಲ್ಲಿ ಹಲವು ವಿಧದ ವೈಪರ್ ಹಾವುಗಳು ಕಂಡುಬರುತ್ತವೆ. ಇವುಗಳಲ್ಲಿ ರಸ್ಸೆಲ್ಸ್ ವೈಪರ್, ಮೂಗು ಕೊಂಬಿನ ವೈಪರ್, ಪಿಟ್ ವೈಪರ್ ಸೇರಿದಂತೆ ಹಲವು ಸರೀಸೃಪಗಳಿವೆ. ಇವು ಅತ್ಯಂತ ವಿಷಕಾರಿಯೂ ಹೌದು.

ಸುಳ್ಳು ಹಾವು ಅಂತ ಕರೆಯೋದ್ಯಾಕೆ? ಈ ಜಾತಿಯ ಹಾವುಗಳು ಏಷ್ಯಾದಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ. ಬಿಹಾರದ ವಾಲ್ಮೀಕಿ ಹುಲಿ ಅಭಯಾರಣ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. ಇವು ಜನರಿಗೆ ವಿರಳವಾಗಿ ಗೋಚರಿಸುತ್ತವೆ. ಇದರ ವಿಶೇಷತೆಯೆಂದರೆ ಮೋಸಗೊಳಿಸುವುದು. ಅಂದರೆ, ಇತರ ವಿಷಕಾರಿ ವೈಪರ್​ ಹಾವುಗಳಂತೆ ಅಪಾಯಕಾರಿಯಾಗಿ ದಾಳಿ ಮಾಡುವುದು. ಚುರುಕಾದ ಚಲನೆ ಹೊಂದಿದೆ.

ಇದರ ಬುಸುಗುಟ್ಟುವಿಕೆಯು ಭಯ ಹುಟ್ಟಿಸುತ್ತದೆ. ಇದು ಅತಿಯಾದ ವಿಷಕಾರಿ ಎಂದು ಗೋಚರಿಸಿದರೂ, ಸತ್ಯವು ಮಾತ್ರ ತದ್ವಿರುದ್ಧವಾಗಿದೆ. ಇದು ವಿಷಪೂರಿತ ಹಾವು ಅಲ್ಲ. ಅವುಗಳ ತಲೆಯ ಮೇಲ್ಭಾಗದಲ್ಲಿ ವಿಶಿಷ್ಟವಾದ Y ಆಕಾರದ ಮಾದರಿ ಹೊಂದಿರುತ್ತವೆ. ಇವುಗಳು ತಮ್ಮ ಆತ್ಮರಕ್ಷಣೆಗಾಗಿ ಅತ್ಯಂತ ವಿಷಕಾರಿ ಹಾವುಗಳಂತೆ ವರ್ತಿಸುತ್ತವೆ. ಇವುಗಳಲ್ಲಿ ವಿಷವು ಶೂನ್ಯ ಪ್ರಮಾಣದಲ್ಲಿರುತ್ತದೆ. ಒಂದು ವೇಳೆ ಕಚ್ಚಿದಲ್ಲಿ ಯಾವುದೇ ಪ್ರಾಣಿ, ಮಾನವನಿಗೆ ಜೀವ ಹಾನಿ ಉಂಟಾಗದು ಎಂದು ನೇಚರ್ ಎನ್ವಿರಾನ್​ಮೆಂಟ್ ವೈಲ್ಡ್‌ಲೈಫ್ ಸೊಸೈಟಿಯ (NEWS) ಯೋಜನಾ ವ್ಯವಸ್ಥಾಪಕ ಅಭಿಷೇಕ್ ಅವರು ಮಾಹಿತಿ ನೀಡಿದ್ದಾರೆ.

ಬಿಹಾರದ ವಾಲ್ಮೀಕಿ ಹುಲಿ ಅಭಯಾರಣ್ಯದಲ್ಲಿ ಸುಳ್ಳು ಮತ್ತು ನಕಲಿ ಮಾಕ್​ ವೈಪರ್ ಸೇರಿದಂತೆ 45 ಜಾತಿಯ ವಿವಿಧ ಹಾವುಗಳು ಇಲ್ಲಿ ವಾಸವಾಗಿವೆ. ಅವುಗಳಲ್ಲಿ ಹಲವು ಅತ್ಯಂತ ವಿಷಕಾರಿ ಮತ್ತು ಅಪಾಯಕಾರಿಯಾಗಿವೆ. ಹಲವು ಅಪಾಯಕಾರಿಯಾಗಿ ಕಂಡರೂ ವಿಷಕಾರಿಯಲ್ಲ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: 'ಹಾವು ಕಡಿತಕ್ಕೊಳಗಾದವರಿಗೆ ಸೂಕ್ತ ಚಿಕಿತ್ಸೆ ಲಭ್ಯವಾಗುವಂತೆ ಮಾಡಿ'; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.