ತಿರುವನಂತಪುರಂ: ಕೇರಳದ ಪಸಿದ್ಧ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಿಂದ ಶನಿವಾರ ಕಾಣೆಯಾಗಿದ್ದ ಚಿನ್ನ ಭಾನುವಾರ ದೇವಾಲಯದ ಸ್ಟ್ರಾಂಗ್ ರೂಮ್‌ನಿಂದ ಸುಮಾರು 40 ಮೀಟರ್ ದೂರದಲ್ಲಿರುವ ಮರಳು ದಂಡೆಯಲ್ಲಿ ಪತ್ತೆಯಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.
ದೇವಾಲಯದ ಗುಮ್ಮಟದ ಚಿನ್ನದ ಲೇಪನಕ್ಕಾಗಿ ಭಕ್ತರು ದಾನ ಮಾಡಿದ್ದ 13 ಪವನ್ಸ್ ಬಂಗಾರ ದೇವಸ್ಥಾನದಿಂದ ನಾಪತ್ತೆಯಾಗಿತ್ತು. ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ನಡೆಸಿದ ಜಂಟಿ ತಪಾಸಣೆಯ ಸಮಯದಲ್ಲಿ ಚಿನ್ನ ಪತ್ತೆಯಾಗಿದೆ. "ಕಳೆದುಹೋದ ಎಲ್ಲಾ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ತಿರುವನಂತಪುರಂ ಡಿಸಿಪಿ ನಾಗುಲ್ ರಾಜೇಂದ್ರ ದೇಶಮುಖ್ ಹೇಳಿದರು. ಜೊತೆಗೆ ಆರಂಭಿಕ ತನಿಖೆಯಲ್ಲಿ ಯಾವುದೇ ಕಳ್ಳತನದ ಪ್ರಯತ್ನ ನಡೆದಿಲ್ಲ ಎಂದಿದ್ದಾರೆ.
ಮೇ 10 ರಂದು ಲಾಕರ್ ತೆರೆದಾಗ ದೇವಸ್ಥಾನದ ಅಧಿಕಾರಿಗಳು ಚಿನ್ನ ಕಾಣೆಯಾಗಿರುವುದನ್ನು ಕಂಡುಕೊಂಡಿದ್ದರು. ಆಗ ಫೋರ್ಟ್ ಪೊಲೀಸರಿಗೆ ಔಪಚಾರಿಕ ದೂರು ನೀಡಲಾಗಿತ್ತು. ಆದಾಗ್ಯೂ, ಚಿನ್ನ ಕಳೆದಹೋದ ಸಮಯ ಸ್ಪಷ್ಟವಾಗಿಲ್ಲ. "ಮೇ 7 ಅಥವಾ 10 ರಂದು ಚಿನ್ನ ಕಳೆದುಹೋಗಿದೆಯೇ ಎಂದು ಗುರುತಿಸಲು ಸಾಧ್ಯವಿಲ್ಲ" ಎಂದು ಡಿಸಿಪಿ ಹೇಳಿದರು.
ಚಿನ್ನ ಯಾರ ಕೈಯಿಂದ ಕಳೆದುಹೋಗಿದೆಯೇ ಅಥವಾ ಕೈಬಿಡಲಾಗಿದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಚಿನ್ನ ಕಣ್ಮರೆಯ ನಿಖರವಾದ ಸಂದರ್ಭಗಳನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ತಿಳಿಸಿದರು.
ಇದನ್ನೂ ಓದಿ: ತುಮಕೂರು: ಸೋಮೇಶ್ವರ ದೇಗುಲದಲ್ಲಿ ಭಾರತೀಯ ಸೈನಿಕರ ಶ್ರೇಯಸ್ಸಿಗೆ ವಿಶೇಷ ಗಣ ಹೋಮ