ರಾಮೋಜಿ ಫಿಲಂ ಸಿಟಿ, ಹೈದರಾಬಾದ್: ವಿವಿಧ ದೇಶಗಳ 108 ವಿಶ್ವ ಸುಂದರಿ ಸ್ಪರ್ಧಾಳುಗಳು ಇಂದು ಫಿಲ್ಮಂ ಸಿಟಿಗೆ ಭೇಟಿ ನೀಡಿದರು. ಫಿಲಂ ಸಿಟಿಯ ಪ್ರವೇಶದ್ವಾರದಲ್ಲಿರುವ ರಾಮೋಜಿ ಫಿಲಂ ಸಿಟಿಯ ಫಲಕದ ಕೆಳಗೆ ಸುಂದರಿಯರ ಗುಂಪು ಫೋಟೋಗೆ ಪೋಸ್ ನೀಡಿತು. ರಾಮೋಜಿ ಫಿಲಂ ಸಿಟಿಯ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ವಿದೇಶಿ ಮಹಿಳೆಯರಿಗೆ ಸಾಂಪ್ರದಾಯಿಕ ಸ್ವಾಗತ ಕೋರಿದರು.
ಸಾಂಪ್ರದಾಯಿಕ ತೆಲುಗು ಪದ್ಧತಿಯಲ್ಲಿ ಅವರೆಲ್ಲರಿಗೂ ಶ್ರೀಗಂಧವನ್ನು ಹಚ್ಚಿ ನೀರನ್ನು ಸಿಂಪಡಿಸುವ ಮೂಲಕ ಚಿತ್ರನಗರಿಗೆ ಆಹ್ವಾನಿಸಲಾಯಿತು.
ಚಿತ್ರನಗರಿ ಪ್ರವೇಶಿಸುತ್ತಿದ್ದಂತೆ ವಿದೇಶಿ ಚಲುವೆಯರು ಫಿಲಂ ಸಿಟಿಯ ಸೌಂದರ್ಯಕ್ಕೆ ಮಾರು ಹೋದರು. ಕಣ್ಮನ ಸೆಳೆಯುವ ವಾಸ್ತುಶಿಲ್ಪ ಮತ್ತು ನೈಸರ್ಗಿಕ ಸೌಂದರ್ಯದ ಸ್ವರ್ಗವಾದ ರಾಮೋಜಿ ಫಿಲಂ ಸಿಟಿ ಇಂದು ಝಗಮಗಿಸುತ್ತಿತ್ತು. ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ರಾಮೋಜಿ ಫಿಲಂ ಸಿಟಿ, ವಿಶ್ವ ಸುಂದರಿ ಸ್ಪರ್ಧಿಗಳ ಭೇಟಿಯಿಂದಾಗಿ ಮಿರ ಮಿರ ಮಿಂಚುತ್ತಿತ್ತು.

ಟೀ ಪಾರ್ಟಿ: ಅತಿಥಿಗಳು ವಿಶೇಷ ಬಸ್‌ಗಳಲ್ಲಿ ರಾಮೋಜಿ ಫಿಲಂ ಸಿಟಿಯೊಳಗೆ ಆಗಮಿಸಿ ಪ್ರವಾಸಿ ನಗರದ ಸೌಂದರ್ಯಕ್ಕೆ ಮಾರುಹೋದರು. ತಾರಾ ಮತ್ತು ಸಿತಾರಾ ಹೋಟೆಲ್‌ಗಳು, ಏಂಜಲ್ ಫೌಂಟೇನ್, ಹವಾ ಮಹಲ್, ಡ್ಯಾನ್ಸರ್ ಗಾರ್ಡನ್ ಮತ್ತು ಪಾಮ್ ಸ್ಟ್ರೀಟ್‌ಗಳ ಸೌಂದರ್ಯವನ್ನು ವೀಕ್ಷಿಸಿದರು. ನಂತರ ಅವರು ಪಿಎಸ್‌ಟಿ ಕನ್ವೆನ್ಷನ್ ಹಾಲ್ ತಲುಪಿದರು. ಪಿಎಸ್‌ಟಿ ಕನ್ವೆನ್ಷನ್ ಹಾಲ್‌ನಲ್ಲಿ ಬ್ಯಾಂಡ್‌ನೊಂದಿಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಫಿಲ್ಮ್ ಸಿಟಿ ಪ್ರತಿನಿಧಿಗಳು ಚಲುವೆಯರಿಗಾಗಿ ಟೀ ಪಾರ್ಟಿ ಆಯೋಜನೆ ಮಾಡುವ ಮೂಲಕ ಸತ್ಕರಿಸಿದರು.
ಬಾಹುಬಲಿ ಸೆಟ್: ಪ್ರಿನ್ಸ್ ಸ್ಟ್ರೀಟ್ ಕನ್ವೆನ್ಷನ್ ಹಾಲ್ ನಿಂದ ವಿಶೇಷ ಬಸ್ ಗಳಲ್ಲಿ ಬಾಹುಬಲಿ ಸೆಟ್ ಗೆ ಆಗಮಿಸಿದ ಲೋಕ ಸುಂದರಿಯರು, ಮಾಹಿಷ್ಮತಿ ಸಾಮ್ರಾಜ್ಯದ ಸೌಂದರ್ಯವನ್ನು ವೀಕ್ಷಿಸಿದರು. ಬಾಹುಬಲಿ ಚಿತ್ರಕ್ಕಾಗಿ ರಚಿಸಲಾದ ವಿವಿಧ ರೀತಿಯ ಸೆಟ್ಟಿಂಗ್‌ಗಳ ಬಗ್ಗೆ ತಿಳಿದುಕೊಳ್ಳಲು ಅವರು ತುಂಬಾ ಕುತೂಹಲ ಭರಿತರಾಗಿದ್ದು ಗಮನ ಸೆಳೆಯಿತು. ಅವರು ಅಲ್ಲಿ ಗ್ರೂಪ್ ಫೋಟೋ ತೆಗೆದುಕೊಂಡು ಶಾಪಿಂಗ್‌ಗೆ ಹೋದರು. ಬಾಹುಬಲಿ ಚಿತ್ರದ ಹಿನ್ನೆಲೆಯಲ್ಲಿ ನಡೆದ ನೃತ್ಯ ಪ್ರದರ್ಶನ ಅವರನ್ನು ಇನ್ನಷ್ಟು ಮಂತ್ರಮುಗ್ದಗೊಳಿಸಿತು.
ಇದನ್ನು ಓದಿ:ಚಿರಂಜೀವಿ 'ಮೆಗಾ 157' ಚಿತ್ರಕ್ಕೆ ನಯನತಾರಾ ಎಂಟ್ರಿ: 3ನೇ ಬಾರಿ ಸ್ಕ್ರೀನ್ ಶೇರ್; ರಿಲೀಸ್ ಡೇಟ್ ಅನೌನ್ಸ್
ವಿಶ್ವಸುಂದರಿ 2025: ಚಾರ್ಮಿನಾರ್ ಸೇರಿ ಹೈದರಾಬಾದ್ನ ಐತಿಹಾಸಿಕ ಸ್ಥಳಗಳಲ್ಲಿ ಸ್ಪರ್ಧಿಗಳು