ಲಖನೌ, ಉತ್ತರಪ್ರದೇಶ: ಇಲ್ಲಿನ ಲೋಕಬಂಧು ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಸೋಮವಾರ ರಾತ್ರಿ 9.30ರ ಸುಮಾರಿಗೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಏಕಾಏಕಿ ಬೆಂಕಿಯ ಜ್ವಾಲೆ ಏರುತ್ತಿದ್ದಂತೆ ಸ್ಥಳದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ಭೀತಿಯಿಂದ ಚೀರಾಟದ ದೃಶ್ಯಗಳು ಕಂಡು ಬಂದವು.
ಆಸ್ಪತ್ರೆ ಆವರಣ ಹೊಗೆಯಿಂದ ತುಂಬಿತ್ತು. ಎರಡನೇ ಮಹಡಿಯಲ್ಲಿ ಬೆಂಕಿ ಸ್ವಲ್ಪ ಹೊತ್ತಿನಲ್ಲೇ ಭೀಕರ ಸ್ವರೂಪ ಪಡೆಯಿತು. ವೇಗವಾಗಿ ಬೆಂಕಿ ಹರಡಿಕೊಂಡಿತು. ಹೀಗಾಗಿ ಆಸ್ಪತ್ರೆಯಿಂದ ವೈದ್ಯರು ಮತ್ತು ಇತರ ಸಿಬ್ಬಂದಿ ಜೀವ ಉಳಿಸಿಕೊಳ್ಳಲು ತಕ್ಷಣವೇ ಹೊರಗೆ ಓಡಿದರು. ರೋಗಿಗಳನ್ನು ಸ್ಟ್ರೆಚರ್‌ಗಳಲ್ಲಿ ಹೊರಗೆ ಕರೆದೊಯ್ಯಲಾಯಿತು. ಇದೇ ವೇಳೆ, ಅನೇಕ ಕುಟುಂಬ ಸದಸ್ಯರು ರೋಗಿಗಳನ್ನು ತಮ್ಮ ಮಡಿಲಲ್ಲಿ ಹೊತ್ತುಕೊಂಡು ಓಡಿ ಹೋಗುತ್ತಿರುವ ದೃಶ್ಯ ಸಾಮಾನ್ಯ ಎಂಬಂತೆ ಕಂಡು ಬಂತು.
#WATCH | लखनऊ: लोकबंधु अस्पताल में लगी आग पर डीएम विशाक जी अय्यर ने कहा, " आग लगने की सूचना जैसे ही प्राप्त हुई। फायर और बचाव टीम मौके पर पहुंचकर बचाव अभियान चलाया गया। सभी मरीज को सुरक्षित बाहर निकाला गया और हमारे तीन जगह रेफर किया गया। वर्तमान में दमकल टीम द्वारा आग को कंट्रोल… pic.twitter.com/eYIvq8VpB8
— ANI_HindiNews (@AHindinews) April 14, 2025
ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಆಸ್ಪತ್ರೆಯಲ್ಲಿ ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ 200ಕ್ಕೂ ಹೆಚ್ಚು ರೋಗಿಗಳು ದಾಖಲಾಗಿದ್ದು, ಅವರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ದೌಡಾಯಿಸಿದ ಡಿಸಿಎಂ, ಅಧಿಕಾರಿಗಳು: ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್, ಸಿಎಂಒ ನರೇಂದ್ರ ಬಹದ್ದೂರ್ ಸಿಂಗ್, ಪೊಲೀಸ್ ಆಯುಕ್ತ ಅಮರೇಂದ್ರ ಸಿಂಗ್ ಸಿಂಗರ್, ವಿಭಾಗೀಯ ಆಯುಕ್ತ ರೋಷನ್ ಜೇಕಬ್, ಜಿಲ್ಲಾಧಿಕಾರಿ ವಿಶಾಖ್ ರಾತ್ರಿಯೇ ಘಟನಾ ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ತಹ ಬದಿಗೆ ತರುವ ಪ್ರಯತ್ನ ಮಾಡಿದರು.
#WATCH | लखनऊ: लोकबंधु अस्पताल में आग लगने के बाद एसडीआरएफ की टीम मौके पर पहुंची।
— ANI_HindiNews (@AHindinews) April 14, 2025
उपमुख्यमंत्री ब्रजेश पाठक के अनुसार, करीब 200 मरीजों को सुरक्षित रूप से नजदीकी अस्पतालों में पहुंचाया गया है और किसी के घायल होने या हताहत होने की खबर नहीं है। pic.twitter.com/1cbB2MrdEU
ರಾತ್ರಿಯೇ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದ ಯೋಗಿ ಆದಿತ್ಯನಾಥ: ಸಿಎಂ ಯೋಗಿ ಆದಿತ್ಯನಾಥ್ ಕೂಡ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ತುರ್ತು ರಕ್ಷಣಾ ಕಾರ್ಯಾಚರಣೆ ಹಾಗೂ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ಕೂಡಾ ಕೊಟ್ಟರು.
#WATCH | लखनऊ: लोकबंधु अस्पताल में आग लगने के बाद एसडीआरएफ की टीम मौके पर पहुंची।
— ANI_HindiNews (@AHindinews) April 14, 2025
उपमुख्यमंत्री ब्रजेश पाठक के अनुसार, करीब 200 मरीजों को सुरक्षित रूप से नजदीकी अस्पतालों में पहुंचाया गया है और किसी के घायल होने या हताहत होने की खबर नहीं है। pic.twitter.com/1cbB2MrdEU
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಶಂಕೆ: ಆಸ್ಪತ್ರೆಯ ಎರಡನೇ ಮಹಡಿಯ ಫಾಲ್ಸ್ ಸೀಲಿಂಗ್ ನಿಂದ ಇದ್ದಕ್ಕಿದ್ದಂತೆ ಹೊಗೆ ಬರಲಾರಂಭಿಸಿತು ಎಂದು ಲೋಕಬಂಧು ಆಸ್ಪತ್ರೆಯ ಸಿಎಂಎಸ್ ಡಾ.ರಾಜೀವ್ ದೀಕ್ಷಿತ್ ಹೇಳಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಫಾಲ್ಸ್ ಸೀಲಿಂಗ್‌ಗೆ ಬೆಂಕಿ ತಗುಲಿ ಆಸ್ಪತ್ರೆ ಆವರಣದ ತುಂಬೆಲ್ಲಾ ಹೊಗೆ ಹಬ್ಬಿದೆ ಎಂದು ಊಹಿಸಲಾಗಿದೆ.
#WATCH | लखनऊ: लोकबंधु अस्पताल में लगी आग पर लखनऊ CFO मंगेश कुमार ने कहा, " हमें रात 9.44 बजे सूचना मिली और सूचना मिलने पर हमारी सारी टीम मौके पर पहुंची...हमारी टीम ने सभी को सुरक्षित निकाला है....आग लगने का कारण अभी नहीं पता चला है.." pic.twitter.com/DiRx9NEsVX
— ANI_HindiNews (@AHindinews) April 14, 2025
ಆಸ್ಪತ್ರೆಯಲ್ಲಿದ್ದ ಎಲ್ಲಾ ರೋಗಿಗಳು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ. ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ. ರೋಗಿಗಳನ್ನು ಬಲರಾಂಪುರ ಮತ್ತು ಸಿವಿಲ್ ಆಸ್ಪತ್ರೆಗೆ ಉಲ್ಲೇಖಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
#WATCH लखनऊ (यूपी): लोकबंधु अस्पताल में आग लगने के बाद मरीज को लोकबंधु अस्पताल से सिविल अस्पताल लाया गया।
— ANI_HindiNews (@AHindinews) April 14, 2025
ट्रॉमा सेंटर प्रभारी डॉ. विपिन मिश्रा ने कहा, " 5 मरीज आ गए हैं। सभी मरीज की हालत स्थिर है। सभी विभाग के डॉक्टर लगे हुए हैं...' pic.twitter.com/g8Lmlrqsht
ಎಲ್ಲ ರೋಗಿಗಳ ಸುರಕ್ಷಿತ ಸ್ಥಳಾಂತರ: ಎಲ್ಲಾ ರೋಗಿಗಳನ್ನು ಸುರಕ್ಷಿತವಾಗಿ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ತಿಳಿಸಿದ್ದಾರೆ. ಸುಮಾರು 200 ರೋಗಿಗಳನ್ನು ರಕ್ಷಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ರೋಗಿಗಳಿಲ್ಲ. ಕುಟುಂಬ ಸದಸ್ಯರನ್ನು ಸಂಪರ್ಕಿಸಲಾಗುತ್ತಿದೆ. ದೇವರ ದಯೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಏತನ್ಮಧ್ಯೆ, ರೋಗಿಗಳನ್ನು ಸುರಕ್ಷಿತವಾಗಿ ಆಸ್ಪತ್ರೆಯಿಂದ ಸ್ಥಳಾಂತರಿಸಲಾಗಿದೆ ಎಂದು ಲಕ್ನೋ ಆಯುಕ್ತ ಅಮರೇಂದ್ರ ಸಿಂಗ್ ಸೆಂಗಾರ್ ಹೇಳಿದ್ದಾರೆ. ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
#WATCH लखनऊ (यूपी): लोकबंधु अस्पताल में आग लगने के बाद मरीज को लोकबंधु अस्पताल से सिविल अस्पताल लाया गया।
— ANI_HindiNews (@AHindinews) April 14, 2025
सिविल अस्पताल निदेशक राजेश श्रीवास्तव ने कहा, " करीब 24 मरीज आए हुए हैं। जो भर्ती हैं उन सभी की हालत स्थिर है। सभी का इलाज शुरू है। दो गंभीर थे उन्हें icu भर्ती कराया गया है।… https://t.co/eJs9L6jyfj pic.twitter.com/UZr5ptUeeD
ದಾಖಲಾಗಿದ್ದ ಎಲ್ಲ ರೋಗಿಗಳನ್ನು ಬಲರಾಂಪುರ, ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು 102,108 ಆಂಬ್ಯುಲೆನ್ಸ್‌ಗಳ ಸಹಾಯದಿಂದ ಕೆಜಿಎಂಸಿ ಆಸ್ಪತ್ರೆಗೆ ರೆಫರ್ ಮಾಡಲಾಗಿದೆ. ಮಾಹಿತಿ ಪ್ರಕಾರ ಆಸ್ಪತ್ರೆಯ ಎರಡನೇ ಮಹಡಿಯಲ್ಲಿರುವ ಮಹಿಳಾ ಔಷಧ ವಿಭಾಗದ ಪಕ್ಕದ ಮುಚ್ಚಿದ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ:ಪತಿ ತರಕಾರಿ ತರಲಿಲ್ಲವೆಂದು ನೊಂದು ಮಹಿಳೆ ಆತ್ಮಹತ್ಯೆ
‘ಚಲಿಸುತ್ತಿದ್ದ ಕಾರಿನ ಮೇಲೆ ಬಾಂಬ್ ದಾಳಿ! ಉದ್ಯಮಿ ಸೇರಿ ಇಬ್ಬರು ಗಂಭೀರ