ETV Bharat / bharat

ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇನಲ್ಲಿ ಕಾರು-ಬಸ್ ಡಿಕ್ಕಿ: 7 ​​ಜನ ಸಾವು, 45 ಮಂದಿಗೆ ಗಾಯ - UP Road Accident

author img

By ETV Bharat Karnataka Team

Published : Aug 4, 2024, 10:17 AM IST

ಉತ್ತರ ಪ್ರದೇಶದ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ನಲ್ಲಿ ಕಾರು ಮತ್ತು ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಡಿಕ್ಕಿ ಸಂಭವಿಸಿ ಏಳು ಮಂದಿ ಸಾವನ್ನಪ್ಪಿದ್ದಾರೆ.

UP ETAWAH ACCIDENT  CAR SLEEPER BUS COLLISION
ಅಪಘಾತಕ್ಕೀಡಾಗಿ ನಜ್ಜುಗುಜ್ಜಾದ ಬಸ್‌ (ETV Bharat)

ಲಖನೌ(ಉತ್ತರ ಪ್ರದೇಶ): ಇಲ್ಲಿನ ಇಟಾವಾ ಪ್ರದೇಶದ ಸಮೀಪ ಹಾದು ಹೋಗುವ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇನಲ್ಲಿ ಶನಿವಾರ ತಡರಾತ್ರಿ ಕಾರು ಮತ್ತು ಸ್ಲೀಪರ್ ಬಸ್ ನಡುವೆ ಅಪಘಾತ ಸಂಭವಿಸಿದೆ. ಅವಘಡದಲ್ಲಿ 7 ಜನರು ಸಾವನ್ನಪ್ಪಿದ್ದು, 45 ಜನರು ಗಾಯಗೊಂಡಿದ್ದಾರೆ.

ಇಟಾವಾ ಎಸ್‌ಎಸ್‌ಪಿ ಸಂಜಯ್ ಕುಮಾರ್ ಪ್ರತಿಕ್ರಿಯಿಸಿ, ''ಇಟಾವಾದಲ್ಲಿ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚರಿಸುತ್ತಿದ್ದ ಕಾರು ಸ್ಲೀಪರ್ ಬಸ್‌ಗೆ ಡಿಕ್ಕಿ ಹೊಡೆದಿದೆ. ಕಾರು ಎಕ್ಸ್‌ಪ್ರೆಸ್ ವೇಯಿಂದ ಕೆಳಗೆ ಬಿದ್ದಿದೆ. ಸ್ಲೀಪರ್ ಬಸ್‌ಗೂ ಹಾನಿಯಾಗಿದೆ. ಕಾರಿನಲ್ಲಿದ್ದ ಮೂವರು ಹಾಗೂ ಬಸ್ಸಿನಲ್ಲಿದ್ದ ನಾಲ್ವರು ಸೇರಿ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ. ಎರಡೂ ವಾಹನಗಳ ಒಟ್ಟು 45 ಮಂದಿ ಗಾಯಗೊಂಡಿದ್ದು, ಸೈಫಾಯಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ'' ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಕೋರ್ಟ್‌ ಹಾಲ್‌ ಒಳಗೆ ಅಳಿಯನನ್ನೇ ಗುಂಡಿಕ್ಕಿ ಕೊಂದ ಮಾವ! - AIG father in law shot son in law

ETV Bharat Logo

Copyright © 2024 Ushodaya Enterprises Pvt. Ltd., All Rights Reserved.