ETV Bharat / bharat

ಉರ್ದುವಿನೊಂದಿಗೆ ಸ್ನೇಹ ಬೆಳೆಸೋಣ, ಭಾಷೆ ವಿಭಜನೆಗೆ ಕಾರಣವಾಗದಿರಲಿ: ಸುಪ್ರೀಂ ಕೋರ್ಟ್ - SUPREME COURT ON URDU

ಪುರಸಭೆಯ ನಾಮಫಲಕದಲ್ಲಿ ಉರ್ದು ಬಳಸಿದ್ದನ್ನು ಪ್ರಶ್ನಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ (IANS)
author img

By ETV Bharat Karnataka Team

Published : April 16, 2025 at 4:56 PM IST

2 Min Read

ನವದೆಹಲಿ: ಮಹಾರಾಷ್ಟ್ರದ ಪಾತೂರ ಪುರಸಭೆಯ ಹೊಸ ಕಟ್ಟಡದ ನಾಮಫಲಕದಲ್ಲಿ ಉರ್ದು ಭಾಷೆಯ ಬಳಕೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ವೈವಿಧ್ಯಮಯ ದೃಷ್ಟಿಕೋನಗಳು ಮತ್ತು ನಂಬಿಕೆಗಳನ್ನು ಹೊಂದಿರುವ ಜನರನ್ನು ಹತ್ತಿರ ತರುವ ವಿಚಾರಗಳ ವಿನಿಮಯಕ್ಕೆ ಭಾಷೆ ಒಂದು ಮಾಧ್ಯಮವಾಗಿದೆ ಮತ್ತು ಅದು ಅವರ ವಿಭಜನೆಗೆ ಕಾರಣವಾಗಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪಾತೂರ ಪುರಸಭೆಯ ಹೊಸ ಕಟ್ಟಡಕ್ಕೆ ಅಳವಡಿಸಲಾಗಿರುವ ಬೋರ್ಡ್​ನಲ್ಲಿ ಮರಾಠಿಯಲ್ಲಿ "ಮುನ್ಸಿಪಲ್ ಕೌನ್ಸಿಲ್, ಪಾತೂರ್" ಎಂದು ಹಾಗೂ ಅದರ ಕೆಳಗೆ ಅದೇ ಹೆಸರನ್ನು ಉರ್ದು ಭಾಷೆಯಲ್ಲಿ ಬರೆಯಲಾಗಿದೆ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು.

ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಕೆ.ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವು ಈ ಪ್ರದೇಶದ ಸ್ಥಳೀಯ ಸಮುದಾಯಕ್ಕೆ ಸೇವೆಗಳನ್ನು ಒದಗಿಸಲು ಮತ್ತು ಅವರ ತಕ್ಷಣದ ದೈನಂದಿನ ಅಗತ್ಯಗಳನ್ನು ಪೂರೈಸಲು ಮುನ್ಸಿಪಲ್ ಕೌನ್ಸಿಲ್ ಇದೆ ಎಂದು ಹೇಳಿದರು.

ತೀರ್ಪು ಬರೆದ ನ್ಯಾಯಮೂರ್ತಿ ಧುಲಿಯಾ, ಮುನ್ಸಿಪಲ್ ಕೌನ್ಸಿಲ್ ವ್ಯಾಪ್ತಿಯಲ್ಲಿ ವಾಸಿಸುವ ಜನರು ಅಥವಾ ಜನರ ಗುಂಪು ಉರ್ದು ತಿಳಿದಿದ್ದರೆ, ಅಧಿಕೃತ ಭಾಷೆಯಾಗಿರುವ ಮರಾಠಿ ಜೊತೆಗೆ ಉರ್ದು ಬಳಸಿದರೆ ಯಾವುದೇ ಆಕ್ಷೇಪಣೆ ಇರಬಾರದು ಎಂದು ಹೇಳಿದರು.

"ವೈವಿಧ್ಯಮಯ ದೃಷ್ಟಿಕೋನಗಳು ಮತ್ತು ನಂಬಿಕೆಗಳನ್ನು ಹೊಂದಿರುವ ಜನರನ್ನು ಹತ್ತಿರ ತರುವ ವಿಚಾರಗಳ ವಿನಿಮಯಕ್ಕೆ ಭಾಷೆ ಒಂದು ಮಾಧ್ಯಮವಾಗಿದೆ. ಅದು ಅವರ ವಿಭಜನೆಗೆ ಕಾರಣವಾಗಬಾರದು" ಎಂದು ಹೇಳಿದರು. ಉರ್ದು ಭಾಷೆಯನ್ನು ರಕ್ಷಿಸಬೇಕೆಂದು ರಾಜಧಾನಿಯಲ್ಲಿ ನಡೆದ ಸೆಮಿನಾರ್​ ಒಂದರಲ್ಲಿ ಮಾತನಾಡುವಾಗ ಮಾಜಿ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರು ಹೇಳಿದ್ದ ಮಾತನ್ನು ನ್ಯಾಯಮೂರ್ತಿ ಧುಲಿಯಾ ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

ನ್ಯಾಯಮೂರ್ತಿ ಧುಲಿಯಾ, "ನಮ್ಮ ತಪ್ಪು ಕಲ್ಪನೆಗಳು, ಭಾಷೆಯ ವಿರುದ್ಧದ ನಮ್ಮ ಪೂರ್ವಾಗ್ರಹಗಳನ್ನು ನಮ್ಮ ರಾಷ್ಟ್ರದ ಈ ದೊಡ್ಡ ವೈವಿಧ್ಯತೆಯಾದ ವಾಸ್ತವದೊಂದಿಗೆ ಧೈರ್ಯದಿಂದ ಮತ್ತು ಸತ್ಯವಾಗಿ ಪರೀಕ್ಷಿಸಬೇಕಾಗಿದೆ: ನಮ್ಮ ಶಕ್ತಿ ಎಂದಿಗೂ ನಮ್ಮ ದೌರ್ಬಲ್ಯವಾಗಲು ಸಾಧ್ಯವಿಲ್ಲ. ನಾವು ಉರ್ದು ಮತ್ತು ಪ್ರತಿಯೊಂದು ಭಾಷೆಯೊಂದಿಗೆ ಸ್ನೇಹ ಬೆಳೆಸೋಣ" ಎಂದರು.

ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಾತೂರ್ ಮುನ್ಸಿಪಲ್ ಕೌನ್ಸಿಲ್​ನ ಹೊಸ ಕಟ್ಟಡದ ನಾಮಫಲಕದಲ್ಲಿ ಉರ್ದು ಬಳಸಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ವರ್ಷಾತಾಯಿ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಪುರಸಭೆಯ ಕೆಲಸಗಳು ಮರಾಠಿಯಲ್ಲಿಯೇ ನಡೆಯಬೇಕು ಹಾಗೂ ಇದಕ್ಕಾಗಿ ಉರ್ದು ಭಾಷೆಯನ್ನು ಬಳಸುವಂತಿಲ್ಲ. ಅಲ್ಲದೆ ಪುರಸಭೆಯ ನಾಮಫಲಕದಲ್ಲಿಯೂ ಉರ್ದು ಬಳಸುವಂತಿಲ್ಲ ಎಂದು ಮುನ್ಸಿಪಲ್ ಕೌನ್ಸಿಲ್​ನ ಮಾಜಿ ಸದಸ್ಯರಾಗಿರುವ ವರ್ಷಾತಾಯಿ ಅರ್ಜಿಯಲ್ಲಿ ವಾದಿಸಿದ್ದರು.

ಇದನ್ನೂ ಓದಿ: ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ - THE NEXT CJI

ETV Bharat Logo

Copyright © 2025 Ushodaya Enterprises Pvt. Ltd., All Rights Reserved.