ETV Bharat / bharat

ಕೇದಾರನಾಥ್ ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್: ತಪ್ಪಿದ ಅನಾಹುತ - HELICOPTER EMERGENCY LANDING

ಕೇದಾರನಾಥ್ ಯಾತ್ರೆ ಮಾರ್ಗದಲ್ಲಿ ಹೆದ್ದಾರಿಯಲ್ಲಿ ಹೆಲಿಕಾಪ್ಟ್​ರ್​ ತುರ್ತು ಲ್ಯಾಂಡಿಂಗ್ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್
ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ (ETV Bharata)
author img

By ETV Bharat Karnataka Team

Published : June 7, 2025 at 2:30 PM IST

1 Min Read

ಡೆಹರಾಡೂನ್: ಕೇದಾರನಾಥ ಯಾತ್ರೆ ಮಾರ್ಗದಲ್ಲಿ ಮತ್ತೊಮ್ಮೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಪ್ರಯಾಣಿಕರೊಂದಿಗೆ ಸಿರ್ಸಿಯಿಂದ ಹಾರಿದ್ದ ಹೆಲಿಕಾಪ್ಟರ್ ಹೆಲಿಪ್ಯಾಡ್ ಬದಲಿ ರಸ್ತೆಯಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿದ ಕುರಿತು ವರದಿಯಾಗಿಲ್ಲ.

ಈ ಹೆಲಿಕಾಪ್ಟರ್ ಕ್ರಿಸ್ಟಲ್ ಏವಿಯೇಷನ್ ​​ಪ್ರೈವೇಟ್ ಲಿಮಿಟೆಡ್‌ ಸಂಸ್ಥೆಯದ್ದು ಎಂದು ಹೇಳಲಾಗಿದೆ. ಈ ಅಪಘಾತದಲ್ಲಿ ಪೈಲಟ್ ಸೇರಿದಂತೆ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಒಂದು ಕಾರಿಗೆ ಹಾನಿಯಾಗಿದೆ. ಹೆಲಿಕಾಪ್ಟರ್ ಅಪಘಾತದ ನಂತರ ಸ್ಥಳದಲ್ಲಿ ಜನಸಮೂಹ ಜಮಾಯಿಸಿತ್ತು.

ಕಳೆದ ತಿಂಗಳು ಮೇ 8 ರಂದು ಉತ್ತರಕಾಶಿಯಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ಪೈಲಟ್ ಸೇರಿದಂತೆ 6 ಯಾತ್ರಿಕರು ಸಾವನ್ನಪ್ಪಿದ್ದರು. ಏರೋಟ್ರಾನ್ಸ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್‌ನ ಹೆಲಿಕಾಪ್ಟರ್ ಉತ್ತರಕಾಶಿಯ ಗಂಗಾನಿಯಲ್ಲಿ ಅಪಘಾತಕ್ಕೀಡಾಗಿತ್ತು.

ಬಳಿಕ ಕಳೆದ ತಿಂಗಳು ಮೇ 17 ರಂದು ರಿಷಿಕೇಶ್ ಏಮ್ಸ್‌ನ ಪಿನಾಕಲ್ ಕಂಪನಿಯ ಏರ್ ಆಂಬ್ಯುಲೆನ್ಸ್ ಅಪಘಾತಕ್ಕೀಡಾಗಿತ್ತು. ಆದರೆ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ.

ಇದನ್ನೂ ಓದಿ: ತುಮಕೂರಲ್ಲಿ ಬೈಕ್​ಗೆ ಲಾರಿ ಡಿಕ್ಕಿ: ಸ್ಥಳದಲ್ಲೇ ಮೂವರು ಸವಾರರ ದುರ್ಮರಣ

ಇದನ್ನೂ ಓದಿ: ಹೆಲಿಕಾಪ್ಟರ್‌ನಲ್ಲಿ ಚಾರ್‌ಧಾಮ್ ಯಾತ್ರೆ ನೆಪದಲ್ಲಿ ಭಕ್ತರಿಗೆ ವಂಚನೆ; 51 ನಕಲಿ ವೆಬ್‌ಸೈಟ್‌ಗಳು ಬ್ಲಾಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.