ಹೈದರಾಬಾದ್: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಎಲ್ಲ ಅರ್ಹ ಕಾರ್ಮಿಕರಿಗೆ ವರ್ಷಕ್ಕೆ 100 ದಿನಗಳ ಕೆಲಸ ಒದಗಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಾರದರ್ಶಕತೆ ಹೆಚ್ಚಿಸಲು ಮತ್ತು ಅಕ್ರಮಗಳನ್ನು ತಡೆಯಲು ಹಲವಾರು ಸುಧಾರಣೆಗಳನ್ನು ಪರಿಚಯಿಸುತ್ತಿವೆ. ಕಾರ್ಮಿಕರ ಕೂಲಿ ದುರುಪಯೋಗ ತಡೆಯಲು ಬ್ಯಾಂಕ್ ಖಾತೆ ಹಾಗೂ ಅಂಚೆ ಕಚೇರಿ ಖಾತೆ ತೆರೆದು ಫಲಾನುಭವಿಗಳಿಗೆ ನೇರವಾಗಿ ಹಣ ಪಾವತಿಸಲಾಗುತ್ತದೆ. ಆದರೆ, ಒಬ್ಬರಿಗೆ ಎರಡ್ಮೂರು ಖಾತೆಗಳಿರುವುದರಿಂದ ಹಣ ಎಲ್ಲಿ ಜಮೆಯಾಗಿದೆ ಎಂದು ತಿಳಿಯುವುದು ಕಷ್ಟವಾಗಿದೆ. ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ಹೊಸ 'ಜನಮನ್ರೇಗಾ' ಆ್ಯಪ್ ಬಿಡುಗಡೆ ಮಾಡಿದೆ.
'ಜನ್ಮನ್ರೇಗಾ' ಅಪ್ಲಿಕೇಶನ್‌ನ ಪ್ರಯೋಜನಗಳೇನು?: ಉದ್ಯೋಗ ಖಾತ್ರಿ ಸಿಬ್ಬಂದಿ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿರುವ ಮಾಹಿತಿಯನ್ನು ‘ಜನಮನ್ರೇಗಾ’ ಆ್ಯಪ್‌ನ ಸಹಾಯದಿಂದ ಪಡೆದುಕೊಳ್ಳಬಹುದಾಗಿದೆ. ಕಚೇರಿಗಳಿಗೆ ಹೋಗದೇ ಈ ಆ್ಯಪ್ ಮೂಲಕ ಕುಳಿತಲ್ಲೇ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಬಹುದು.
'ಜನ್ಮನ್ರೇಗಾ' ಆಪ್ ಡೌನ್‌ಲೋಡ್ ಮಾಡುವುದು ಹೇಗೆ? :
- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌ಗೆ ಭೇಟಿ ನೀಡಿ ಮತ್ತು ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು 'Janmanrega' ಎಂದು ಟೈಪ್ ಮಾಡಿ.
- ವಿವರಗಳು ಇತರ ಭಾಷೆಗಳ ಜೊತೆಗೆ ಕನ್ನಡದಲ್ಲೂ ಲಭ್ಯವಿದೆ. ಮೊದಲಿಗೆ, ನೀವು ರಾಜ್ಯ, ಜಿಲ್ಲೆ, ಪಂಚಾಯತ್, ಕುಟುಂಬ, ಜಾಬ್ ಕಾರ್ಡ್ ಸಂಖ್ಯೆ ಇತ್ಯಾದಿ ವಿವರಗಳನ್ನು ನಮೂದಿಸಬೇಕು.
- ಈ ಎಲ್ಲ ವಿವರಗಳನ್ನು ನೀಡಿದ ನಂತರ ನೀವು ಉದ್ಯೋಗ ಖಾತ್ರಿ ಯೋಜನೆ ಕಾರ್ಮಿಕರ ಹೆಸರನ್ನು ನೋಡಬಹುದಾಗಿದೆ.
- ಇದರ ಮೇಲೆ ಕ್ಲಿಕ್ ಮಾಡಿದರೆ ಯಾವ ವರ್ಷದಲ್ಲಿ ಎಷ್ಟು ಕೆಲಸ ಮಾಡಿದ್ದೇನೆ. ಹಣವನ್ನು ಠೇವಣಿ ಮಾಡಿದ ಬ್ಯಾಂಕ್ ಖಾತೆಯ ಸಂಪೂರ್ಣ ವಿವರಗಳು ನಿಮ್ಮ ಮುಂದೆ ಕಾಣಿಸಿಕೊಳ್ಳುತ್ತವೆ. ನಗದು ಠೇವಣಿ ಮಾಡದಿದ್ದರೆ ಕಾರಣಗಳನ್ನು ವಿವರಿಸಲಾಗಿರುತ್ತದೆ.
ಇದನ್ನು ಓದಿ: ಹೊಸ ಆಧಾರ್ ಆ್ಯಪ್ ಬಿಡುಗಡೆ ಮಾಡಿದ ಕೇಂದ್ರ; ಇನ್ಮುಂದೆ ಭೌತಿಕ ಕಾರ್ಡ್ ಬೇಕಿಲ್ಲ