ETV Bharat / bharat

ಕರ್ತವ್ಯದಲ್ಲಿ ಶೌರ್ಯ ಮೆರೆದ 1,037 ಪೊಲೀಸ್ ಸಿಬ್ಬಂದಿಗೆ ಪದಕ ಘೋಷಣೆ - Police Medals

author img

By PTI

Published : Aug 14, 2024, 3:58 PM IST

ಕೇಂದ್ರೀಯ, ರಾಜ್ಯ ಪೊಲೀಸ್​​ ಸಿಬ್ಬಂದಿಯ ವಿಶಿಷ್ಠ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ 1,037 ಪೊಲೀಸ್ ಸಿಬ್ಬಂದಿಗೆ ಶೌರ್ಯ ಪದಕಗಳನ್ನು ಬುಧವಾರ ಘೋಷಿಸಿದೆ.

ಪೊಲೀಸ್​ ಪದಕ ಘೋಷಣೆ
ಪೊಲೀಸ್​ ಪದಕ ಘೋಷಣೆ (ETV Bharat)

ನವದೆಹಲಿ: ಹಲವು ಘಟನೆಗಳಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ 1,037 ಮಂದಿ ಕೇಂದ್ರೀಯ ಮತ್ತು ರಾಜ್ಯ ಪೊಲೀಸ್​ ಸಿಬ್ಬಂದಿಗೆ ಪೊಲೀಸ್​​ ಪದಕಗಳನ್ನು ಕೇಂದ್ರ ಸರ್ಕಾರ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ಇಂದು ಘೋಷಿಸಿದೆ.

ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದ್ದು, ರಾಷ್ಟ್ರಪತಿಗಳ ಶೌರ್ಯ ಪದಕ (ಪಿಎಂಜಿ) ಸೇರಿದಂತೆ 214 ಸಿಬ್ಬಂದಿಗೆ ಶೌರ್ಯ ಪದಕಗಳನ್ನು ಘೋಷಿಸಲಾಗಿದೆ. ಇದರ ಜೊತೆಗೆ ಶೌರ್ಯ ಪದಕಗಳಿಗಾಗಿ 214 ಪೊಲಿಸ್​ ಸಿಬ್ಬಂದಿಯನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಅಗ್ನಿಶಾಮಕ ಯೋಧರಿಗೆ ನಾಲ್ಕು, ಸಿವಿಲ್​​ ಸಿಬ್ಬಂದಿಗೆ ಒಂದು ಶೌರ್ಯ ಪದಕವನ್ನು ನೀಡಲಾಗುತ್ತಿದೆ.

ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್‌ಪಿಎಫ್) ಗರಿಷ್ಠ 52 ಪದಕ ಸಿಕ್ಕಿವೆ. ಅದರಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ 31, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ತಲಾ 17 ಪೊಲೀಸ್ ಸಿಬ್ಬಂದಿ, ಛತ್ತೀಸ್‌ಗಢದ 15 ಮತ್ತು ಮಧ್ಯಪ್ರದೇಶದ ಪೊಲೀಸರಿಗೆ 12 ಪದಕಗಳನ್ನು ನೀಡಲಾಗಿದೆ.

ಒಬ್ಬರಿಗೆ ರಾಷ್ಟ್ರಪತಿ ಶೌರ್ಯ ಪದಕ: ಈ ಬಾರಿ ಓರ್ವ ಪೊಲೀಸ್​ ಸಿಬ್ಬಂದಿಗೆ ಮಾತ್ರ ರಾಷ್ಟ್ರಪತಿ ಶೌರ್ಯ ಪದಕ (ಪಿಎಂಜಿ) ನೀಡಲಾಗಿದೆ. ಜುಲೈ 25, 2022ರಂದು ಇಬ್ಬರು ಕುಖ್ಯಾತ ಸರಗಳ್ಳರು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆದಾರರನ್ನು ಬಂಧಿಸುವಲ್ಲಿ ಅಪರೂಪದ ಶೌರ್ಯ ಪ್ರದರ್ಶಿಸಿದ ತೆಲಂಗಾಣ ಪೊಲೀಸ್ ಹೆಡ್​ಕಾನ್ಸ್‌ಟೇಬಲ್ ಛದುವು ಯಾದಯ್ಯ ಅವರಿಗೆ ಅತ್ಯುನ್ನತ ಪೊಲೀಸ್ ಪದಕ ಘೋಷಿಸಲಾಗಿದೆ.

ಇಬ್ಬರು ಡಕಾಯಿತರು ಯಾದಯ್ಯ ಅವರನ್ನು ಶಸ್ತ್ರಾಸ್ತ್ರಗಳಿಂದ ಇರಿದಿದ್ದರು. ಆದರೂ ಪಟ್ಟು ಬಿಡದ ಅವರು, ಇಬ್ಬರನ್ನೂ ಹಿಡಿದಿದ್ದರು. ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, ಈ ಶೂರ ಪೊಲೀಸ್ ತೀವ್ರವಾಗಿ ಗಾಯಗೊಂಡು 17 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದರು.

ಇನ್ನುಳಿದಂತೆ, 94 ಸಿಬ್ಬಂದಿಗೆ ರಾಷ್ಟ್ರಪತಿಗಳ ಸೇವಾ ಪದಕ, ಶ್ಲಾಘನೀಯ ಸೇವೆಗಾಗಿ 729 ಪದಕಗಳು ದೊರೆತಿವೆ. ಈ ಪದಕಗಳನ್ನು ವರ್ಷಕ್ಕೆ ಎರಡು ಬಾರಿ ಘೋಷಿಸಲಾಗುತ್ತದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪೊಲೀಸ್​ ಸಿಬ್ಬಂದಿಯ ಸೇವೆಯನ್ನು ಗುರುತಿಸಿ ಪದಕ ನೀಡಲಾಗುತ್ತದೆ.

ಇದನ್ನೂ ಓದಿ: ಜಮ್ಮ-ಕಾಶ್ಮೀರದಲ್ಲಿ ಮುಂದುವರಿದ ಎನ್​ಕೌಂಟರ್​: ಕ್ಯಾಪ್ಟನ್​ ಹುತಾತ್ಮ, ಉಗ್ರರು ಪರಾರಿ - Encounter in Doda

ETV Bharat Logo

Copyright © 2024 Ushodaya Enterprises Pvt. Ltd., All Rights Reserved.