ನವದೆಹಲಿ: ಬೆಂಗಳೂರಿನಲ್ಲಿ ನಡೆದ ಅವಘಡ ನಿಜಕ್ಕೂ ಹೃದಯವಿದ್ರಾವಕ. ಈ ದುರಂತದ ಸಮಯದಲ್ಲಿ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನನ್ನ ಸಾಂತ್ವನಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಘಟನೆ ಸಂಬಂಧ ಅವರು ಟ್ವೀಟ್ ಮಾಡಿ ಅವರು ಸಂತಾಪ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಅವಘಡ ನಿಜಕ್ಕೂ ಹೃದಯವಿದ್ರಾವಕ. ಈ ದುರಂತದ ಸಮಯದಲ್ಲಿ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರಿಗೂ ನನ್ನ ಸಾಂತ್ವನಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ: ಪ್ರಧಾನ ಮಂತ್ರಿ @narendramodi
— PMO India (@PMOIndia) June 4, 2025
ಪ್ರಿಯಾಂಕಾ ಗಾಂಧಿ ಸಂದೇಶ: ಇನ್ನು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿ ಪ್ರಿಯಾಂಕಾ ಗಾಂಧಿ ಎಕ್ಸ್ ಹ್ಯಾಂಡಲ್ ನಲ್ಲಿ ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಭಯಾನಕ ನಡೆದಿದೆ. ಸಂತೋಷ ಮತ್ತು ಸಂಭ್ರಮದ ಕ್ಷಣವು ಹೃದಯವಿದ್ರಾವಕ ದುರಂತವಾಗಿ ಮಾರ್ಪಟ್ಟಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಶೋಕಿಸುತ್ತಿರುವ ಕುಟುಂಬಗಳಿಗೆ ನನ್ನ ಸಂತಾಪಗಳು. ಇದು ಎಷ್ಟು ನೋವು ನೀಡಿದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಆಶಿಸುತ್ತೇನೆ. ಕಾಲ್ತುಳಿತ ನೋಡಿದ ಅನೇಕರು ಆಘಾತಗೊಂಡಿರಬೇಕು. ಅವರಿಗೆ ಬೆಂಬಲ ಮತ್ತು ಸಾಂತ್ವನದ ಅಗತ್ಯವಿದೆ, ಸರ್ಕಾರ ಮತ್ತು ನಮ್ಮ ಪಕ್ಷದ ಕಾರ್ಯಕರ್ತರು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಮತ್ತು ಸಹಾಯವನ್ನು ಒದಗಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಸಂದೇಶದ ಮೂಲಕ ಹೇಳಿದ್ದಾರೆ.
What terrible news from Bengaluru. A moment of joy and celebration has turned into heartbreaking tragedy.
— Priyanka Gandhi Vadra (@priyankagandhi) June 4, 2025
My deepest condolences to the families mourning their loved ones, I cannot imagine how painful this must be. I hope all those who have been injured are getting good care…
ತೀವ್ರ ದುಃಖ ವ್ಯಕ್ತಪಡಿಸಿದ ಅನಿಲ್ ಕುಂಬ್ಳೆ: ಕ್ರಿಕೆಟ್‌ಗೆ ಇಂದು ದುಃಖದ ದಿನ! ಆರ್‌ಸಿಬಿ ವಿಜಯವನ್ನು ಆಚರಿಸುವಾಗ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗಾಗಿ ನನ್ನ ಹೃದಯ ಮಿಡಿಯುತ್ತಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಕ್ಸ್ ಹ್ಯಾಂಡಲ್ ಮೂಲಕ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಂತಾಪ ಸೂಚಿಸಿದ್ದಾರೆ.
It’s a Sad day for Cricket! My heart goes out to the families of those who lost their lives while celebrating RCB’s victory today. Praying for the speedy recovery of those injured. Tragic !! 💔💔
— Anil Kumble (@anilkumble1074) June 4, 2025
ಕ್ರಿಕೆಟಿಗ ದೊಡ್ಡ ಗಣೇಶ್ ಸಂತಾಪ: ಒಬ್ಬ ಭಾರತೀಯ ಕ್ರಿಕೆಟಿಗನಾಗಿ, ಇದು ನನ್ನ ಜೀವನದ ಅತ್ಯಂತ ದುಃಖಕರ ದಿನ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ತಮ್ಮ ಕ್ರಿಕೆಟ್ ವೀರರು ಪ್ರಾಣ ಕಳೆದುಕೊಂಡ ದೃಶ್ಯವನ್ನು ನೋಡಲು ಬಂದಿದ್ದ ಮುಗ್ಧ ಅಭಿಮಾನಿಗಳು ಹೃದಯ ವಿದ್ರಾವಕರಾಗಿದ್ದಾರೆ. ದುಃಖಿತ ಕುಟುಂಬಗಳಿಗೆ ನನ್ನ ಹೃದಯವು ಸಂತಾಪ ಸೂಚಿಸುತ್ತಿದೆ ಎಂದು ತಮ್ಮ ಎಕ್ಸ್ ಹ್ಯಾಂಡಲ್ ನಲ್ಲಿ ಅವರು ಬರೆದುಕೊಂಡಿದ್ದಾರೆ.
As an Indian cricketer, this is the saddest day of my life. Simply unable to process the tragedy at the Chinnaswamy stadium.
— Dodda Ganesh | ದೊಡ್ಡ ಗಣೇಶ್ (@doddaganesha) June 4, 2025
Innocent fans who came to catch the glimpses of their cricket heroes losing their lives is heart-wrenching. My heart goes out to the bereaved families.
ಕಾಲ್ತುಳಿತದಲ್ಲಿ 11ಮಂದಿ ಸಾವನ್ನಪ್ಪಿದ್ದಾರೆ. 33 ಜನ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಒಟ್ಟಾರೆ 47 ಮಂದಿ ಗಾಯಗೊಂಡಿದ್ದಾರೆ.
ಈ ನಡುವೆ, ಐಪಿಎಲ್ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ಘಟನೆ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆ ನಡೆಸುವುದಾಗಿ ತಿಳಿಸಿದ ಸಿಎಂ ಸಿದ್ದರಾಮಯ್ಯ, ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಕಾವೇರಿ ನಿವಾಸದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ ಜೊತೆಗೂಡಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾತ್ರಿವರೆಗೆ ಐಪಿಎಲ್ ಫೈನಲ್ ಪಂದ್ಯ ನಡೆದಿತ್ತು. ವಿಜಯೋತ್ಸವ ಆಚರಣೆ ಮಾಡಲು ಕ್ರಿಕೆಟ್ ಅಸೋಸಿಯೇಷನ್ ಅವರು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸರ್ಕಾರದಿಂದಲೂ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದೊಡ್ಡ ದುರಂತ ನಡೆದಿದೆ. ಜನ ಕಾಲ್ತುಳಿತಕ್ಕೆ ಒಳಗಾಗಿ 11 ಜನ ಮೃತ ಪಟ್ಟಿದ್ದಾರೆ. 33 ಜನ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿದ್ದಾರೆ. ಡಿಸಿ ನೇತೃತ್ವದಲ್ಲಿ ಮ್ಯಾಜಿಸ್ಟಿರಿಯಲ್ ತನಿಖೆ ನಡೆಸಲು ತೀರ್ಮಾನಿಸಲಾಗಿದೆ. ವರದಿ ಬಂದ ಬಳಿಕ ತಪ್ಪಿತಸ್ಥರ ಮೇಲೆ ಕ್ರಮ ವಹಿಸಲಾಗುತ್ತದೆ. ತನಿಖೆ ನಡೆಸಲು 15 ದಿನ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಇದನ್ನು ಓದಿ:ಆರ್‌ಸಿಬಿ ವಿಜಯೋತ್ಸವ ಸಂದರ್ಭ ರಾಜ್ಯ ಸರ್ಕಾರದ ವಿವೇಚನೆಯಿಂದ ನಡೆದುಕೊಳ್ಳಬೇಕಿತ್ತು: ವಿಜಯೇಂದ್ರ
ದಾವೂದ್, ಮಂಜ್ಯಾ ಸೇರಿ ನಾಲ್ವರ ಮೇಲೆ ಗೂಂಡಾ ಆ್ಯಕ್ಟ್, 31 ರೌಡಿಗಳ ಗಡಿಪಾರು