ETV Bharat / bharat

ಕೇದಾರನಾಥ ಸಮೀಪ ಹೆಲಿಕಾಪ್ಟರ್​ ಪತನ; ಮಗು ಸೇರಿ 7 ಮಂದಿ ಸಾವು - KEDARNATH HELICOPTER CRASH

ಉತ್ತರಾಖಂಡದ ಗೌರಿಕುಂಡ್​​​-ಸೋನ್‌ಪ್ರಯಾಗ್​​​​ ಅರಣ್ಯದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ.

KEDARNATH HELICOPTER CRASH  UTTARAKHAND HELICOPTER ACCIDENT  CM PUSHKAR SINGH DHAMI  UTTARAKHAND
ಹೆಲಿಕಾಪ್ಟರ್​ ಪತನಗೊಂಡ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ (ANI)
author img

By ETV Bharat Karnataka Team

Published : June 15, 2025 at 9:00 AM IST

1 Min Read

ರುದ್ರಪ್ರಯಾಗ(ಉತ್ತರಾಖಂಡ): ಉತ್ತರಾಖಂಡದ ಕೇದಾರನಾಥ ಸಮೀಪ ಇಂದು ಹೆಲಿಕಾಪ್ಟರ್​​ ಪತನಗೊಂಡಿದ್ದು, ಮಗು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಬೆಳಗ್ಗೆ 5.30ರ ಸುಮಾರಿಗೆ ಕೇದಾರನಾಥದಿಂದ ಗುಪ್ತಕಾಶಿಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಈ ​​ಹೆಲಿಕಾಪ್ಟರ್​​​​ ಗೌರಿಕುಂಡ್​​​-ಸೋನ್‌ಪ್ರಯಾಗ್​​​​ ಅರಣ್ಯದಲ್ಲಿ ಅಪಘಾತಕ್ಕೀಡಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್​ ಪತನ (PTI)

ಒಂದು ವಾರದ ಅಂತರದಲ್ಲಿ 2ನೇ ಅಪಘಾತ: ಜೂನ್​​ 7ರಂದು ಕೇದಾರನಾಥ ಯಾತ್ರೆ ಸಾಗುವ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ಬಡಾಸು ಹೆಲಿಪ್ಯಾಡ್‌ನಿಂದ ಈ ಹೆಲಿಕಾಪ್ಟರ್ ಟೇಕ್​ಆಪ್​ ಆಗಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಹೆಲಿಕಾಪ್ಟರನ್ನು ಕೇದಾರನಾಥ ರಾಷ್ಟ್ರೀಯ ಹೆದ್ದಾರಿಯ ಬಡಾಸು ಬಳಿ ಹೆಲಿಪ್ಯಾಡ್ ಸಮೀಪದ ರಸ್ತೆಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು. ಈ ಹೆಲಿಕಾಪ್ಟರ್ ಕ್ರಿಸ್ಟಲ್ ಏವಿಯೇಷನ್ ​​ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸೇರಿತ್ತು. ಪೈಲಟ್ ಸೇರಿದಂತೆ 6 ಮಂದಿ ಪ್ರಯಾಣಿಸುತ್ತಿದ್ದರು. ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದವರು ಪಾರಾಗಿದ್ದರು.

ಮೇ ತಿಂಗಳ 8ರಂದು ಉತ್ತರಕಾಶಿಯಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಪೈಲಟ್​ ಸೇರಿ 6 ಯಾತ್ರಿಕರು ಸಾವನ್ನಪ್ಪಿದ್ದರು.

ಇದನ್ನೂ ಓದಿ: ಕೇದಾರನಾಥ್ ಹೆದ್ದಾರಿಯಲ್ಲಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್: ತಪ್ಪಿದ ಅನಾಹುತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.