ETV Bharat / bharat

ಹವಾಲಾ ಜಾಲ; ಕ್ಷಣಾರ್ಧದಲ್ಲಿ ನೂರಾರು ಕೋಟಿ ರೂ. ವರ್ಗಾವಣೆ, ಸರ್ಕಾರಕ್ಕೆ ತೆರಿಗೆ ವಂಚನೆ - HAWALA RACKET

ಬೃಹತ್ ಹವಾಲಾ ಜಾಲವನ್ನು ತೆಲಂಗಾಣ ಟಿಜಿಎನ್ಎಬಿ ಪೊಲೀಸರು ಪತ್ತೆ ಮಾಡಿದ್ದಾರೆ.

ಹವಾಲಾ ಜಾಲ; ಕ್ಷಣಾರ್ಧದಲ್ಲಿ ನೂರಾರು ಕೋಟಿ ರೂ. ವರ್ಗಾವಣೆ, ಸರ್ಕಾರಕ್ಕೆ ತೆರಿಗೆ ವಂಚನೆ
ಹವಾಲಾ ಜಾಲ; ಕ್ಷಣಾರ್ಧದಲ್ಲಿ ನೂರಾರು ಕೋಟಿ ರೂ. ವರ್ಗಾವಣೆ, ಸರ್ಕಾರಕ್ಕೆ ತೆರಿಗೆ ವಂಚನೆ (etv bharat)
author img

By ETV Bharat Karnataka Team

Published : April 11, 2025 at 2:37 PM IST

2 Min Read

ಹೈದರಾಬಾದ್: ಹೈದರಾಬಾದ್ ಮೂಲವಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದ ಬೃಹತ್ ಹವಾಲಾ ಜಾಲವೊಂದನ್ನು ತೆಲಂಗಾಣ ಮಾದಕ ವಸ್ತು ನಿಗ್ರಹ ದಳ (ಟಿಜಿಎನ್ಎಬಿ) ಪತ್ತೆ ಮಾಡಿದೆ. 2023 ಮತ್ತು 2024 ರ ನಡುವೆ ಯಾವುದೇ ಲೆಕ್ಕಕ್ಕೆ ಸಿಗದ ಹಾಗೂ ತೆರಿಗೆ ತಪ್ಪಿಸಿ ದೇಶ ಹಾಗೂ ವಿದೇಶಗಳಿಗೆ ನೂರಾರು ಕೋಟಿ ರೂಪಾಯಿಗಳನ್ನು ಸಾಗಿಸಲಾಗಿದೆ ಎಂಬುದನ್ನು ಟಿಜಿಎನ್ಎಬಿ ಬಹಿರಂಗಪಡಿಸಿದೆ.

ಪ್ರಮುಖ ಪ್ರಕರಣ ಹಾಗೂ ಮುಟ್ಟುಗೋಲು:

  • 2023 ರಲ್ಲಿ ಬಂಜಾರಾ ಹಿಲ್ಸ್​ನಲ್ಲಿ ದುಬಾರಿ ವಾಹನದಲ್ಲಿ ಸಾಗಿಸುತ್ತಿದ್ದ 3.35 ಕೋಟಿ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಜುಬಿಲಿ ಹಿಲ್ಸ್ ಗೆ ಹೋಗುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು.
  • 2024ರಲ್ಲಿ ಸುಲ್ತಾನ್ ಬಜಾರ್​ನಲ್ಲಿ 1.21 ಕೋಟಿ ರೂ. ವಶಪಡಿಸಿಕೊಳ್ಳಲಾಗಿತ್ತು. ಮುಂಬೈ ಮೂಲದ ಬಬ್ಲು ಎಂಬ ಹ್ಯಾಂಡ್ಲರ್ ನ ಸೂಚನೆಯ ಮೇರೆಗೆ ಕಾರ್ಯನಿರ್ವಹಿಸುತ್ತಿರುವುದಾಗಿ ಈ ಪ್ರಕರಣದಲ್ಲಿ ಬಂಧಿತ ರಾಜಸ್ಥಾನದ ಇಬ್ಬರು ವ್ಯಕ್ತಿಗಳು ಒಪ್ಪಿಕೊಂಡಿದ್ದರು.
  • ನೈಜೀರಿಯಾದ ಡ್ರಗ್ ಡಾನ್ ಎಬುಕಾ ಸುಜಿ ಎಂಬಾತನನ್ನು ಬಂಧಿಸಿದಾಗ ಹವಾಲಾ ಜಾಲಕ್ಕೆ ಅಂತಾರಾಷ್ಟ್ರೀಯ ನಂಟಿರುವುದು ಪತ್ತೆಯಾಗಿತ್ತು. ಈತ ವಿದೇಶಿ ವಿನಿಮಯ ಏಜೆಂಟರ ಮೂಲಕ 120 ಕೋಟಿ ರೂ.ಗಳನ್ನು ವಿದೇಶಕ್ಕೆ ವರ್ಗಾಯಿಸಿದ್ದನು.

ಹವಾಲಾ ಜಾಲ ಹೇಗೆ ಕೆಲಸ ಮಾಡುತ್ತದೆ?: ಹವಾಲಾ ಜಾಲದಲ್ಲಿ, ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಳಸದೇ ಭಾರತದೊಳಗೆ ಅಥವಾ ಅಂತರರಾಷ್ಟ್ರೀಯವಾಗಿ ಕೆಲವೇ ಕ್ಷಣಗಳಲ್ಲಿ ಹಣವನ್ನು ವರ್ಗಾಯಿಸಲಾಗುತ್ತದೆ. ಸಾಮಾನ್ಯವಾಗಿ ಸೈಬರ್ ಅಪರಾಧ, ಡ್ರಗ್ಸ್, ತೆರಿಗೆ ವಂಚನೆ ಮತ್ತು ಕಪ್ಪು ಹಣದ ಚಲಾವಣೆಗೆ ಹವಾಲಾ ಜಾಲವನ್ನು ಬಳಸಲಾಗುತ್ತದೆ. ವಿದೇಶಿ ವಿನಿಮಯ ಏಜೆಂಟರು ಪ್ರತಿ ವರ್ಗಾವಣೆಗೆ ಶೇ 40 ವರೆಗೆ ಕಮಿಷನ್ ಪಡೆಯುತ್ತಾರೆ.

ಪ್ರತಿ 1 ಕೋಟಿ ರೂಪಾಯಿಗೆ : 40 ಲಕ್ಷ ರೂಪಾಯಿ ಕಮಿಷನ್ ನೀಡಲಾಗುತ್ತದೆ.

ಮೂರು ಹಂತಗಳಲ್ಲಿ ಕಮಿಷನ್: ಮಧ್ಯವರ್ತಿಗಳಿಗೆ ಶೇ 30, ಸಹಾಯಕರಿಗೆ ಶೇ 30, ಏಜೆಂಟರಿಗೆ ಶೇ 40

ಹೈದರಾಬಾದ್​ನಲ್ಲಿ ಅತಿಹೆಚ್ಚು ಸಕ್ರಿಯವಾಗಿರುವ ಹವಾಲಾ ಹಬ್​ಗಳು:

  • ಅಂಬರ್ ಪೇಟ್
  • ಬೇಗಂ ಬಜಾರ್
  • ಸುಲ್ತಾನ್ ಬಜಾರ್
  • ಸಿಕಂದರಾಬಾದ್
  • ಅಬಿಡ್ಸ್​
  • ಛತ್ರಿನಾಕಾ
  • ಕಟೇಡಾನ್
  • ಬಂಜಾರಾ ಹಿಲ್ಸ್​

ಹವಾಲಾ ಜಾಲ ಏಜೆಂಟರು ಪ್ರತಿ ಲಕ್ಷಕ್ಕೆ 1,000 ರೂಪಾಯಿ ಕಮಿಷನ್ ಪಡೆಯುತ್ತಾರೆ. ಹಣ ವರ್ಗಾವಣೆಗೆ ಇವರು ಸಂಕೇತ ಭಾಷೆಯನ್ನು ಬಳಸುತ್ತಾರೆ ಹಾಗೂ ವಿಶ್ವಾಸಾರ್ಹ ಸಹಾಯಕರ ಮೂಲಕ ಹಣ ಸಾಗಿಸುತ್ತಾರೆ.

ಕಪ್ಪು ಹಣ ಸಾಗಣೆಯ ವ್ಯಾಪ್ತಿ; ಚುನಾವಣೆ ಮತ್ತು ತುರ್ತು ತಪಾಸಣೆಯ ಸಮಯದಲ್ಲಿ ಪೊಲೀಸರು ಸಾಮಾನ್ಯವಾಗಿ 100-200 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳುತ್ತಾರೆ. ಪ್ರತಿದಿನ ತಪಾಸಣೆ ನಡೆಸಿದರೆ, ವರ್ಷಕ್ಕೆ 2,000-3,000 ಕೋಟಿ ರೂ. ಹವಾಲಾ ಜಾಲದ ಹಣ ಪತ್ತೆಯಾಗಬಹುದು ಎಂದು ಉನ್ನತ ಅಧಿಕಾರಿಯೊಬ್ಬರು ಅಂದಾಜಿಸಿದ್ದಾರೆ. ಹವಾಲಾ ಜಾಲದ ವಿರುದ್ಧ ಎಷ್ಟೇ ಕಾರ್ಯಾಚರಣೆ ನಡೆಸಿದರೂ ಅದರ ರಹಸ್ಯ ವ್ಯೂಹ, ಸಂಪರ್ಕಗಳು ಮತ್ತು ಆಳವಾದ ವ್ಯಾಪ್ತಿಯಿಂದಾಗಿ ಬಹುತೇಕ ಜಾಲಗಳು ಅಬಾಧಿತವಾಗಿ ಕೆಲಸ ಮಾಡುತ್ತವೆ.

ಹವಾಲಾ ಜಾಲದ ಪರಿಣಾಮ: ಹವಾಲಾ ಕೇವಲ ಅಕ್ರಮ ಹಣ ಸಾಗಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಅಪರಾಧಗಳಿಗೆ ಧನಸಹಾಯ ನೀಡುತ್ತದೆ, ಹಣಕಾಸು ಸಂಸ್ಥೆಗಳನ್ನು ದುರ್ಬಲಗೊಳಿಸುತ್ತದೆ ಮತ್ತು ದೇಶದ ಕಾನೂನುಗಳನ್ನು ತಪ್ಪಿಸಿಕೊಳ್ಳುತ್ತದೆ. ತಂತ್ರಜ್ಞಾನ, ಅಪರಾಧ ಸಿಂಡಿಕೇಟ್ ಗಳು ಮತ್ತು ವಂಚಕರು ಒಗ್ಗೂಡಿದಾಗ ಯಾವುದೇ ಕುರುಹು ಇಲ್ಲದೇ ದೊಡ್ಡ ಮೊತ್ತವನ್ನು ಎಷ್ಟು ಸುಲಭವಾಗಿ ಸಾಗಿಸಬಹುದು ಎಂಬುದಕ್ಕೆ ಹವಾಲಾ ಜಾಲ ಉತ್ತಮ ಉದಾಹರಣೆಯಾಗಿದೆ.

ಇದನ್ನೂ ಓದಿ : ಜಮ್ಮು ಕಾಶ್ಮೀರದ ಕಿಶ್ತವಾರ್​ನಲ್ಲಿ ಎನ್​ಕೌಂಟರ್; ಓರ್ವ ಭಯೋತ್ಪಾದಕ ಹತ - ENCOUNTER IN KISHTWAR

ETV Bharat Logo

Copyright © 2025 Ushodaya Enterprises Pvt. Ltd., All Rights Reserved.