ETV Bharat / bharat

ಜಿಮ್​ ಮಾಲೀಕನಿಗೆ ಗುಂಡಿಟ್ಟು ಹತ್ಯೆ - Gym Owner Shot Dead

ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. ದುಷ್ಕರ್ಮಿಗಳು ಜಿಮ್‌ ಮಾಲೀಕನನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

author img

By ETV Bharat Karnataka Team

Published : Sep 13, 2024, 11:23 AM IST

gym-owner-was-shot-dead-in-delhi-lawrence-bishnoi-gang-takes-responsibility
ಸಾಂದರ್ಭಿಕ ಚಿತ್ರ (ETV Bharat)

ನವದೆಹಲಿ: ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಜಿಮ್ ಮಾಲೀಕನ ಮೇಲೆ ಗುಂಡು ಹಾರಿಸಿ ಹತ್ಯೆಗೈದ ಘಟನೆ ನವದೆಹಲಿಯ ಗ್ರೇಟರ್​ ಕೈಲಾಶ್​ನಲ್ಲಿ ಗುರುವಾರ ರಾತ್ರಿ ನಡೆದಿದೆ. ನಾದಿಶ್​ ಶಾ (35) ಹತ್ಯೆಯಾದ ವ್ಯಕ್ತಿ. ಜಿಮ್​ ಬಂದ್​ ಮಾಡಿ, ರಾತ್ರಿ 10.45ರ ಸುಮಾರಿಗೆ ಹೊರಹೋಗುತ್ತಿದ್ದಾಗ ಬೈಕ್​ನಲ್ಲಿ ಎದುರಾದ ಅಪರಿಚಿತರು ಗುಂಡಿನ ಮಳೆಗರೆದಿದ್ದಾರೆ.

ಐದು ಗುಂಡುಗಳು ಶಾ ದೇಹ ಸೀಳಿವೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

ಗ್ರೇಟರ್​ ಕೈಲಾಶ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜೇಂದ್ರ ಶಾರದಾ ಪ್ರತಿಕ್ರಿಯಿಸಿ, ಇಬ್ಬರು ಯುವಕರು ಸ್ಕೂಟರ್​ನಲ್ಲಿ ಬಂದು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ನದೀರ್​ ಪಾಲುದಾರಿಕೆಯಲ್ಲಿ ಕಳೆದ ಆರು ತಿಂಗಳಿನಿಂದ ಜಿಮ್​ ನಡೆಯುತ್ತಿತ್ತು ಎಂದರು.

ಉಪ ಪೊಲೀಸ್​ ಆಯುಕ್ತ (ದಕ್ಷಿಣ) ಅಂಕಿತ್​ ಚೌಹಾಣ್​ ಮಾತನಾಡಿ, ಜಿಕೆ 1 ಗನ್​ನಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಕೆಲವು ಬುಲೆಟ್‌ಗಳು ಮತ್ತು ಖಾಲಿ ಕಾಟ್ರಿಡ್ಜ್‌ಗಳು ಸಿಕ್ಕಿವೆ ಎಂದು ಮಾಹಿತಿ ನೀಡಿದರು.

ಹೊಣೆ ಹೊತ್ತ ಬಿಷ್ಣೋಯಿ ಗ್ಯಾಂಗ್​: ಜಿಮ್​ ಮಾಲೀಕನ ಹತ್ಯೆ ಹೊಣೆಯನ್ನು ಕುಖ್ಯಾತ ಲಾರೆನ್ಸ್​​ ಬಿಷ್ಣೋಯಿ ಗ್ಯಾಂಗ್​ ಹೊತ್ತುಕೊಂಡಿದೆ. ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆ ಜವಾಬ್ದಾರಿಯನ್ನೂ ಇದೇ ಗ್ಯಾಂಗ್ ಹೊತ್ತಿತ್ತು. ಅಲ್ಲದೇ ಬಾಲಿವುಡ್​ ನಟ ಸಲ್ಮಾನ್​ ಖಾನ್‌ಗೆ ಕೊಲೆ ಬೆದರಿಕೆ ಹಾಕಿತ್ತು. ಬಿಷ್ಣೋಯಿ ಗ್ಯಾಂಗ್​ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ಅಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ.

ಇದನ್ನೂ ಓದಿ: ಭಾರೀ ವರ್ಷಧಾರೆ: ಗೋಡೆ ಕುಸಿದು 7 ಮಂದಿ ಸಾವು, ಇಬ್ಬರ ರಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.