ಮಹಾರಾಜಗಂಜ್ (ಉತ್ತರ ಪ್ರದೇಶ): ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಲಕ್ನೋದಿಂದ ಬರುತ್ತಿದ್ದ ಕಾರು ಭೈಯಾ ಫರೆಂಡಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್‌ನ ಅಂಚಿನಲ್ಲಿ ಸಿಲುಕಿ ಅಪಾಯಕ್ಕೀಡಾಗಿತ್ತು. ಆದರೆ ಅದೃಷ್ಟವಶಾತ್ ದೊಡ್ಡ ಅಪಘಾತದಿಂದ ಪಾರಾಗಿದೆ.
ತಮ್ಮದೇ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದು ಈ ಮಾರ್ಗವಾಗಿ ತಮ್ಮೂರಿಗೆ ಪ್ರಯಾಣ ಬೆಳೆಸಿತ್ತು. ಅವರು ಸಾಗುತ್ತಿದ್ದ ದಾರಿ ಅಪಾಯಕಾರಿ ಎಂಬುದು ರಸ್ತೆಯ ಅಂಚನ್ನು ತಲುಪಿದ ಮೇಲೆ ಗೊತ್ತಾಗಿದೆ. ಕಾಮಗಾರಿ ನಡೆಯುತ್ತಿದ್ದ ಫ್ಲೈ ಓವರ್ ಮೇಲೆ ಇವರ ಕಾರು ಸಾಗಿತ್ತು. ಇದು ಇದ್ದಕ್ಕಿದ್ದಂತೆ ಅಂತ್ಯವಾಗಿ ರಸ್ತೆ ಇಲ್ಲದೇ ಅಪಾಯಕ್ಕೆ ಸಿಲುಕಿತ್ತು.
ಭಾರತ ಮತ್ತು ನೇಪಾಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 24 (ಗೋರಖ್‌ಪುರ-ಸೋನೌಲಿ ರಸ್ತೆ) ರಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಫ್ಲೈ ಓವರ್ ಮೇಲೆ ಕಾರು ತೆರಳುತ್ತಿತ್ತು. ವಿಚಿತ್ರ ಎಂದರೆ ಫ್ಲೈಓವರ್ ನಿರ್ಮಾಣ ಕಾರ್ಯ ಸದ್ಯ ಪ್ರಗತಿಯಲ್ಲಿದೆ. ಸ್ಥಳೀಯರು ಹೇಳುವ ಪ್ರಕಾರ, ಫ್ಲೈಓವರ್‌ನ ಒಂದು ಭಾಗವು ಪೂರ್ಣಗೊಂಡಿದೆ. ಫ್ಲೈಓವರ್ ರಸ್ತೆ ಸಾಮಾನ್ಯ ಮತ್ತು ಬಳಕೆಗೆ ಯೋಗ್ಯವಾಗಿ ಕಂಡಿದೆ. ಆದರೆ, ಫ್ಲೈಓವರ್‌ನ ಇನ್ನೊಂದು ಬದಿಯು ಕಾಮಗಾರಿ ಇನ್ನೂ ಅಪೂರ್ಣವಾಗಿದೆ. ಕತ್ತಲೆ ಬೇರೆ ಆಗಿದ್ದರಿಂದ ಚಾಕನಿಗೆ ದಾರಿ ಸರಿಯಾಗಿ ಕಾಣಿಸದಿದ್ದರಿಂದ ಈ ಘಟನೆ ನಡೆದಿದೆ ಎಂದು ಜನರು ತಿಳಿಸಿದ್ದಾರೆ.
ಭಾರತ ಮತ್ತು ನೇಪಾಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 24 (ಗೋರಖ್‌ಪುರ-ಸೋನೌಲಿ ರಸ್ತೆ) ರಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಫ್ಲೈ ಓವರ್ ಇದಾಗಿದೆ. ಈ ವೇಳೆ ಕಾರು ಪೈಓವರ್ ಮೇಲೆ ಸಿಲುಕಿ ನೇತಾಡುತ್ತಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಫ್ಲೈಓವರ್ ನಿರ್ಮಾಣ ಕಾರ್ಯ ಸದ್ಯ ಪ್ರಗತಿಯಲ್ಲಿದೆ. ಸ್ಥಳೀಯ ಜನರು ಹೇಳುವ ಪ್ರಕಾರ ಫ್ಲೈಓವರ್‌ನ ಒಂದು ಭಾಗವು ಪೂರ್ಣಗೊಂಡಿದೆ. ಫ್ಲೈಓವರ್ ರಸ್ತೆ ಸಾಮಾನ್ಯ ಮತ್ತು ಬಳಕೆಗೆ ಯೋಗ್ಯವಾಗಿ ಕಂಡಿದೆ. ಆದರೆ, ಫ್ಲೈಓವರ್‌ನ ಇನ್ನೊಂದು ಬದಿಯು ಕಾಮಗಾರಿ ಇನ್ನೂ ಅಪೂರ್ಣವಾಗಿದೆ. ಅಷ್ಟೇ ಅಲ್ಲ ರಾತ್ರಿಯ ಕತ್ತಲೆಯಲ್ಲಿ ಈ ಕುರಿತು ಎಚ್ಚರಿಕೆಯ ಯಾವುದೇ ಬೋರ್ಡ್ ಗಳು ಸೂಚನೆಗಳು ಇಲ್ಲದೇ ಇರುವುದರಿಂದ ಈ ರೀತಿ ಅನಾಹುತ ಸಂಭವಿಸಿದೆ ಎಂದು ಹೇಳಿದ್ದಾರೆ.
ಕಾರು ಸಾಮಾನ್ಯವಾಗಿ ಫ್ಲೈ ಓವರ್ ಮೇಲೆ ತೆರಳುತ್ತಿದ್ದರಿಂದ ಮಾರ್ಗ ಮಧ್ಯೆದಲ್ಲಿ ದೊಡ್ಡ ಗುಂಡಿ ಕಂಡಿದೆ. ಅದೃಷ್ಟವಶಾತ್ ಚಾಲಕ ಬ್ರೇಕ್ ಹಾಕಿದ್ದಾನೆ. ಇದರ ರಭಕ್ಕೆ ಕಾರು ಅಪೂರ್ಣಗೊಂಡ ರಸ್ತೆ ಬದಿಯಲ್ಲಿಯೇ ಸಿಲುಕಿದೆ. ಅದೃಷ್ಟವಶಾತ್, ಅಪಘಾತದಲ್ಲಿ ಕಾರಿನಲ್ಲಿದ್ದವರೆಲ್ಲ ಬಚಾವ್ ಆಗಿದ್ದು, ಅವರನ್ನು ಫ್ಲೈಓವರ್ನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಫ್ಲೈ ಓವರ್ನ ಅಪೂರ್ಣ ಕಾಮಗಾರಿಯ ರಸ್ತೆಯನ್ನು ಬಂದ್ ಮಾಡದ ಹಿನ್ನೆಲೆಯಲ್ಲಿ ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದು, ಇಲ್ಲಿ ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸುವಂತೆ ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತ ಈ ಅಪಘಾತ ಪ್ರಕರಣ ಕುರಿತು ತನಿಖೆ ಮಾಡುವಂತೆ ಆದೇಶಿಸಿದೆ. ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ.
ಈ ನಡುವೆ ಫರೆಂಡ ಪೊಲೀಸ್ ಠಾಣೆಯ ಉಸ್ತುವಾರಿ ಪ್ರಶಾಂತ್ ಪಾಠಕ್ ಮಾತನಾಡಿ, ಬೆಳಗ್ಗೆ ಈ ಕುರಿತು ಮಾಹಿತಿ ಲಭ್ಯವಾಗಿದೆ. ಪೊಲೀಸರು ಬರುವ ಹೊತ್ತಿಗೆ ಕಾರನ್ನು ಕ್ರೇನ್ ಸಹಾಯದಿಂದ ಕೆಳಗೆ ಇಳಹಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.