ETV Bharat / bharat

10 ಕೆಜಿ ಗಾತ್ರದ ಕುಂಬಳಕಾಯಿ, 7 ಅಡಿ ಉದ್ದದ ಸೋರೆಕಾಯಿ, 8 ಅಡಿ ಉದ್ದದ ಪಾಲಕ್ಕಿ ಸೊಪ್ಪು ನೋಡಿದ್ದೀರಾ? - AMAZING VEGETABLES

ಹರಿಯಾಣದ ಕೃಷಿ ವಿವಿಯಲ್ಲಿ ನಡೆದ ಮೇಳದಲ್ಲಿ ರೈತರು ಬೆಳೆದ ವಿಶೇಷ ತರಕಾರಿಗಳು ಗಮನ ಸೆಳೆದವು.

ರೈತರು ಬೆಳೆದ ವಿಶೇಷ ಗಾತ್ರದ ತರಕಾರಿಗಳು
ರೈತರು ಬೆಳೆದ ವಿಶೇಷ ಗಾತ್ರದ ತರಕಾರಿಗಳು (ETV Bharat)
author img

By ETV Bharat Karnataka Team

Published : March 19, 2025 at 9:45 PM IST

2 Min Read

ಹಿಸಾರ್ (ಹರಿಯಾಣ) : ನೀವು ಎಂದಾದರೂ 10 ಕೆಜಿ ದಪ್ಪದ ಬೀಟ್​​ರೂಟ್​, ಕುಂಬಳಕಾಯಿ, 8 ಅಡಿ ಉದ್ದದ ಪಾಲಕ್ ಸೊಪ್ಪು ಮತ್ತು 7 ಅಡಿ ಉದ್ದ ಸೋರೆಕಾಯಿಯನ್ನು ನೋಡಿದ್ದೀರಾ? ಬಹುಶಃ ಇಲ್ಲದಿರಬಹುದು. ಈ ಅಪರೂಪದ ತರಕಾರಿಗಳನ್ನು ನೋಡಬೇಕಾದರೆ, ಹರಿಯಾಣದ ಹಿಸಾರ್‌ ಜಿಲ್ಲೆಯಲ್ಲಿ ನಡೆಯುತ್ತಿರುವ ಕೃಷಿ ಮೇಳಕ್ಕೆ ಬರಬೇಕು. ಇಲ್ಲಿ ರೈತರು ಬೆಳೆದ ಅಗಾಧ ಗಾತ್ರದ ತರಕಾರಿಯನ್ನು ಕಾಣಬಹುದು.

ಹಿಸಾರ್ ಜಿಲ್ಲೆಯ ಚೌಧರಿ ಚರಣ್ ಸಿಂಗ್ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ ನಡೆಯುತ್ತಿದ್ದು, ಹರಿಯಾಣ, ರಾಜಸ್ಥಾನ, ಪಂಜಾಬ್, ಹಿಮಾಚಲ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ 83 ಸಾವಿರಕ್ಕೂ ಅಧಿಕ ರೈತರು ಭಾಗವಹಿಸಿದ್ದಾರೆ.

10 ಕೆಜಿ ತೂಕದ ತರಕಾರಿ
10 ಕೆಜಿ ತೂಕದ ತರಕಾರಿ (ETV Bharat)

ಮಳಿಗೆಗಳಲ್ಲಿ ವಿಶೇಷ ತರಕಾರಿಗಳ ಪ್ರದರ್ಶನ: ಮೇಳದಲ್ಲಿ ರೈತರು ತಾವು ಬೆಳೆದ ವಿಶೇಷ ತರಕಾರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. 10 ಕಿಲೋ ದಪ್ಪದ ಟರ್ನಿಪ್, ದೊಡ್ಡ ಈರುಳ್ಳಿ, 10 ಕಿಲೋ ಗಾತ್ರದ ಕುಂಬಳಕಾಯಿ, 8 ಅಡಿ ಉದ್ದದ ಪಾಲಕ್, 7 ಅಡಿ ಉದ್ದದ ಸೋರೆಕಾಯಿ ಮತ್ತು ಕಬ್ಬಿನ ರಸದಿಂದ ಮಾಡಲಾದ ಕುಲ್ಫಿ ಆಕರ್ಷಣೆಯ ಕೇಂದ್ರಬಿಂದುವಾಗಿವೆ.

8 ಅಡಿ ಉದ್ದದ ಪಾಲಕ್ ಸೊಪ್ಪು: ಚಾಮರ್ ಖೇಡಾದ ರೈತ ಬೀರೇಂದ್ರ ಎಂಬವರು 8 ಅಡಿ ಉದ್ದದ ಪಾಲಕ್ ಸೊಪ್ಪು ಜೊತೆ ಮೇಳಕ್ಕೆ ಆಗಮಿಸಿದ್ದರು. ದೊಡ್ಡ ಗಾತ್ರದಲ್ಲಿರುವ ಸೊಪ್ಪನ್ನು ಕಂಡು ಮೇಳಕ್ಕೆ ಬಂದ ಇತರ ರೈತರು ಅಚ್ಚರಿಗೊಳಗಾದರು. ರೈತರು ಇದನ್ನು ಬೆಳೆಯಲು ವಿಶೇಷ ಶ್ರಮ ವಹಿಸಿದ್ದಾಗಿ ತಿಳಿಸಿದರು.

ಗಜಗಾತ್ರದ ಕುಂಬಳಕಾಯಿ ಜೊತೆ ರೈತ
ಗಜಗಾತ್ರದ ಕುಂಬಳಕಾಯಿ ಜೊತೆ ರೈತ (ETV Bharat)

ಗಜಗಾತ್ರದ ಕುಂಬಳಕಾಯಿ: ಹಿಸಾರ್ ರೈತ ಮೈನ್‌ಪಾಲ್ ಎಂಬವರು 10 ಕೆಜಿ ತೂಕದ ಕುಂಬಳಕಾಯಿಯನ್ನು ಬೆಳೆದಿದ್ದಾರೆ. ಈ ಕುಂಬಳಕಾಯಿಯನ್ನು ಸಾವಯವ ರೀತಿಯಲ್ಲಿ ಬೆಳೆಯಲಾಗಿದೆ. ಅದರ ರುಚಿಯೂ ಭಿನ್ನವಾಗಿರುತ್ತದೆ ಎಂದು ಅವರು ಹೇಳಿದರು.

ರೈತ ಬೆಳೆದ ದೊಡ್ಡ ಗಾತ್ರದ ಈರುಳ್ಳಿ
ರೈತ ಬೆಳೆದ ದೊಡ್ಡ ಗಾತ್ರದ ಈರುಳ್ಳಿ (ETV Bharat)

ಅತಿದೊಡ್ಡ ಈರುಳ್ಳಿ : ರಾಟಿಯಾದ ರೈತ ಬೀರೇಂದ್ರ ದೊಡ್ಡ ಪ್ರಮಾಣದ ಈರುಳ್ಳಿಯನ್ನು ಪ್ರದರ್ಶಿಸಿದರು. ಈ ತಳಿಯ ಈರುಳ್ಳಿಯು 250 ಗ್ರಾಂ ತೂಗುತ್ತದೆ. ಇದರ ಬೀಜಗಳನ್ನೂ ಅವರು ರೈತರಿಗೆ ನೀಡಿದರು.

7 ಅಡಿ ಉದ್ದದ ಸೋರೆಕಾಯಿ ಜೊತೆ ರೈತ
7 ಅಡಿ ಉದ್ದದ ಸೋರೆಕಾಯಿ ಜೊತೆ ರೈತ (ETV Bharat)

7 ಅಡಿ ಉದ್ದದ ಸೋರೆಕಾಯಿ: ಗಂಗಾನಗರ ಗ್ರಾಮದ ರೈತ ಕೃಷ್ಣಸ್ವಾಮಿ ಎಂಬವರು ಸ್ಥಳೀಯ ತಳಿಯ ಬೀಜವನ್ನು ಬಳಸಿ ತಮ್ಮ ಜಮೀನಿನಲ್ಲಿ 7 ಅಡಿ ಉದ್ದದ ಸೋರೆಕಾಯಿ ಬೆಳೆದಿದ್ದಾರೆ. ಇದರ ಜೊತೆಗೆ ಇನ್ನೊಬ್ಬ ರೈತ 10 ಕೇಜಿ ತೂಕದ ಟರ್ನಿಪ್​ ತರಕಾರಿಯನ್ನು ಪ್ರದರ್ಶಿಸಿದರು.

ಇದನ್ನೂ ಓದಿ: ರೈತರು - ಕೇಂದ್ರ ಸರ್ಕಾರದ ಮಧ್ಯೆ 3ನೇ ಸುತ್ತಿನ ಸಭೆ ಸಮಾಪ್ತಿ; ಮೇ 4 ರಂದು ಮುಂದಿನ ಸಭೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.