ETV Bharat / bharat

ರಾಜ್ಯಸಭೆಯಲ್ಲಿ ಹೈಡ್ರಾಮಾ: ಜಯಾ ಬಚ್ಚನ್‌ ಮಾತಿಗೆ ಧನಕರ್ ಗರಂ​, ಪ್ರತಿಪಕ್ಷಗಳ ಸಭಾತ್ಯಾಗ - Dhankhar Jaya Bachchan Faceoff

author img

By PTI

Published : Aug 9, 2024, 10:00 PM IST

ಜಯಾ ಬಚ್ಚನ್ ಅವರ ಮಾತಿನಿಂದಾಗಿ ಶುಕ್ರವಾರ ರಾಜ್ಯಸಭೆಯಲ್ಲಿ ಕೋಲಾಹಲ ಉಂಟಾಯಿತು. ಸಭಾಧ್ಯಕ್ಷ ಜಗದೀಪ್ ಧನಕರ್ ಆಕ್ರೋಶ ಹೊರಹಾಕಿದರು. ಪ್ರತಿಪಕ್ಷಗಳು ಸದನದಿಂದ ಹೊರನಡೆದವು.

OPPOSITION WALKS OUT  FACE OFF  CHAIRMAN DHANKHAR  JAYA BACHCHAN
ರಾಜ್ಯಸಭೆಯಲ್ಲಿ ಹೈಡ್ರಾಮಾ (ETV Bharat)
ರಾಜ್ಯಸಭೆ ಕಲಾಪ: ಜಯಾ ಬಚ್ಚನ್‌ ಮಾತಿಗೆ ಧನಕರ್ ಗರಂ​, ಪ್ರತಿಪಕ್ಷಗಳ ಸಭಾತ್ಯಾಗ (ETV Bharat)

ನವದೆಹಲಿ: ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು ಸಭಾಪತಿಯವರ ಮಾತನಾಡುವ ಶೈಲಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಇದಕ್ಕೆ ಸಭಾಪತಿ ಜಂಗ್‌ದೀಪ್ ಧನಕರ್ ಸಭ್ಯವಾಗಿ ವರ್ತಿಸುವಂತೆ ಅವರಿಗೆ ಸೂಚನೆ ನೀಡಿದರು. ಇದರಿಂದ ಕೆರಳಿದ ಪ್ರತಿಪಕ್ಷಗಳ ಸದಸ್ಯರು "ದಾದಾಗಿರಿ ನಡೆಯುವುದಿಲ್ಲ" ಎಂಬ ಘೋಷಣೆಗಳನ್ನು ಕೂಗಿ ಸಭಾತ್ಯಾಗ ಮಾಡಿದರು.

ವಿವಾದವೇನು?: ಪ್ರಶ್ನೋತ್ತರ ಸಮಯದಲ್ಲಿ ಪ್ರತಿಪಕ್ಷ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಘನಶ್ಯಾಮ್ ತಿವಾರಿ ಮಾಡಿದ ಟೀಕೆಗಳನ್ನು ಪ್ರಸ್ತಾಪಿಸಿದರು. ಕೆಲವು ಆಕ್ಷೇಪಾರ್ಹ ವಿಷಯಗಳನ್ನು ಹೇಳಿದ್ದಾರೆ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಪ್ರಸ್ತಾಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಧನಖರ್, ಖರ್ಗೆ ಮತ್ತು ತಿವಾರಿ ಅವರು ನನ್ನ ಚೇಂಬರ್‌ಗೆ ಬಂದಿದ್ದು, ಪ್ರತಿಯೊಂದನ್ನೂ ಪರಿಶೀಲಿಸಲಾಗಿದೆ. ಆಕ್ಷೇಪಾರ್ಹ ವಿಚಾರಗಳಿದ್ದರೆ ಕ್ಷಮೆ ಯಾಚಿಸಲು ಸಿದ್ಧ ಎಂದು ತಿವಾರಿ ಹೇಳಿದ್ದಾರೆ. ಖರ್ಗೆ ಅವರೂ ಕೂಡ ಆಕ್ಷೇಪಾರ್ಹ ವಿಚಾರಗಳೂ ಏನೂ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದರು.

ಇದಾದ ನಂತರವೂ ಜೈರಾಮ್ ರಮೇಶ್ ಕ್ಷಮೆ ಯಾಚಿಸಬೇಕೆಂದು ಪುನರುಚ್ಚರಿಸಿದರು. ಇದಕ್ಕೆ ಸಭಾಪತಿ, ಯಾರನ್ನಾದರೂ ಹೊಗಳಿದ್ದಕ್ಕೆ ಯಾರೂ ಕ್ಷಮೆ ಕೇಳುವುದಿಲ್ಲ. ಅವರು ಕ್ಷಮೆ ಕೇಳುವುದಿಲ್ಲ. ಯಾವುದೇ ಸಮಸ್ಯೆ ಇದ್ದರೆ ದಯವಿಟ್ಟು ಲಿಖಿತವಾಗಿ ನೀಡಿ ಎಂದು ಸೂಚಿಸಿದರು. ಇದಾದ ನಂತರವೂ ಸದನದಲ್ಲಿ ಚರ್ಚೆ ಮುಂದುವರೆಯಿತು.

ಜಯಾ ಬಚ್ಚನ್ ಮಾತಿಗೆ ಕೋಪಗೊಂಡ ಸಭಾಪತಿ: ಇದಾದ ನಂತರ ಸಭಾಪತಿ ಧನಕರ್, ಎಸ್ಪಿ ಸಂಸದೆ ಜಯಾ ಬಚ್ಚನ್ ಅವರನ್ನು ಮಾತನಾಡುವಂತೆ ಹೇಳಿದರು. ಎದ್ದು ನಿಂತು ಮಾತು ಶುರುವಿಟ್ಟುಕೊಂಡ ಜಯಾ ಬಚ್ಚನ್, ನಾನು ನಟಿ. ಅಭಿವ್ಯಕ್ತಿ ಮತ್ತು ದೇಹ ಭಾಷೆ (ಬಾಡಿ ಲ್ಯಾಂಗ್ವೇಜ್​) ಅರ್ಥಮಾಡಿಕೊಳ್ಳುತ್ತೇನೆ. ಕ್ಷಮಿಸಿ ಸರ್, ಆದರೆ ನೀವು ಮಾತನಾಡಿದ ಶೈಲಿ ಸರಿಯಿಲ್ಲ. ನಾವು ಸಹೋದ್ಯೋಗಿಗಳು, ನೀವು ಆ ಕುರ್ಚಿಯಲ್ಲಿದ್ದೀರಿ, ನಾವು ಸಭಾಂಗಣದಲ್ಲಿದ್ದೇವೆ. ಅದೊಂದೇ ವ್ಯತ್ಯಾಸ. ನಿಮ್ಮ ಧ್ವನಿ ಸ್ವೀಕಾರಾರ್ಹವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

'ನಿರ್ದೇಶಕರಿಂದ ನೀವು ನಟಿಯಾಗಿದ್ದೀರಿ': ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ, ಜಯಾ ಜೀ ನೀವು ಓರ್ವ ಕಲಾವಿದೆಯಾಗಿ ಗೌರವ ಸಂಪಾದಿಸಿದ್ದೀರಿ. ನೀವು ನಟಿಯಾದರೆ ಅದು ನಿರ್ದೇಶಕರಿಗೆ ಸಂಬಂಧಿಸಿದ ವಿಷಯ. ಪ್ರತಿ ದಿನ ನಾನು ಅದನ್ನು ಪುನರಾವರ್ತಿಸಲು ಸಾಧ್ಯವಿಲ್ಲ. ನೀವು ನನ್ನ ಧ್ವನಿಯ ಬಗ್ಗೆ ಮಾತನಾಡುತ್ತಿದ್ದೀರಿ, ಇದನ್ನು ನಾನು ಸಹಿಸುವುದಿಲ್ಲ. ನೀವು ಸೆಲೆಬ್ರಿಟಿ ಆಗಿರಬಹುದು. ಯಾರೇ ಆಗಲಿ, ಸಭ್ಯತೆಯನ್ನು ಅನುಸರಿಸಬೇಕು ಎಂದು ಖಾರವಾಗಿ ನುಡಿದರು. ಇದಕ್ಕೆ ಪ್ರತಿಪಕ್ಷದ ಸದಸ್ಯರು "ದಾದಾಗರಿ ನಡೆಯುವುದಿಲ್ಲ" ಎಂದು ಘೋಷಣೆಗಳನ್ನು ಕೂಗುತ್ತಾ ಸಭಾತ್ಯಾಗ ಮಾಡಿದರು.

ಪ್ರತಿಪಕ್ಷಗಳ ವರ್ತನೆ 'ಅಸಭ್ಯ'ತೆಯಿಂದ ಕೂಡಿದೆ ಎಂದು ರಾಜ್ಯಸಭೆಯಲ್ಲಿ ಖಂಡನಾ ನಿರ್ಣಯ ಮಂಡಿಸಲಾಯಿತು. ಗದ್ದಲ ಮತ್ತು ಖಂಡನಾ ನಿರ್ಣಯದ ನಂತರ ರಾಜ್ಯಸಭೆ ಕಲಾಪವನ್ನು ಮುಂದೂಡಲಾಯಿತು. ಪ್ರತಿಪಕ್ಷಗಳೂ ಸಹ 67ನೇ ವಿಧಿಯ ಅಡಿಯಲ್ಲಿ ಸಭಾಪತಿ ವಿರುದ್ಧ ಮಹಾಭಿಯೋಗ ನಿರ್ಣಯ ತರಲು ತಯಾರಿ ನಡೆಸುತ್ತಿವೆ.

ಇದನ್ನೂ ಓದಿ: ಶೀಘ್ರದಲ್ಲೇ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ: ಸಿಇಸಿ ರಾಜೀವ್ ಕುಮಾರ್ - J K Assembly Polls

ETV Bharat Logo

Copyright © 2024 Ushodaya Enterprises Pvt. Ltd., All Rights Reserved.