ETV Bharat / bharat

ಶರದ್​ ಪೂರ್ಣಿಮೆ ಬೆಳಕಲ್ಲಿ ತಾಜ್​ ಮಹಲ್​ ಸೊಬಗು; 'ಚಮ್ಕಿ' ದೃಶ್ಯ ಕಣ್ತುಂಬಿಕೊಳ್ಳಲು ಮುಗಿಬಿದ್ದ ಪ್ರವಾಸಿಗರು

ಬಿಳಿ ಅಮೃತಶಿಲೆಯಿಂದ ನಿರ್ಮಾಣಗೊಂಡಿರುವ ತಾಜ್​ ಮಹಲ್​ ಹುಣ್ಣಿಮೆ ಬೆಳಕಿನಲ್ಲಿ ತನ್ನ ಸೌಂದರ್ಯವನ್ನು ಇಮ್ಮುಡಿಗೊಳಿಸುತ್ತದೆ

craze-for-chamki-of-taj-mahal-on-sharad-purnima-in-agra
ಹುಣ್ಣಿಮೆಯ ಬೆಳಕಲ್ಲಿ ತಾಜ್​ ಮಹಲ್​ (ಈಟಿವಿ ಭಾರತ್​)
author img

By ETV Bharat Karnataka Team

Published : Oct 15, 2024, 12:04 PM IST

Updated : Oct 15, 2024, 12:14 PM IST

ಆಗ್ರಾ, ಉತ್ತರಪ್ರದೇಶ: ಬೆಳಂದಿಗಳ ಬೆಳಕಲ್ಲಿ ತಾಮ್​ಮಹಲ್​ ಸೌಂದರ್ಯವನ್ನು ಆಹ್ಲಾದ ಅನುಭವವೇ ಬೇರೆ. ಅದರಲ್ಲೂ ಶರದ್​ ಪೂರ್ಣಿಮೆಯ ಚಮ್ಕಿ ದೃಶ್ಯ ಸವಿಯಲು ದೇಶ ವಿದೇಶಿ ಪ್ರವಾಸಿಗರು ಮುಂದಾಗುತ್ತಾರೆ. ಇದಕ್ಕಾಗಿ ಈ ಬಾರಿ ನಾಲ್ಕು ದಿನಗಳ ಕಾಲ ಪ್ರವಾಸಿಗರಿಗೆ ಅವಕಾಶ ನೀಡಲಾಗಿದ್ದು, ಈಗಾಗಲೇ ಎಲ್ಲಾ ಟಿಕೆಟ್​ಗಳು ಬುಕ್​ ಆಗಿವೆ.

ಬಿಳಿ ಅಮೃತಶಿಲೆಯಿಂದ ಮಾಡಿರುವ ತಾಜ್​ ಮಹಲ್​ ಹುಣ್ಣಿಮೆ ಬೆಳಕಿನಲ್ಲಿ ತನ್ನ ಸೌಂದರ್ಯವನ್ನು ಇಮ್ಮುಡಿಗೊಳಿಸುತ್ತದೆ. ಚಂದ್ರನ ಬೆಳಕು ಹಲವು ಕೋನಗಳಿಂದ ತಾಜ್​ ಮಹಲ್​ ಮೇಲೆ ಬೀಳುವ ಈ ಶರದ್​ ಪೂರ್ಣಿಮೆಯ ಘಟನೆಯನ್ನು ಚಮ್ಕಿ ಎಂದು ಕರೆಯಲಾಗುವುದು. ಈ ರಾತ್ರಿ ತಾಜ್​ ಮಹಲ್​ ಮತ್ತುಷ್ಟು ಪ್ರಖರವಾಗಿ ಹೊಳೆಯುತ್ತದೆ. ಇದನ್ನು ಕಣ್ಮುಂಬಿಕೊಳ್ಳಲು ಅನೇಕ ಪ್ರವಾಸಿಗರು ಎಡಿಎ ತಾಜ್​ ವೀವ್​ ಪಾಯಿಂಟ್​ನಲ್ಲಿ ಸೇರುತ್ತಾರೆ.

ಶರದ್​ ಪೂರ್ಣಿಮೆಯ ಸಮಯದಲ್ಲಿ ಹೊಳೆಯುವ ತಾಜ್​ ಮಹಲ್​ ವೀಕ್ಷಣೆಗಾಗಿ ಭಾರತೀಯ ಪುರಾತತ್ವ ಇಲಾಖೆ ಆನ್​ಲೈನ್​ನಲ್ಲಿ ಈ ಮೊದಲೇ ಟಿಕೆಟ್​ ಹಂಚಿಕೆ ಶುರು ಮಾಡುತ್ತದೆ. ನಾಲ್ಕು ದಿನದ ಟಿಕೆಟ್​ ಈಗಾಗಲೇ ಬುಕ್​ ಆಗಿದೆ. ಈ ಬಾರಿ ಈ ಹುಣ್ಣಿಮೆಯ ಸೊಬಗನ್ನು ಆಹ್ಲಾದಿಸಲು ವಿದೇಶಿ ಪ್ರವಾಸಿಗರು ಸೇರಿದಂತೆ ದೆಹಲಿ, ಮುಂಬೈಮ ಬೆಂಗಳೂರು, ಅಹಮದಾಬಾದ್​, ಪುಣೆ, ಡೆಹ್ರಡೂನ್​, ಭೋಪಾಲ್​, ಲಕ್ನೋ, ಜೈಪುರ್ ಮತ್ತಿತ್ತರ ನಗರಗಳಿಂದ ಟಿಕೆಟ್​ ಖರೀದಿಯಾಗಿದೆ.

ಏನಿದು ಚಮ್ಕಿ ವಿಸ್ಮಯ​: ಹಿರಿಯ ಪ್ರವಾಸಿ ಗೈಡ್​ ಶಂಶುದ್ದೀನ್​ ಹೇಳುವಂತೆ, ವರ್ಷದ ಎಲ್ಲ ಹುಣ್ಣಿಮೆಗಳಿಗಿಂತ ಶರದ್​ ಪೂರ್ಣಿಮೆಯ ಬೆಳಕು ತಾಜ್​ ಮಹಲ್​ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹುಣ್ಣಿಮೆಯಿಂದ ಐದು ರಾತ್ರಿಗಳು ಈ ಮನೋಹರ ದೃಶ್ಯ ಕಾಣ ಸಿಗುತ್ತದೆ. ಈ ವೇಳೆ, ತಾಜ್​ಮಹಲ್​ ಮೇಲೆ ಬೀಳುವ ಚಂದ್ರನ ಬೆಳಕು ಸ್ಮಾರಕವನ್ನು ಹೊಳೆಯುವಂತೆ ಮಾಡುತ್ತದೆ. ಇದಕ್ಕೆ ಚಮ್ಕಿ ಎನ್ನಲಾಗುವುದು. ಈ ಬಾರಿ ಕೇವಲ ನಾಲ್ಕು ದಿನ ಮಾತ್ರ ಈ ದೃಶ್ಯ ಕಾಣಸಿಗಲಿದೆ ಎಂದಿದ್ದಾರೆ.

ಶರದ್​ ಪೂರ್ಣಿಮೆಯ ಜಾತ್ರೆ: ಹಿರಿಯ ಇತಿಹಾಸಗಾರ ರಾಜ್​ ಕಿಶೋರ್​ ರಾಜೆ ಹೇಳುವಂತೆ ಬಿಳಿ ಅಮೃತ ಶಿಲೆಯ ಮೇಲೆ ಚಂದ್ರನ ಬೆಳಕು ಅದರ ಸೌಂದರ್ಯವನ್ನು ಹೆಚ್ಚಿಸುತ್ತಿತ್ತು. 1984ಕ್ಕೆ ಮುನ್ನ ಈ ದೃಶ್ಯ ಕಣ್ತುಂಬಿಕೊಳ್ಳಲು ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗುತ್ತಿತ್ತು. ಆ ಸಂದರ್ಭದಲ್ಲಿ ಚಮ್ಕಿ ಏಳು ದಿನಗಳ ಕಾಲ ಇರುತ್ತಿತ್ತು. ಜನರು ಸಾಗರೋಪಾದಿಯಲ್ಲಿ ಸಾಗಿ ಈ ದೃಶ್ಯ ಆಸ್ವಾದಿಸುತ್ತಿದ್ದರು.

ಟಿಕೆಟ್​ ದರ: ಆಗ್ರಾದಲ್ಲಿ ಗೃಹಾಭಿವೃದ್ಧಿ ಪ್ರಾಧಿಕಾರ ಎಡಿಎ ತಾಜ್​ ಮಹಲ್​ನ ಚಮ್ಕಿ ನೋಡಲು ಮೆಹ್ತಬ್​​ ಭಾಗ್​​ನಲ್ಲಿ ತಾಜ್​ ವೀವ್​​ ಪಾಯಿಂಟ್​ ಅಭಿವೃದ್ಧಿ ಮಾಡಿದೆ. ಯಮುನಾ ನದಿಯ ದಂಡೆಯ ಮೇಲೆ ಇದು ಇದ್ದು, ಇಲ್ಲಿ ಜನರು ಟಿಕೆಟ್​ ಖರೀದಿಸಿದ ಹುಣ್ಣಿಮೆಯ ಸೊಬಗನ್ನು ಕಾಣಬಹುದು. ತಾಜ್​ಮಹಲ್​ನ ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ 50 ರೂ ಟಿಕೆಟ್​ ನಿಗದಿಪಡಿಸಲಾಗಿದೆ. ವಿದೇಶಿಗರಿಗೆ 200 ರೂ ನಿಗದಿ ಮಾಡಲಾಗಿದೆ.

50-50ರ ವೇಳಾಪಟ್ಟಿಯಲ್ಲಿ ವೀಕ್ಷಣೆ: ಶರದ್​ ಪೂರ್ಣಿಮೆಯ ದಿನದಂದು ತಾಜ್​ ಮಹಲ್​ ವೀಕ್ಷಣೆ ರಾತ್ರಿ 8 ರಿಂದ ಆರಂಭವಾಗಿ ಭಾನುವಾರ ರಾತ್ರಿವರೆಗೆ ಮುಂದುವರೆಯಲಿದೆ. ಶರದ್​ ಪೂರ್ಣಿಮಾದಲ್ಲಿ ವೀಕ್ಷಣೆಯ ಸಮಯ ರಾತ್ರಿ 8ರಿಂದ 12ರವರೆಗೆ ಇರಲಿದೆ. ಇದನ್ನು 8 ಅವಧಿಯಾಗಿ ವಿಂಗಡಿಸಿ ಅರ್ಧ ಗಂಟೆಗಳ ವೀಕ್ಷಣೆಗೆ ಸಮಯ ನೀಡಲಾಗಿದೆ. ಒಂದು ಅವಧಿಯಲ್ಲಿ 50 ಪ್ರವಾಸಿಗರು ಪ್ರವೇಶ ಪಡೆಯಲಿದ್ದಾರೆ. ಒಂದು ರಾತ್ರಿಯಲ್ಲಿ 400 ಮಂದಿಗೆ ಅವಕಾಶ ನೀಡಲಿದ್ದು, ಈ ಸಂಬಂಧ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಎಎಸ್​ಐನ ಸೂಪರಿಟೆಂಡೆಂಡಿಂಗ್​ ಪುರಾತತ್ವಶಾಸ್ತ್ರಜ್ಞ ಡಾ ರಾಜ್​ಕುಮಾರ್​ ಪಟೇಲ್​ ತಿಳಿಸಿದ್ದಾರೆ.

ವಿದೇಶಿಗರಿಗೆ 750 ಟಿಕೆಟ್​: ಸುಪ್ರೀಂ ಕೋರ್ಟ್​ ಆದೇಶದಂತೆ ರಾತ್ರಿ ತಾಜ್​ ಮಹಲ್​ ವೀಕ್ಷಣೆಗೆ ಆನ್​ಲೈನ್​ ಟಿಕೆಟ್​ ನೀಡಲಾಗುವುದು. ಇದಕ್ಕಾಗಿ ಭಾರತೀಯರಿಗೆ ಒಂದು ಟಿಕೆಟ್​ಗೆ 510 ಹಾಗೂ ವಿದೇಶಿ ಪ್ರವಾಸಿಗರಿಗೆ 750 ರೂ ಟಿಕೆಟ್​ ದರ ನಿಗದಿಸಲಾಗಿದೆ. ಈ ಟಿಕೆಟ್​ ಅನ್ನು ಶರದ್​ ಪೂರ್ಣಿಮೆಗೆ ಮುನ್ನವೇ ಆನ್​ಲೈನ್​ನಲ್ಲಿ ನೀಡಲಾಗುವುದು.

ಇದನ್ನೂ ಓದಿ: ತಾಜ್​ ಮಹಲ್​ ಸೌಂದರ್ಯ ಕುಂದಿಸುತ್ತಿರುವ ಕೀಟಗಳು; ಕ್ರಮಕ್ಕೆ ಮುಂದಾದ ಎಎಸ್​ಐ

Last Updated : Oct 15, 2024, 12:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.