ನವದೆಹಲಿ: ಈಗಾಗಲೇ ಬಿರುಬೇಸಿಗೆ ಆರಂಭವಾಗಿದೆ. ಈ ಬಾರಿ ಆರಂಭದಲ್ಲಿ ಭೂಮಿ ನಿಗಿ ನಿಗಿ ಕೆಂಡವಾಗಿದೆ. ಸಾಮಾನ್ಯವಾಗಿ ಮಾರ್ಚ್ ಮತ್ತು ಜೂನ್ ನಡುವೆ ಉತ್ತರ ಭಾರತದಲ್ಲಿ ಇಷ್ಟೊಂದು ಸೆಕೆ ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಆರಂಭದಲ್ಲೇ ಸೂರ್ಯ ಪ್ರಕೋಪ ಬೀರುತ್ತಿದ್ದಾನೆ.
2025ರ ಹವಾಮಾನದ ಮಾದರಿಗಳಲ್ಲಿ ನಾಟಕೀಯ ಏರಿಳಿತಗಳು ಕಂಡು ಬರುತ್ತಿವೆ. ಈ ವರ್ಷದ ಆರಂಭದಲ್ಲಿ ಶಾಖದ ಅಲೆಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದು, ಮಾತ್ರವಲ್ಲದೇ ಏಕಕಾಲದಲ್ಲಿ ಭಾರಿ ಪ್ರಮಾಣದ ಹೀಟ್ ವೇವ್ ಕಾಣಿಸಿಕೊಳ್ಳುತ್ತಿದೆ.ಈ ಮೂಲಕ ದೇಶದಾದ್ಯಂತ ತಾಪಮಾನ ಏರಿಕೆ.
ರೆಕಾರ್ಡ್-ಬ್ರೇಕಿಂಗ್ ಆರಂಭಿಕ ಹೀಟ್‌ವೇವ್: ತಾಪಮಾನದಲ್ಲಿನ ಹೆಚ್ಚಳವನ್ನು ಮೊದಲು ಫೆಬ್ರವರಿ 26 ರಂದು ಕಂಡುಬಂತು. ಮುಂಬೈನಲ್ಲಿ 38.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದು ಸಾಮಾನ್ಯಕ್ಕಿಂತ ಸುಮಾರು ಆರು ಡಿಗ್ರಿ ಸೆಲ್ಸಿಯಸ್ ಹೆಚ್ಚು ಎಂಬುದು ಗಮನಾರ್ಹ. ಭಾರತೀಯ ಹವಾಮಾನ ಇಲಾಖೆ ಬಿಸಿಗಾಳಿಯ ಬಗ್ಗೆ ಎಚ್ಚರಿಕೆ ನೀಡಿತ್ತು. ದೈನಂದಿನ ತಾಪಮಾನವು 37 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿರುವುದು ಗೊತ್ತಾಗಿದೆ.
ಈ ಋತುವಿನಲ್ಲಿ ಮಾರ್ಚ್ 16 ರಂದು ಒಡಿಶಾದ ಬೌಧ್ ಜಿಲ್ಲೆಯಲ್ಲಿ 43.6 ಡಿಗ್ರಿ ಸೆಲ್ಸಿಯಸ್‌ನಲ್ಲಿ ಅತ್ಯಧಿಕ ತಾಪಮಾನ ದಾಖಲಿಸಿದೆ. ಮಾರ್ಚ್ 15 ರಂದು ಹಿಂದಿನ ಗರಿಷ್ಠ 41.7 ಡಿಗ್ರಿ ಸೆಲ್ಸಿಯಸ್ ಇದ್ದದ್ದು ಮರುದಿನ 2 ಡಿಗ್ರಿಯಷ್ಟು ತಾಪಮಾನ ಹೆಚ್ಚಾಗಿತ್ತು. ಅಷ್ಟೇ ಅಲ್ಲ ಒಡಿಶಾದ ಜರ್ಸುಗುಡಾದಲ್ಲಿ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಮಾರ್ಚ್ ಮಧ್ಯದಿಂದ ಒಡಿಶಾದ ಒಳಭಾಗವನ್ನು ಹೊರತುಪಡಿಸಿ ಪೂರ್ವ ಭಾರತದಲ್ಲಿ ಶಾಖದ ಅಲೆಗಳು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಡಾ ಶಶಿ ಕಾಂತ್ ಹೇಳಿದ್ದಾರೆ.
ಹವಾಮಾನ ಬದಲಾವಣೆಯ ಕುರಿತು ತಜ್ಞರ ಎಚ್ಚರಿಕೆ: ಮಾನವ ಕೇಂದ್ರಿತ ಚಟುವಟಿಕೆಗಳು ನೇರವಾಗಿ ಹವಾಮಾನ ಬದಲಾವಣೆಗೆ ಕಾರಣವಾಗಿವೆ ಎಂದು ಪರಿಸರವಾದಿ ಮನು ಸಿಂಗ್ ಹೇಳಿದ್ದಾರೆ. ಫೆಬ್ರವರಿ 25 ರಂದು ಭಾರತವು ಚಳಿಗಾಲದಲ್ಲಿ ಮೊದಲ ಭಾರಿ ಪ್ರಮಾಣದ ಉಷ್ಣಾಂಶ ಏರಿಕೆಯನ್ನು ದಾಖಲಿಸಿತು. ಇದು ಗೋವಾ ಮತ್ತು ಮಹಾರಾಷ್ಟ್ರದ ಮೇಲೆ ಪರಿಣಾಮ ಬೀರಿತು. ಇದು ಭಾರತದ ಹವಾಮಾನ ದಾಖಲೆಗಳಲ್ಲಿ ಹಿಂದೆ ಕೇಳಿರದ ವಿದ್ಯಮಾನವಾಗಿದೆ ಎಂದು ಮನು ಸಿಂಗ್ ಹೇಳಿದ್ದಾರೆ.
ಹೆಚ್ಚಿದ ತಾಪಮಾನವು ಮಾನವರ ಮೇಲೆ ಆಕ್ಸಿಡೇಟಿವ್ ಶಾರೀರಿಕ ಒತ್ತಡವನ್ನು ಹೆಚ್ಚುವಂತೆ ಮಾಡುತ್ತದೆ. ಹಗಲಿನ ಶಾಖದ ಪ್ರಭಾವದಿಂದ ಚೇತರಿಸಿಕೊಳ್ಳುವುದು ಕಷ್ಟಕರವಾಗಿದೆ. ಇದರಿಂದ ವಯಸ್ಸಾದವರು, ಮಕ್ಕಳು ಮತ್ತು ಯಾವುದೇ ಆಧುನಿಕ ಸೌಲಭ್ಯ ಇಲ್ಲದವರ ಮೇಲೆ ಭಾರಿ ಶಾರೀರಿಕ ಪರಿಣಾಮ ಬೀರುತ್ತದೆ. ಇದರಿಂದ ಆರೋಗ್ಯದ ಅಪಾಯಗಳು ಉಲ್ಬಣಗೊಳ್ಳುವಂತೆ ಮಾಡುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಫೆಬ್ರವರಿಯಲ್ಲೇ ಈ ಬಾರಿ ಭಾರಿ ಸೆಕೆ: ಈ ಬಾರಿಯ ಫೆಬ್ರವರಿ ತಿಂಗಳು 125 ವರ್ಷಗಳಲ್ಲಿ ಅತ್ಯಂತ ಶುಷ್ಕ ತಿಂಗಳುಗಳಲ್ಲಿ ಒಂದಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಂಕಿ- ಅಂಶಗಳು ಉಲ್ಲೇಖಿಸಿವೆ. ತಾಪಮಾನ ಏರಿಕೆಯ ಪ್ರವೃತ್ತಿಯು ಮಾರ್ಚ್‌ನಲ್ಲಿಯೂ ಮುಂದುವರೆದಿದೆ ಮತ್ತು ರಾತ್ರಿಯ ತಾಪಮಾನವು ಇನ್ನೂ ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಹವಾಮಾನ ಬದಲಾವಣೆಯ ಪರಿಣಾಮಗಳಿಂದಾಗಿ ಕಳೆದ ದಶಕದಿಂದ ಅತ್ಯಂತ ಹೆಚ್ಚು ಬೆಚ್ಚಗಿನ ರಾತ್ರಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕಳೆದ ವರ್ಷ ನಡೆದ ಜಾಗತಿಕ ಅಧ್ಯಯನವು, ಭಾರತದಲ್ಲಿ ತೀವ್ರಗೊಳ್ಳುತ್ತಿರುವ ಹವಾಮಾನ ಬದಲಾವಣೆಯಿಂದಾಗಿ ತೀವ್ರ ಶಾಖದ ರಾತ್ರಿಗಳನ್ನು ಹೆಚ್ಚುವಂತೆ ಮಾಡಿದೆ ಎಂದು ಹೇಳಿದೆ.
ಫೆಬ್ರವರಿ 2025, 1901ರ ಬಳಿಕ ದಾಖಲಾದ ಅತ್ಯಂತ ಬಿಸಿಗಾಳಿ ಇರುವ ತಿಂಗಳಾಗಿದೆ. ಈ ತಿಂಗಳ ಸರಾಸರಿ ತಾಪಮಾನವು 22.04 ° C ನಷ್ಟು ದಾಖಲಾಗಿರುತ್ತದೆ. ಆದರೆ ಈ ಬಾರಿ ಶಾಖದ ಪ್ರಮಾಣ 29.07 ° C ದಾಖಲಾಗಿದೆ. ಫೆಬ್ರವರಿ 1901 ರಿಂದ ಎರಡನೇ ಅತಿ ಹೆಚ್ಚು ಗರಿಷ್ಠ ತಾಪಮಾನವನ್ನು ದಾಖಲಿಸಿದ ವರ್ಷವಾಗಿದೆ.
ಆರೋಗ್ಯ ಮತ್ತು ಕೃಷಿಯ ಮೇಲೆ ಉಂಟಾಗುವ ಪರಿಣಾಮಗಳು: ಹಗಲು ಮತ್ತು ರಾತ್ರಿ ವೇಳೆ ಹೆಚ್ಚಾಗುತ್ತಿರುವ ತಾಪಮಾನದಿಂದಾಗಿ ತೀವ್ರ ಆರೋಗ್ಯ ಸಮಸ್ಯೆಗಳು ಉಂಟಾಗಲಿವೆ. ಹೆಚ್ಚಿದ ರಾತ್ರಿಯ ತಾಪಮಾನವು ಸಾಮಾನ್ಯ ನಿದ್ರೆಯ ಚಕ್ರವನ್ನು ಬದಲಾಯಿಸಬಹುದು ಎಂದು ಸಿಂಗ್ ಅವರು ಎಚ್ಚರಿಸಿದ್ದಾರೆ. ಇದು ವಿಶೇಷವಾಗಿ ದುರ್ಬಲ ವರ್ಗದ ಜನರಲ್ಲಿ ಮರಣದ ಸಂಖ್ಯೆಯನ್ನು ಹೆಚ್ಚಿಸಬಹುದು.
ಇನ್ನು ಹೆಚ್ಚುತ್ತಿರುವ ತಾಪಮಾನದಿಂದಾಗಿ ಕೃಷಿ ಉತ್ಪಾದನೆಯೂ ಅಪಾಯದಲ್ಲಿದೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿಯ ವರದಿಯು ರಾತ್ರಿಯ ತಾಪಮಾನದಲ್ಲಿ 1 ° C ಹೆಚ್ಚಳವು ಗೋಧಿ ಇಳುವರಿಯನ್ನು 6 ಪ್ರತಿಶತ ಮತ್ತು ಅಕ್ಕಿ ಇಳುವರಿಯನ್ನು 10 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ.
ಇದನ್ನು ಓದಿ ಮಿತಿಮೀರಿದ ಆನ್ಲೈನ್ ಗೇಮ್, ಬೆಟ್ಟಿಂಗ್ ಆ್ಯಪ್ಗಳ ಹಾವಳಿ: ನಿಷೇಧದ ಹೊರತಾಗಿ 18 ತಿಂಗಳಲ್ಲಿ 24 ಸಾವು!: