ಛತ್ತರ್‌ಪುರ, ಮಧ್ಯಪ್ರದೇಶ: ಬುಂದೇಲ್‌ಖಂಡ್‌ನ ಛತ್ತರ್‌ಪುರ ಜಿಲ್ಲೆಯಲ್ಲಿರುವ ಧುಬೇಲಾದಲ್ಲಿ ಮಹಾರಾಜ ಛತ್ರಸಾಲ್ ತನ್ನ ಮೊದಲ ಪತ್ನಿ ಕಮಲಾಪತಿಯ ನೆನಪಿಗಾಗಿ ಸಮಾಧಿ ನಿರ್ಮಿಸಿದ್ದ. ತಾಜ್ ಮಹಲ್‌ನಂತೆಯೇ ಇದನ್ನು ಕೂಡಾ ಬಹಳ ಆಸ್ತ್ಯವಹಿಸಿ ಕಟ್ಟಲಾಗಿದೆ. ಅದಕ್ಕಾಗಿಯೇ ಜನರು ಇದನ್ನು ಬುಂದೇಲ್‌ಖಂಡದ ತಾಜ್ ಮಹಲ್ ಎಂದೇ ಕರೆಯಲಾಗುತ್ತದೆ . ಆಗ್ರಾದ ತಾಜ್ ಮಹಲ್ ಯಮುನಾ ನದಿಯ ದಡದಲ್ಲಿ ನಿರ್ಮಿಸಲಾಗಿದ್ದರೆ, ಬುಂದೇಲ್‌ಖಂಡದ ಈ ಮಹಲನ್ನು ದೊಡ್ಡ ಕೊಳದ ದಡದಲ್ಲಿ ನಿರ್ಮಾಣ ಮಾಡಲಾಗಿದೆ.
ಬುಂದೇಲ್‌ಖಂಡ್‌ನ ತಾಜ್‌ಮಹಲ್‌ನಲ್ಲಿರುವ ಕಲಾಕೃತಿಯು ಆಗ್ರಾದ ತಾಜ್‌ಮಹಲ್‌ಗಿಂತ ಏನೂ ಕಡಿಮೆಯಿಲ್ಲ ಬಿಡಿ. ಈ ಸ್ಥಳದ ವಿಶೇಷ ಎಂದರೆ ಸಂಜೆಯ ನಂತರ ಅಲ್ಲಿಗೆ ಹೋಗುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ಸಂಜೆಯ ನಂತರ ಕಾಲುಂಗುರಗಳ ಸದ್ದು ಇಲ್ಲಿ ಅನುರಣಿಸುತ್ತದೆ ಎಂಬ ಮಾತಿದೆ. ಈ ಕಾಲುಂಗುರಗಳು ಮಹಾರಾಜ ಛತ್ರಸಾಲ್‌ನ ರಾಣಿ ಕಮಲಾಪತಿಗೆ ಸೇರಿದ್ದು ಎಂದು ನಂಬಲಾಗಿದೆ.

ಯಾರು ಈ ಛತ್ರಸಾಲ್?: ಬುಂದೇಲಖಂಡದ ಪರಾಕ್ರಮಿ ರಾಜ ಮಹಾರಾಜ ಛತ್ರಸಾಲ್ ಅವರ ಹೆಸರು ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿರುವುದು ಗಮನಾರ್ಹ. ಬುಂದೇಲ್‌ಖಂಡದ ಮಾತು ಬಂದಾಗಲೆಲ್ಲ ರಾಜಾ ಛತ್ರಸಾಲನ ಹೆಸರು ನಾಲಿಗೆಯ ಮೇಲೆ ಹರಿದಾಡುವುದು ಕಾಮನ್. ಛತ್ತರ್‌ಪುರದ ಬಳಿಯ ಧುಬೇಲಾದಲ್ಲಿ ಮಹಾರಾಜ ಛತ್ರಸಾಲ್ ತನ್ನ ಪತ್ನಿಯ ನೆನಪಿಗಾಗಿ ನಿರ್ಮಿಸಿದ ಸಮಾಧಿಯ ಮೇಲೆ ಜನರಿಗೆ ಅಗಾಧ ನಂಬಿಕೆ ಇದೆ. ಇಂದಿಗೂ ಈ ಸಮಾಧಿಯಲ್ಲಿ ಛತ್ರಸಾಲನ ಮೊದಲ ಪತ್ನಿಯ ಕಾಲುಂಗುರಗಳ ಝೇಂಕಾರದ ಸದ್ದು ಕೇಳಿಸುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಸಂಜೆ ವೇಳೆ ಅಲ್ಲಿಗೆ ಹೋಗುವುದನ್ನು ನಿಷೇಧಿಸಲಾಗಿದೆ.

ಪ್ರೀತಿಯ ಪತ್ನಿಗಾಗಿ ನಿರ್ಮಾಣವಾಯ್ತು ಭವ್ಯ ಸಮಾಧಿ: ಛತ್ತರ್‌ಪುರದ ಬಳಿ ಇರುವ ಧುಬೇಲಾ ಬಹಳ ಚಿಕ್ಕ ಸ್ಥಳವಾಗಿದೆ. ಆದರೆ, ಹೆಸರು ತುಂಬಾ ದೊಡ್ಡದಾಗಿದೆ. ದೇಶ ಮತ್ತು ವಿದೇಶದ ಜನರು ಧುಬೇಲದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಧುಬೇಲಾ ಒಮ್ಮೆ ಬುಂದೇಲ್‌ಖಂಡದ ವೀರ ಯೋಧ ಮಹಾರಾಜ ಛತ್ರಸಾಲ್ ಅವರ ನಿವಾಸವಾಗಿತ್ತು. ಅವರು ಮೊಘಲ್ ಚಕ್ರವರ್ತಿ ಔರಂಗಜೇಬನ ಪಡೆಗಳ ವಿರುದ್ಧ ಅನೇಕ ಯುದ್ಧಗಳನ್ನು ಕೈಗೊಂಡಿದ್ದರು. ಅಲ್ಲಿ ಮಹಾರಾಜ ಛತ್ರಸಾಲ್ ತನ್ನ ಅರಮನೆಯನ್ನು ನಿರ್ಮಿಸಿ ಬುಂದೇಲಖಂಡವನ್ನು ದೀರ್ಘಕಾಲ ಆಳಿದಾಗ ಧುಬೇಲಾದ ಇತಿಹಾಸವು ಚರ್ಚೆಗೆ ಬಂದಿತು.

ಈ ತಾಜ್ ಮಹಲ್ ನ ಕಲಾಕೃತಿ ಅತ್ಯದ್ಬುತ: ವಾಸ್ತವವಾಗಿ ಮಹಾರಾಜ ಛತ್ರಸಾಲ್ ತನ್ನ ಮೊದಲ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಪ್ರೀತಿಯ ಹೆಂಡತಿ ಮರಣದ ನಂತರ ಮಹಾರಾಜ ಛತ್ರಸಾಲ್ ಈ ಸಮಾಧಿಯನ್ನು ನಿರ್ಮಿಸಿದನು. ಅದು ಇಂದಿಗೂ ಆಗ್ರಾದ ತಾಜ್ ಮಹಲ್ ಗಿಂತ ಏನೂ ಕಮ್ಮಿಯಿಲ್ಲ ಬಿಡಿ. ಆದ್ದರಿಂದಲೇ ಜನ ಇದನ್ನು ಬುಂದೇಲ್‌ಖಂಡದ ತಾಜ್‌ಮಹಲ್ ಎಂದೇ ಕರೆಯುತ್ತಾರೆ. ಛತ್ರಸಾಲನ ಮೊದಲ ಪತ್ನಿ ಕಮಲಾಪತಿಯ ಅರಮನೆ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ. ಕೊಳದ ಇನ್ನೊಂದು ಬದಿಯಲ್ಲಿ ಪರ್ವತಗಳ ಮಡಿಲಲ್ಲಿ ನೆಲೆಗೊಂಡಿರುವ ಈ ಅರಮನೆಯು ಕರಕುಶಲತೆಗೆ ಅದ್ಭುತ ಸಾಕ್ಷಿಯಾಗಿ ನಿಂತಿದೆ. ರಾಣಿ ಕಮಲಾಪತಿಯ ನೆನಪಿಗಾಗಿ ನಿರ್ಮಿಸಲಾದ ಈ ಸ್ಮಾರಕವು 180 ವರ್ಣಚಿತ್ರಗಳನ್ನು ಹೊಂದಿದೆ. ಮೇಲಿನ ವಿಭಾಗವು 7 ಗುಮ್ಮಟಗಳನ್ನು ಹೊಂದಿದೆ. ಪ್ರತಿಯೊಂದೂ 48-ದಳಗಳ ಕಮಲದ ಹೂವುಗಳನ್ನು ಹೊಂದಿದೆ.

400 ವರ್ಷಗಳ ಹಿಂದೆ ನಿರ್ಮಿಸಿದ ಸ್ಮಾರಕ: ಮಹಾರಾಜ ಛತ್ರಸಾಲ್ ತನ್ನ ಮೊದಲ ಪತ್ನಿ ಕಮಲಾಪತಿಯ ನೆನಪಿಗಾಗಿ ಅದ್ಭುತವಾದ ಸ್ಮಾರಕವನ್ನು ನಿರ್ಮಿಸಿದನು. ಅದು ಕಮಲದ ದಳದ ಆಕಾರದಲ್ಲಿದೆ. ಪ್ರತಿಯೊಂದು ಕಿಟಕಿಯು ಕಮಲವನ್ನೇ ಹೋಲುತ್ತದೆ. ಅದು 48 ದಳಗಳ ಮೇಲೆ ನಿಂತಿದೆ. ಛತ್ರಸಾಲ್ ಐದು ವಿವಾಹ ಮಾಡಿಕೊಂಡಿದ್ದನು. ಅದರಲ್ಲಿ ಕಮಲಪತಿಯೇ ಪ್ರಮುಖ ಪತ್ನಿಯಾಗಿದ್ದಳು. ಛತ್ರಸಾಲ್ ಈ ಸ್ಮಾರಕವನ್ನು ಸುಮಾರು 400 ವರ್ಷಗಳ ಹಿಂದೆ ನಿರ್ಮಿಸಿದ. ಕಾಲುಂಗುರಗಳ ಸದ್ದು ಕೇಳಿಸುತ್ತಿದೆ ಎಂಬ ನಂಬಿಕೆ ಇದೆ. ಹೀಗಾಗಿ ಪುರಾತತ್ವ ಇಲಾಖೆಯು ಸಂಜೆ ಇಲ್ಲಿಗೆ ಹೋಗುವುದನ್ನು ನಿಷೇಧಿಸಿದೆ ಎಂದು ಇಲ್ಲಿನ ಇತಿಹಾಸಕಾರರು ಹೇಳುತ್ತಿದ್ದಾರೆ.
- ಔರಂಗಜೇಬನ ಸೈನ್ಯವು ರಾಜಾ ಛತ್ರಸಾಲ್‌ನೊಂದಿಗೆ ಎದುರು ಬದುರಾದಾಗ ಬುಂದೇಲ್‌ಖಂಡದ ಭೂಮಿಯಲ್ಲಿ ದುರಂತ ಸಂಭವಿಸಿತು.
- ಮಹಾರಾಜ ಛತ್ರಸಾಲನ ಪ್ರಾಣ ಉಳಿಸಿದ ಕುದುರೆ ಹೀಗೆಯೇ ‘ಭಲೇ ಭಾಯಿ’ ಇಂದಿಗೂ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ.
ಮಹಾರಾಜ ಛತ್ರಸಾಲ್ ಗೆ ಐವರು ಹೆಂಡತಿಯರು: ಬುಂದೇಲ್‌ಖಂಡ್ ಇತಿಹಾಸಕಾರ ಗೌರವ್ ದೀಕ್ಷಿತ್ ಅವರ ಪ್ರಕಾರ, "ಮಹಾರಾಜ ಛತ್ರಸಾಲ್ ತನ್ನ ಮೊದಲ ಪತ್ನಿ ಕಮಲಾಪತಿಯ ನೆನಪಿಗಾಗಿ ಈ ಸ್ಮಾರಕವನ್ನು ನಿರ್ಮಿಸಿದನು. ಮಹಾರಾಜ ಐದು ಪತ್ನಿಯರನ್ನು ಹೊಂದಿದ್ದನು. ಮಹಾರಾಣಿ ಕಮಲಪತಿ ದಂಧೇರೆ ರಾಜರ ಮಗಳು. ಛತ್ರಸಾಲ್ ಮಹಾರಾಜನು ತನ್ನ ಮೊದಲ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದನು ಎಂದು ಅವರು ವಿವರಣೆ ನೀಡಿದ್ದಾರೆ.