ETV Bharat / bharat

Exclusive| ಕ್ಯಾ.ಸುಮಿತ್ ಸಬರ್ವಾಲ್ ವಿಮಾನ ದುರಂತ ತಡೆಯಲು ತಮ್ಮ ಕೈಲಾದ ಎಲ್ಲ ಪ್ರಯತ್ನ ಮಾಡಿದ್ದಾರೆ: ಮಾಜಿ ಸಹೋದ್ಯೋಗಿ - CAPTAIN SUMIT SABARWAL

ಕ್ಯಾ.ಸಬರ್ವಾಲ್ ವಿಮಾನವನ್ನು ಚೆನ್ನಾಗಿ ನಿರ್ವಹಿಸುತ್ತಿದ್ದರು. ಆದರೆ, ಥ್ರಸ್ಟ್ (ಹಾರಾಟಕ್ಕೆ ಬೇಕಿರುವ ಒತ್ತಡ) ಕೊರತೆಯಿಂದಾಗಿ ವಿಮಾನ ಬೆಂಕಿ ಉಂಡೆಯಂತೆ ಪತನಗೊಂಡಿತು ಎಂದು ಕ್ಯಾಪ್ಟನ್ ಸಬರ್ವಾಲ್ ಅವರಿಗೆ ತರಬೇತಿ ನೀಡಿದ ಮಾಜಿ ಏರ್ ಇಂಡಿಯಾ ಪೈಲಟ್ ಹೇಳಿದರು.

ಕ್ಯಾಪ್ಟನ್ ಸುಮಿತ್ ಸಬರ್ವಾಲ್
ಕ್ಯಾಪ್ಟನ್ ಸುಮಿತ್ ಸಬರ್ವಾಲ್ (ಫೋಟೋ- X@BipinAndSingh)
author img

By ETV Bharat Karnataka Team

Published : June 13, 2025 at 11:43 PM IST

Updated : June 14, 2025 at 12:06 AM IST

7 Min Read

ಲೇಖಕರು: ಸುರಭಿ ಗುಪ್ತಾ

ನವದೆಹಲಿ: ಗುಜರಾತ್ ನ ಅಹಮದಾಬಾದ್ ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ-171 ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ ಪತನಗೊಂಡಿರುವುದು ದೇಶ ಮತ್ತು ಇಡೀ ವಾಯುಯಾನ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಗುರುವಾರ ಮಧ್ಯಾಹ್ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ವಿಮಾನವು ಮೇಘನದಿ ನಗರ ಪ್ರದೇಶದಲ್ಲಿರುವ ವೈದ್ಯಕೀಯ ಕಾಲೇಜಿನ ಆವರಣದ ಮೇಲೆ ಅಪ್ಪಳಿಸಿತು. ಇದರ ಪರಿಣಾಮ 265 ಜನರು ಸಾವನ್ನಪ್ಪಿದರು. ವಿಮಾನದಲ್ಲಿ ಸಿಬ್ಬಂದಿ ಸೇರಿ 242 ಪ್ರಯಾಣಿಕರಿದ್ದರು. ಈ ಪೈಕಿ ಓರ್ವ ಹೊರತುಪಡಿಸಿ ಉಳಿದ ಎಲ್ಲರೂ ಅಸುನೀಗಿದರು. ಅಷ್ಟೇ ಅಲ್ಲ, ವಿಮಾನ ಅಪ್ಪಳಿಸಿದಾಗ ಅಲ್ಲಿದ್ದ 24 ಜನರ ಜೀವವೂ ಹಾರಿ ಹೋಯಿತು. ವಿಶ್ವಾಸ್ ಕುಮಾರ್ ರಮೇಶ್ ಎಂಬ ಒಬ್ಬ ಪ್ರಯಾಣಿಕ ಮಾತ್ರ ಅಪಘಾತದಿಂದ ಪವಾಡಸದೃಶ ರೀತಿಯಲ್ಲಿ ಬದುಕಿ ಬಂದರು. ಈ ವಿಮಾನವನ್ನು ಕ್ಯಾಪ್ಟನ್ ಸುಮಿತ್ ಸಬರ್ವಾಲ್ ಮತ್ತು ಫಸ್ಟ್ ಆಫೀಸರ್ ಕ್ಲೈವ್ ಕುಂದರ್ ಮುನ್ನಡೆಸುತ್ತಿದ್ದರು.

ಇದೇ (AI-171) ವಿಮಾನದಲ್ಲಿ ಈ ಹಿಂದೆ ತಮ್ಮ ಜೊತೆ ಸಹ ಪೈಲಟ್ ಆಗಿ ಕೆಲಸ ಮಾಡಿದ್ದ ಕ್ಯಾಪ್ಟನ್ ಸುಮಿತ್ ಸಬರ್ವಾಲ್ ಅವರ ಕುರಿತು ಏರ್ ಇಂಡಿಯಾ ಮಾಜಿ ಪೈಲಟ್ ಕ್ಯಾಪ್ಟನ್ ನರೇಶ್ ಕುಮಾರ್ ಬೆರಿ ಅವರು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ. ಘಟನೆಗೆ ತೀವ್ರ ಆಘಾತ ಮತ್ತು ತಮ್ಮ ಸಹೋದ್ಯೋಗಿಯನ್ನು ಕಳೆದುಕೊಂಡಿರುವುದಕ್ಕೆ ಅತೀವ ಶೋಕ ವ್ಯಕ್ತಪಡಿಸಿ, ಹಲವು ವಿಚಾರಗಳನ್ನು ಅವರು ಹಂಚಿಕೊಂಡರು.

ಸುಮಿತ್ ಸಬರ್ವಾಲ್ ತುಂಬಾ ಒಳ್ಳೆಯ ಹುಡುಗ. ಉತ್ತಮ ಪೈಲಟ್. ಆತನಿಗೆ ಸಾಕಷ್ಟು ಅನುಭವವಿತ್ತು. ಅವರ ತಂದೆ ಡಿಜಿಸಿಎಯಲ್ಲಿ ಉಪ ನಿರ್ದೇಶಕರಾಗಿದ್ದರು. 80ರ ದಶಕದಲ್ಲಿ ಪೈಲಟ್ ಪರವಾನಗಿ ಪಡೆದು ಅವರು ಕೆಲಸ ಮಾಡಿದವರು. ಇನ್ನು, ಕ್ಯಾಪ್ಟನ್ ಸುಮಿತ್ ಸಬರ್ವಾಲ್ 8,200 ಗಂಟೆಗಳಷ್ಟು ಹಾರಾಟದ ಅನುಭವ ಹೊಂದಿದ್ದರು. ಕಾಕ್ ಪಿಟ್ ನಲ್ಲಿದ್ದ ಮೊದಲ ಅಧಿಕಾರಿ (First Officer) ಕ್ಲೈವ್ ಕುಂದರ್ ಅವರಿಗೆ 1,100 ಗಂಟೆಗಳಷ್ಟು ಹಾರಾಟದ ಅನುಭವವಿತ್ತು. ಇಬ್ಬರೂ ಪೈಲಟ್‌ಗಳು ಸಮರ್ಥ ವೃತ್ತಿಪರರೇ. ಆದರೆ, ನತದೃಷ್ಟ ವಿಮಾನ ಕೊನೆಯ ಕ್ಷಣಗಳಲ್ಲಿ ಅವರಿಗೆ ಸಂಕೀರ್ಣ ಮತ್ತು ಭಾರೀ ಸ್ವರೂಪದ ತಾಂತ್ರಿಕ ತೊಂದರೆಗಳನ್ನು ತಂದಿಟ್ಟಿತು ಎಂದರು.

ಕ್ಯಾ.ಸಬರ್ವಾಲ್ ಎಷ್ಟು ಸಾಧ್ಯವಾಗುತ್ತೋ ಅಷ್ಟು ಕಾಲ ವಿಮಾನವನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ವಿಮಾನದ ಎರಡೂ ರೆಕ್ಕೆಗಳನ್ನು ಚೆನ್ನಾಗಿಯೇ ನಿರ್ವಹಿಸಿದ್ದಾರೆ. ಇದೇ ಕಾರಣಕ್ಕೆ ವಿಮಾನ ನೇರವಾಗಿ ತನ್ನ ಮೂಗಿನ ಮೂಲಕ ನೆಲಕ್ಕಪ್ಪಳಿಸದೇ, ನಿಧಾನವಾಗಿ ಕೆಳಗಿಳಿಯುತ್ತಾ ಬೆಂಕಿಯ ಉಂಡೆಯಂತೆ ಹೊತ್ತಿ ಉರಿದು ಹೋಯಿತು ಎಂದು ಬೆರಿ ಹೇಳಿದರು.

ತಾಂತ್ರಿಕ ದೋಷ ಶಂಕೆ: ಈ ಕುರಿತು ತನಿಖಾಧಿಕಾರಿಗಳು ಪರಿಶೀಲಿಸಬೇಕಾದ ಹಲವು ಸಂಭಾವ್ಯ ಕಾರಣಗಳನ್ನು ಕ್ಯಾ.ಬೆರಿ ತಿಳಿಸಿದರು. ಇಂಧನದ ಹರಿವಿನ ಅಡಚಣೆಗಳು, ವಿದ್ಯುತ್ ಅಸಮರ್ಪಕ ಕಾರ್ಯ ನಿರ್ವಹಣೆ ಅಥವಾ ಎಂಜಿನ್ ನ ಸಂಪೂರ್ಣ ಜ್ವಾಲೆ ಆರುವಿಕೆಗಳೆಲ್ಲವೂ ಇದರಲ್ಲಿ ಸೇರಿವೆ. ಎಂಜಿನ್‌ಗಳು ಉರಿಯುತ್ತಿದ್ದವೋ, ಇಲ್ಲವೋ ಅಥವಾ ತಾಂತ್ರಿಕ ಸಮಸ್ಯೆಯಿಂದಾಗಿ ಇಂಧನ ಎಂಜಿನ್ ಗಳನ್ನು ತಲುಪಲು ಸಾಧ್ಯವಾಗದೆಯೂ ಇರಬಹುದು. ಎಂಜಿನ್‌ಗಳಿಗೆ ಶಕ್ತಿ ಇರುವವರೆಗೆ ವಿಮಾನ, ಆಗಸದಲ್ಲಿ ಹಾರಾಟ ನಡೆಸಿದೆ. ಆದರೆ ಒಮ್ಮೆ ಒತ್ತಡ ಕಳೆದುಕೊಂಡಂತೆ, ಅದು ಕೇವಲ ಒಂದು ಕಲ್ಲಿನಂತೆ ದಿಢೀರ್ ಕೆಳಗೆ ಬಂತು ಎಂದು ಅವರು ವಿವರಿಸಿದರು.

ಇಂತಹ ವಿಮಾನಗಳು ಪ್ರತೀ ಗಂಟೆಗೆ ಸುಮಾರು 5,000 ಕೆ.ಜಿಯಷ್ಟು ಇಂಧನ ಬಳಸುತ್ತವೆ. ಅಷ್ಟೇ ಅಲ್ಲದೇ, ವಿಮಾನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೀಸಲು ಇಂಧನವೂ ಇರುತ್ತದೆ. ಹಾಗಾಗಿ, ಇದೊಂದು ಇಂಧನ ಕೊರತೆಯ ಪ್ರಕರಣವಂತೂ ಅಲ್ಲ. ಆದರೆ, ಇಂಧನ ವಿತರಣೆಯಲ್ಲಿನ ವೈಫಲ್ಯ ಅಥವಾ ಒತ್ತಡವನ್ನು ನಿಯಂತ್ರಿಸುವ ವಿದ್ಯುತ್ ಪೂರೈಕೆ ವ್ಯವಸ್ಥೆಗಳಲ್ಲಿ ವೈಫಲ್ಯ ಆಗಿರಬಹುದು ಎಂದು ಬೆರಿ ಅನುಮಾನ ವ್ಯಕ್ತಪಡಿಸಿದರು.

ಕಾಕ್‌ಪಿಟ್‌ನಿಂದ ಬಂದ ತುರ್ತು ಕರೆ (ಮೇ ಡೇ)ಯ ಕುರಿತ ಪ್ರಶ್ನೆಗೆ ಉತ್ತರಿಸಿ, ಒಬ್ಬ ಪೈಲಟ್ 'ಮೇಡೇ, ಮೇಡೇ' ಎಂದು ಹೇಳಿದಾಗ, ಅದು ತಕ್ಷಣದ ಮತ್ತು ಜೀವಕ್ಕೆ ಅಪಾಯಕಾರಿಯಾದ ತುರ್ತು ಪರಿಸ್ಥಿತಿ ಎಂದೇ ಅರ್ಥ. ಆ ಸಂದೇಶವು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ. 'ಮೇಡೇ' ಎಂದು ಘೋಷಿಸಿದಾಗ ಅದು ತಕ್ಷಣವೇ ಅಪಾಯವಿದೆ ಎಂದರ್ಥ. ಹಾಗಾಗಿ, ಈ ವಿಮಾನದಲ್ಲಿ ಕ್ಯಾಪ್ಟನ್ ಮೇಡೇ ಮೇಡೇ ಎಂದು ಹೇಳಿದ್ದರೆ ಅದು ತುರ್ತು ಪರಿಸ್ಥಿತಿಯಾಗಿತ್ತು ಎಂದು ಅವರು ಸ್ಪಷ್ಟಪಡಿಸಿದರು.

ವಿಮಾನ ಪತನದ ನಡವಳಿಕೆಯ ಸುಳಿವುಗಳು: ಪ್ರಯಾಣಿಕರು ಮಾಡಿರುವ ವಿಡಿಯೊಗಳಲ್ಲಿ, ವಿಮಾನವು ತನ್ನ ಮೂಗನ್ನು ಮೇಲಕ್ಕೆತ್ತಿ ಮತ್ತು ಲ್ಯಾಂಡಿಂಗ್ ಗೇರ್ ಅನ್ನು ಹಿಂತೆಗೆದುಕೊಳ್ಳದೆ ಏರುತ್ತಿರುವುದನ್ನು ತೋರಿಸುತ್ತದೆ. ಇದು ಪ್ರಮಾಣಿತ ಟೇಕ್‌ಆಫ್ ಕಾರ್ಯವಿಧಾನವಲ್ಲ. ಇಂಥ ಪರಿಸ್ಥಿತಿಯು ವಾಯುಬಲ ಎಳೆತ(aerodynamic drag)ವನ್ನು ಹೆಚ್ಚಿಸಬಹುದು ಮತ್ತು ಆರೋಹಣ ಕಾರ್ಯಕ್ಷಮತೆ(climb performance)ಯನ್ನು ಕಡಿಮೆ ಮಾಡಬಹುದು. ಸಾಮಾನ್ಯವಾಗಿ, ಟೇಕ್‌ಆಫ್ ಆದ 5 ಸೆಕೆಂಡುಗಳೊಳಗೆ ಲ್ಯಾಂಡಿಂಗ್ ಗೇರ್ ಅನ್ನು ಹಿಂತೆಗೆದುಕೊಳ್ಳಲಾಗುತ್ತದೆ. ಒಂದು ವೇಳೆ ಪೈಲಟ್‌ಗಳು ಹಾಗೆ ಮಾಡಲು ವಿಫಲರಾದರೆ, ಅವರು ತುರ್ತು ಪರಿಸ್ಥಿತಿಯಾದ ಎಂಜಿನ್ ವೈಫಲ್ಯ ಅಥವಾ ವಿದ್ಯುತ್ ದೋಷಗಳಂಥ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಅದು ಸೂಚಿಸುತ್ತದೆ ಎಂದು ಮಾಹಿತಿ ನೀಡಿದರು.

ಡ್ರೀಮ್‌ಲೈನರ್ ಎಂಬ ಬೋಯಿಂಗ್ 787 ವಿಮಾನ ವಿಶ್ವದ ಅತ್ಯಂತ ಸುರಕ್ಷಿತ ವಿಮಾನಗಳಲ್ಲಿ ಒಂದು. 25ರಿಂದ 30 ವರ್ಷ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಇದಕ್ಕಿದೆ. ದುರಂತಕ್ಕೀಡಾದ ಈ ವಿಮಾನ ಕೇವಲ 11 ವರ್ಷ ಹಳೆಯದು ಮತ್ತು ನಿಯಮಿತವಾಗಿ ನಿರ್ವಹಿಸಲ್ಪಡುತ್ತಿತ್ತು. ಹಾಗಾಗಿ ವಿಮಾನದ ವಯಸ್ಸಿನ ವಿಚಾರ ಇಲ್ಲಿ ಉದ್ಭವಿಸದು ಎಂದು ಬೆರಿ ಸ್ಪಷ್ಟಪಡಿಸಿದರು.

ಹಕ್ಕಿ ಡಿಕ್ಕಿ ಅಥವಾ ಇಂಧನ ಮಾಲಿನ್ಯ ಕಾರಣವಾಗಿರಬಹುದೇ?: ಹಕ್ಕಿಗಳು ಡಿಕ್ಕಿಯಾಗಿ ಎಂಜಿನ್ ವೈಫಲ್ಯವಾಗುತ್ತವೆ. ಇದೂ ಕೂಡಾ ಪ್ರಮುಖ ಕಾರಣವೇ. ಆದರೆ ಈ ಪರಿಸ್ಥಿತಿಗಳನ್ನು ಗಮನಿಸಿದರೆ, ಆ ಸಾಧ್ಯತೆ ಕಡಿಮೆ. ಬೇಸಿಗೆಯ ಇಂತಹ ತೀವ್ರ ತಾಮಾನದಲ್ಲಿ ಪಕ್ಷಿಗಳು ವಿಮಾನ ಟೇಕ್ ಆಫ್ ಆಗುವ ಅಷ್ಟು ಎತ್ತರದ ಪ್ರದೇಶಗಳಲ್ಲಿ ಇರುವುದು ವಿರಳ. ಆದರೆ, ಇಂಧನ ಮಾಲಿನ್ಯ ಸಮಸ್ಯೆ ಅಥವಾ ವಿದ್ಯುತ್ ವೈಫಲ್ಯವಾಗಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಬೆರಿ ಹೇಳಿದರು.

ಪಕ್ಷಿ ಡಿಕ್ಕಿಯಾಗಿ ಎಂಜಿನ್ ವೈಫಲ್ಯವಾಗುತ್ತದೆ. ಆದರೆ ಅಂಥ ಸ್ಪಷ್ಟ ಕುರುಹುಗಳು ಈ ಘಟನೆಯಲ್ಲಿ ಕಾಣಿಸುವುದಿಲ್ಲ ಎಂದು ವಿಮಾನಯಾನ ತಜ್ಞರಾದ ಸುಭಾಷ್ ಗೋಯಲ್ ಈಟಿವಿ ಭಾರತ್‌ಗೆ ತಿಳಿಸಿದರು. ಒಂದಲ್ಲ, ಕನಿಷ್ಠ 3ರಿಂದ 4 ದೊಡ್ಡ ದೊಡ್ಡ ಪಕ್ಷಿಗಳು ಡಿಕ್ಕಿ ಹೊಡೆದರೂ ಒಂದು ಎಂಜಿನ್ ವಿಫಲವಾಗುತ್ತದೆ. ಆದರೆ, ನಂತರ ಹಾರಾಟವನ್ನು ಇನ್ನೊಂದು ಎಂಜಿನ್‌ ಮೂಲಕ ಮಾಡಲು ಸಾಧ್ಯವಿದೆ. ಹಲವು ಸನ್ನಿವೇಶಗಲ್ಲಿ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ವೇಳೆ ವಿಮಾನದ ಚಕ್ರ ಮೇಲಕ್ಕೆ ಅಥವಾ ಕೆಳಕ್ಕೆ ಹೋಗುವುದಿಲ್ಲ. ಆದರೆ, ಅಹಮದಾಬಾದ್ ನಲ್ಲಿ ನಡೆದ ಅವಘಡದಲ್ಲಿ ಇಂಥ ಯಾವುದೇ ಕಾರಣಗಳು ಗೋಚರಿಸುವುದಿಲ್ಲ ಎಂದು ತಿಳಿಸಿದರು.

ಡ್ರೀಮ್‌ಲೈನರ್ 787 ಸುರಕ್ಷಿತ ವಿಮಾನ: ಬೋಯಿಂಗ್ ಡ್ರೀಮ್‌ಲೈನರ್ 787 ವಿಶ್ವದ ಅತ್ಯಂತ ಸುರಕ್ಷಿತ ವಿಮಾನ. ಇದು ನೀರಿನಲ್ಲಿಯೂ ಒಂದು ನಿಮಿಷಗಳ ಕಾಲ ಕಾರ್ಯ ನಿರ್ವಹಿಸಬಲ್ಲದು. 6 ಪವರ್ ಬ್ಯಾಟರಿ ಬ್ಯಾಕಪ್ ಇದರಲ್ಲಿದೆ. ಟ್ರಿಪಲ್ ರಿಡಂಡೆನ್ಸಿ ವ್ಯವಸ್ಥೆ ಅಳವಡಿಸಲಾಗಿದೆ. ಹಾಗಾಗಿ ಈ ಅಪಘಾತದ ಹಿಂದಿನ ಕಾರಣವೇನೆಂದು ಯಾರಿಗೂ ಅರ್ಥವಾಗುತ್ತಿಲ್ಲ. ಪೈಲಟ್ ದೋಷ ಕೂಡಾ ಇವುಗಳಲ್ಲಿ ಒಂದಾಗಿರಬಹುದು. ವಿಮಾನ ಫ್ಲೈ ಬೈ ವೈರ್ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಬಹಳ ಸೂಕ್ಷ್ಮವಾದ ಗಣಕೀಕೃತ ಎಲೆಕ್ಟ್ರಾನಿಕ್ ಭಾಗಗಳನ್ನು ಹೊಂದಿದೆ. ಆದರೆ ಆಕಸ್ಮಿಕವಾಗಿ ಒಂದು ತಂತಿಯಲ್ಲಿ ಶಾರ್ಟ್ ಸರ್ಕ್ಯೂಟ್ ಇದ್ದರೆ, ಅದು ಹಾರಾಟದ ಮೇಲೆ ಪರಿಣಾಮ ಬೀರುತ್ತದೆ. ಇದರ ಹೊರತಾಗಿ ವಿಮಾನ ಇಂಧನದಿಂದ ತುಂಬಿರುತ್ತದೆ. ಒಂದು ವೇಳೆ ಅಪಘಾತದ ಸಂದರ್ಭದಲ್ಲಿ ಯಾವುದೇ ಕಟ್ಟಡ, ಮೈದಾನ ಅಥವಾ ಖಾಲಿ ರಸ್ತೆ ಇಲ್ಲದಿದ್ದರೆ ಅಪಘಾತದ ನಂತರ ಬೆಂಕಿ ಹೊತ್ತಿಕೊಳ್ಳುತ್ತಿರಲಿಲ್ಲ. ಅನೇಕ ಜೀವಗಳೂ ಅಪಾಯದಿಂದ ಪಾರಾಗುತ್ತಿದ್ದವು. ಆದರೆ ಈ ಘಟನೆಯಲ್ಲಿ ವಿಮಾನ ಕಟ್ಟಡಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು, ದೊಡ್ಡ ಅಪಘಾತ ಸಂಭವಿಸಿತು ಎಂದು ಗೋಯಲ್ ತಿಳಿಸಿದರು.

ವಿಮಾನದಿಂದ ಬದುಕಿ ಬಂದ ಏಕೈಕ ವ್ಯಕ್ತಿಯ ಬಗ್ಗೆ ಮಾತನಾಡಿದ ಗೋಯಲ್, ರಮೇಶ್ ವಿಶ್ವಾಸ್ ಬದುಕುಳಿದಿರುವುದು ಒಂದು ಪವಾಡವೇ ಸರಿ. ಅವರು ವಿಮಾನದ ರೆಕ್ಕೆಗಳಿಂದ ತಪ್ಪಿಸಿಕೊಂಡರು. ಚೆಲ್ಲಾಪಿಲ್ಲಿಯಾಗಿ ಅಲ್ಲಿ ಬಿದ್ದಿದ್ದ ಮೃತದೇಹಗಳನ್ನು ನೋಡಿ ಗಾಬರಿಗೊಂಡು ತನ್ನ ಪ್ರಾಣ ಉಳಿಸಿಕೊಳ್ಳಲು ಓಡಿ ಹೋಗಿರಬಹುದು. ತನಿಖೆಯ ನಂತರ ಅವರು ಬದುಕುಳಿಯಲು ಕಾರಣವಾದ ಸಂದರ್ಭಗಳು ತಿಳಿದು ಬರಲಿವೆ. ವಿಶ್ವಾಸ್ ನ ಪಕ್ಕದ ಸಾಲಿನಲ್ಲಿ ಕುಳಿತಿದ್ದ ಅವರ ಸಹೋದರ ಬದುಕುಳಿಯಲಿಲ್ಲ ಎಂದರು.

ತನಿಖೆ: ಈ ದುರಂತದ ಬಗ್ಗೆ ಡಿಜಿಸಿಎ ಈಗಾಗಲೇ ಸಮಗ್ರ ತನಿಖೆ ಶುರು ಮಾಡಿದೆ. ಬ್ಲ್ಯಾಕ್ ಬಾಕ್ಸ್ ಅನ್ನು ವಿಶ್ಲೇಷಿಸುವವರೆಗೆ ಸತ್ಯ ಬೆಳಕಿಗೆ ಬರುವುದಿಲ್ಲ. ಡಿಎಫ್‌ಡಿಆರ್ ಮತ್ತು ಸಿವಿಆರ್ ಎಂದು ಕರೆಯಲ್ಪಡುವ ಬ್ಲ್ಯಾಕ್ ಬಾಕ್ಸ್ ವಿಮಾನದ ಕಾಕ್‌ಪಿಟ್‌ನ ಧ್ವನಿಯನ್ನು ದಾಖಲಿಸುತ್ತದೆ. ಅದನ್ನೆಲ್ಲ ಪರಿಶೀಲಿಸಿದ ನಂತರವೇ ನಿಜವಾದ ಸಮಸ್ಯೆ ಏನೆಂದು ಗೊತ್ತಾಗುತ್ತದೆ. ಹಾಗಾಗಿ, ಡಿಎಫ್‌ಡಿಆರ್ ಮತ್ತು ಸಿವಿಆರ್ ಅನ್ನು ವಿಶ್ಲೇಷಿಸುವವರೆಗೆ ಎಲ್ಲವೂ ಕೇವಲ ಊಹಾಪೋಹ ಮಾತ್ರ. ಆದರೆ, ಪೈಲಟ್ ಮಾಡಿದ ಮೇಡೇ ಕರೆ ಮತ್ತು ವಿಮಾನವು ಗಾಳಿಯಲ್ಲಿ ಸ್ಥಗಿತಗೊಂಡಿರುವ ಅಂಶ ಅದು ಯಾಂತ್ರಿಕ ವ್ಯವಸ್ಥೆಯ ವೈಫಲ್ಯ ಅಥವಾ ಅಂಥದ್ದೇ ಏನಾದರೂ ಸಂಭವಿಸಿರಬಹುದು ಎಂಬುದನ್ನು ಸೂಚಿಸುತ್ತದೆ ಎಂದು ಬೆರಿ ಹೇಳಿದರು.

ಏರ್ ಇಂಡಿಯಾ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದೆ. ಕಂಪನಿಯ ಸಿಇಒ ಎನ್.ಚಂದ್ರಶೇಖರನ್, ಮೃತರ ಕುಟುಂಬಗಳಿಗೆ ಮತ್ತು ತನಿಖಾಧಿಕಾರಿಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ನಮ್ಮ ಆಲೋಚನೆಗಳು ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳೊಂದಿಗಿವೆ. ಘಟನೆಯ ಕುರಿತು ಸಂಪೂರ್ಣ ಪಾರದರ್ಶಕತೆಯನ್ನು ಖಾತ್ರಿ ಮಾಡಿಕೊಳ್ಳಲು ನಾವು ಡಿಜಿಸಿಎ ಮತ್ತು ಎಲ್ಲಾ ತನಿಖಾಧಿಕಾರಿಗಳೊಂದಿಗೆ ಕೆಲಸ ಮಾಡುತ್ತೇವೆ ಎಂದು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೋಯಿಂಗ್ 787-8 ಮತ್ತು 787-9 ವಿಮಾನಗಳ ಪೂರ್ಣ ತಪಾಸಣೆಗೆ DGCA ಆದೇಶ: ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ)ವು, Genx ಎಂಜಿನ್‌ಗಳನ್ನು ಹೊಂದಿರುವ ಏರ್ ಇಂಡಿಯಾದ ಬೋಯಿಂಗ್ 787-8 ಹಾಗು 787-9 ವಿಮಾನಗಳ ಸಂಪೂರ್ಣ ನಿರ್ವಹಣಾ ತಪಾಸಣೆ ಮಾಡುವಂತೆ ಆದೇಶಿಸಿದೆ.

ಜೂನ್ 15ರಿಂದ, ಏರ್ ಇಂಡಿಯಾ ಬೋಯಿಂಗ್ 787-8 ಹಾಗು 787-9 ವಿಮಾನಗಳನ್ನು ಒಂದು ಬಾರಿ ಕಡ್ಡಾಯವಾಗಿ ನಿರ್ಗಮನಪೂರ್ವ ತಪಾಸಣೆ ನಡೆಸಬೇಕು. ಇದರಲ್ಲಿ ಪ್ರತೀ ಹಾರಾಟಕ್ಕೂ ಮೊದಲು ಇಂಧನ ನಿಯತಾಂಕ ಮೇಲ್ವಿಚಾರಣಾ ವ್ಯವಸ್ಥೆಗಳು, ಕ್ಯಾಬಿನ್ ಏರ್ ಕಂಪ್ರೆಸರ್, ಎಲೆಕ್ಟ್ರಾನಿಕ್ ಎಂಜಿನ್ ನಿಯಂತ್ರಣ ವ್ಯವಸ್ಥೆಗಳು, ಇಂಧನಚಾಲಿತ ಆಕ್ಯೂವೇಟರ್‌ಗಳು ಮತ್ತು ಹೈಡ್ರಾಲಿಕ್ ವ್ಯವಸ್ಥೆಗಳ ಸೇವಾಶೀಲತೆ ಮತ್ತು ಟೇಕ್ಆಫ್ ಕಾರ್ಯಕ್ಷಮತೆಯ ನಿಯತಾಂಕಗಳ ಪರಿಶೀಲನೆಗಳು ಒಳಗೊಂಡಿವೆ. ಮುಂದಿನ ಸೂಚನೆ ಬರುವವರೆಗೂ ಇಂಥ ಸಂಚಾರ ತಪಾಸಣೆಗಳನ್ನು ತಪ್ಪದೆ ಮಾಡಬೇಕು. ಇದಕ್ಕೆ ಹೆಚ್ಚುವರಿಯಾಗಿ ಮುಂದಿನ ಎರಡು ವಾರಗಳಲ್ಲಿ ವಿಮಾನಗಳಲ್ಲಿ ವಿದ್ಯುತ್ ಭರವಸೆ ಪರೀಕ್ಷೆ ಮಾಡುವಂತೆಯೂ ಆದೇಶಿಸಲಾಗಿದೆ. ಅಷ್ಟೇ ಅಲ್ಲದೇ, ಹಿಂದಿನ 15 ದಿನಗಳಲ್ಲಿ ಪುನರಾವರ್ತಿತ ತಾಂತ್ರಿಕ ದೋಷಗಳ ಸಮಗ್ರ ಪರಿಶೀಲನಾ ಕಾರ್ಯವನ್ನು ಮುಗಿಸುವಂತೆಯೂ ಏರ್ ಇಂಡಿಯಾಕ್ಕೆ ಡಿಜಿಸಿಎ ನಿರ್ದೇಶಿಸಿದೆ. ಈ ಎಲ್ಲಾ ತಪಾಸಣೆಗಳ ವರದಿಗಳನ್ನು ಏರ್ ಇಂಡಿಯಾ ಡಿಜಿಸಿಎಗೆ ಸಲ್ಲಿಸಬೇಕಿದೆ.

ಇದನ್ನೂ ಓದಿ: ಕಣ್ಣೆದುರಿಗೆ ತಲೆ ಕತ್ತರಿಸಿ ಬಿತ್ತು, ಇದ್ದಕ್ಕಿದ್ದಂತೆ ಬೆಂಕಿಯ ಜ್ವಾಲೆ ಉಲ್ಬಣಿಸಿತು: ಅಹಮದಾಬಾದ್‌ನ ಭಯಾನಕ ಕ್ಷಣಗಳಿವು! - AHMEDABAD PLANE CRASH

ಇದನ್ನೂ ಓದಿ: "ಭೂಮಿ ನಡುಗಿದ ಅನುಭವವಾಯಿತು": ವಿಮಾನ ದುರಂತದ ಭಯಾನಕತೆ ಬಿಚ್ಚಿಟ್ಟ ಪ್ರತ್ಯಕ್ಷದರ್ಶಿಗಳು! - EYEWITNESSES RECOUNT HORROR

ಇದನ್ನೂ ಓದಿ: ಸ್ವಲ್ಪ ತಡವಾಗಿದ್ರೂ ನಾನು ಬದುಕುಳಿಯುತ್ತಿರಲಿಲ್ಲ!; ಕೂದಲೆಳೆ ಅಂತರದಲ್ಲಿ ವಿಮಾನ ಅಪಘಾತದಿಂದ ಪಾರಾದ ಅದೃಷ್ಟವಂತ ವಿದ್ಯಾರ್ಥಿ - PLANE CRASH

Last Updated : June 14, 2025 at 12:06 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.