ನವದೆಹಲಿ: "ಆಕಸ್ಮಿಕವಾಗಿ ಪಂಜಾಬ್ ಗಡಿ ದಾಟಿದ ಭಾರತ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧನನ್ನು ಪಾಕಿಸ್ತಾನದ ರೇಂಜರ್ಸ್ ಬಂಧಿಸಿದ್ದಾರೆ. ಯೋಧನ ಬಿಡುಗಡೆ ಬಗ್ಗೆ ಉಭಯ ಪಡೆಗಳ ನಡುವೆ ಮಾತುಕತೆ ನಡೆಯುತ್ತಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮವಸ್ತ್ರ ಹಾಗೂ ರೈಫಲ್ ಹೊಂದಿದ್ದ 182ನೇ ಬೆಟಾಲಿಯನ್‌ನ ಕಾನ್ಸ್ಟೇಬಲ್ ಪಿ.ಕೆ. ಸಿಂಗ್ ಎಂಬ ಯೋಧ ಬುಧವಾರ ಫಿರೋಜ್‌ಪುರ ಗಡಿಯಲ್ಲಿ ನೆರಳಿನಲ್ಲಿ ವಿಶ್ರಾಂತಿ ಪಡೆಯಲು ಮುಂದೆ ಹೋದಾಗ ಪಾಕಿಸ್ತಾನದ ರೇಂಜರ್ಸ್‌ಗಳು ಬಂಧಿಸಿದ್ದಾರೆ. ಬಿಎಸ್‌ಎಫ್ ಯೋಧನನ್ನು ಬಿಡುಗಡೆಗೊಳಿಸಲು ಪ್ಲಾಗ್ ಮೀಟಿಂಗ್ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಘಟನೆಗಳು ಸಾಮಾನ್ಯವಾಗಿದ್ದು, ಈ ಹಿಂದೆ ಉಭಯ ದೇಶಗಳ ನಡುವೆ ನಡೆದಿವೆ ಎಂದು ಅವರು ಹೇಳಿದ್ದಾರೆ.
ಈ ಘಟನೆಯು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿದೆ. ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತಿರುವ ಪಾಕಿಸ್ತಾನದ ವಿರುದ್ಧ ಭಾರತವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿಗೆ ಟ್ರಂಪ್, ಪುಟಿನ್, ಮೆಲೋನಿ ಸೇರಿ ಜಾಗತಿಕ ನಾಯಕರಿಂದ ಖಂಡನೆ
ಇದನ್ನೂ ಓದಿ: ಛತ್ತೀಸ್‌ಗಢ - ತೆಲಂಗಾಣ ಗಡಿಯಲ್ಲಿ ಎನ್‌ಕೌಂಟರ್: 1,000 ನಕ್ಸಲರನ್ನು ಸುತ್ತುವರೆದ 20 ಸಾವಿರ ಭದ್ರತಾ ಸಿಬ್ಬಂದಿ
ಇದನ್ನೂ ಓದಿ: ಪಹಲ್ಗಾಮ್ ದಾಳಿಯ ನಂತರ ಕಾಶ್ಮೀರಿ ವಿದ್ಯಾರ್ಥಿಗಳಿಗೆ ಹಲವು ರಾಜ್ಯಗಳಲ್ಲಿ ಬೆದರಿಕೆ ಆರೋಪ