ನಾಗ್ಪುರ: ಆತ್ನಹತ್ಯೆಗೆ ಶರಣಾದ ಪ್ರೇಯಸಿಯ ಚಿತೆಗೆ ಯುವಕನೋರ್ವ ಹಾರಲು ಯತ್ನಿಸಿದ ಘಟನೆ ಮಹರಾಷ್ಟ್ರದ ನಾಗ್ಪುರ ಬಳಿಯ ಕಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇನ್ನು ಪ್ರೇಯಸಿಯ ಚಿತೆಗೆ ಹಾರಲು ಯತ್ನಿಸಿದ ಯುವಕನನ್ನು ಸ್ಥಳೀಯರು ತಡೆದು ಬಳಿಕ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪರಿಣಾವ ತೀವ್ರವಾಗಿ ಗಾಯಗೊಂಡ ಯುವಕನ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕುಡಿದ ಮತ್ತಿನಲ್ಲಿ ಚಿತೆಗೆ ಹಾರಲು ಯತ್ನ: ಆತ್ಮಹತ್ಯೆಗೆ ಶರಣಾದ ಯುವತಿ ಮತ್ತು ಯುವಕ ಪ್ರೀತಿಸುತ್ತಿದ್ದರು. ಆದರೆ ಯುವತಿ ಸೋಮವಾರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಂತೆಯೇ ಯುವತಿಯ ಅಂತ್ಯಕ್ರಿಯೆ ಕಾರ್ಯವನ್ನು ಕನ್ಹಾನ್ ನದಿ ಬಳಿ ಮಾಡಲಾಗುತ್ತಿತ್ತು. ಈ ವೇಳೆ ಕುಡಿದ ಮತ್ತಿನಲ್ಲಿ ಯುವಕ ಸ್ಥಳಕ್ಕೆ ದೌಡಾಯಿಸಿ, ಯುವತಿಯ ಚಿತೆಗೆ ಹಾರಲು ಹತ್ನಿಸಿದ್ದಾನೆ. ಅಲ್ಲಿದ್ದವರು ತಕ್ಷಣವೇ ಯುವಕನನ್ನು ಎಳೆದು ಥಳಿಸಿದ್ದಾರೆ. ಈ ವೇಳೆ ಅಂತ್ಯಕ್ರಿಯೆ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಕೂಡಾ ನಿಮಾರ್ಣವಾಗಿತ್ತು.
ಖಿನ್ನತೆಯಿಂದ ಯುವತಿ ಆತ್ಮಹತ್ಯೆ: ಯುವಕ ಮತ್ತು ಯುವತಿ ಪ್ರೇಮ ಸಂಬಂಧದಲ್ಲಿದ್ದರು. ಆದರೆ, ಇತ್ತೀಚೆಗೆ ಯಾವುದೋ ಕಾರಣದಿಂದ ಅವರ ಸಂಬಂಧ ಹದಗೆಟ್ಟಿತ್ತು. ಈ ಖಿನ್ನತೆಯಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ಕುರಿತು ಕನ್ಹಾನ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 194 (ಬಿಎನ್ಎಸ್) ಅಡಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ: ಘಟನೆಯ ನಂತರ, ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಅಂಧಲೆ ಮತ್ತು ಸಹಾಯಕ ಉಪ ಪೊಲೀಸ್ ಆಯುಕ್ತ ವಿಶಾಲ್ ಶಿರಸಾಗರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಯುವಕನಿಗೆ ಪ್ರಜ್ಞೆ ಬಂದ ನಂತರ ಹೇಳಿಕೆ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಯುವಕನ ಮೇಲೆ ಹಲ್ಲೆ ನಡೆಸಿದ ಕುರಿತು ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಮೃತ ವ್ಯಕ್ತಿಯ ಅಂತಿಮ ದರ್ಶನ ಪಡೆದು, ಗಂಟೆಗಟ್ಟಲೆ ಕುಳಿತ ಮುಶ್ಯಾ.. ಮಂಗನ ವರ್ತನೆ ಕಂಡು ಅಚ್ಚರಿಗೊಳಗಾದ ಜನ
ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿ ಹಣ, ಚಿನ್ನಾಭರಣ ಪಡೆದು ಪರಾರಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಗರ್ಭಿಣಿ ಸಂತ್ರಸ್ತೆ