ಛತ್ರಪತಿ ಸಂಭಾಜಿನಗರ (ಮಹಾರಾಷ್ಟ್ರ): ನಾವೀನ್ಯತೆಯೊಂದು ಎಂತಹ ವ್ಯಕ್ತಿಗಳನ್ನು ಆಕರ್ಷಿಸುತ್ತದೆ ಎಂಬುದನ್ನು ಇದೀಗ ಯೋಗೇಶ್ ಗವಾಂಡೆ ಎಂಬ ಯುವಕ ಸಾಕ್ಷಿಕರಿಸಿದ್ದಾರೆ. ಹೌದು, ಕಾಲೇಜು ಹಂತದಲ್ಲೇ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನದಲ್ಲಿ ಸ್ಟಾರ್ಟ್‌ಅಪ್ ಆರಂಭಿಸಿದ ಇವರ ಉದ್ಯಮ ಇದೀಗ ಜಾಗತಿಕ ಮನ್ನಣೆ ಪಡೆದಿದೆ. ಅಷ್ಟೇ ಅಲ್ಲದೇ ಇವರ ಸಂಸ್ಥೆಯಾಗಿರುವ ಮರಾಠವಾಡಾ ಆಕ್ಸಿಲರೇಟರ್ ಫಾರ್ ಗ್ರೋತ್ ಅಂಡ್ ಇನ್ಕ್ಯುಬೇಷನ್ ಕೌನ್ಸಿಲ್ (ಮ್ಯಾಜಿಕ್) ನ ಮೊದಲ ಸ್ಟಾರ್ಟ್ಅಪ್‌ಗಳಲ್ಲಿ ಒಂದಾದ ನಿಯೋ ಫಾರ್ಮ್‌ಟೆಕ್, ಗ್ರೀನೋವೇಷನ್ ಎನರ್ಜಿ ಚಾಲೆಂಜ್ ನಲ್ಲಿ ಟಾಪ್ 10 ರಲ್ಲಿ ಸ್ಥಾನ ಪಡೆದಿದೆ.
ಏನಿದು ತಂತ್ರಜ್ಞಾನ : ಯೋಗೇಶ್ ರೈತರಿಗೆ ಅನುಕೂಲವಾಗುವ ಕೀಟನಾಶಕ ಸ್ಪ್ರೇ ಪಂಪ್ ತಯಾರಿಸಿದ್ದಾರೆ. ಇದು ಜಾಗತಿಕ ತಂತ್ರಜ್ಞಾನ ಉದ್ಯಮಿ ಬಿಲ್ ಗೇಟ್ಸ್ ಮನಗೆದ್ದಿದೆ. ದೆಹಲಿಯಲ್ಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್ಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಲ್ ಗೇಟ್ಸ್ ನಿಯೋ ಸೋಲಾರ್ ಸ್ಪ್ರೇಯರ್ ಮತ್ತು ನಿಯೋ ಬಾಹುಬಲಿ ಸ್ಪ್ರೇಯರ್‌ನ ಕುರಿತು ಮಾಹಿತಿ ಪಡೆದರು. ನಿಯೋ ಸೋಲಾರ್ ಸ್ಪ್ರೇಯರ್ ಸ್ವಯಂ ಆಗಿ ಪರಿಶೀಲಿಸಿ, ಅದರ ಕುರಿತು ತಿಳಿದುಕೊಂಡರು.
ಈ ಸೌರಶಕ್ತಿ ಚಾಲಿತ ಸ್ಪ್ರೇಯರ್ ಸಾಂಪ್ರದಾಯಿಕ ಇಂಧನ ಆಧಾರಿತವಾಗಿದ್ದು ಆರ್ಥಿಕ ಮತ್ತು ಪರಿಸರ ಸ್ನೇಹಿಯಾಗಿದೆ. ಇದು ಕಾರ್ಮಿಕ ವೆಚ್ಚವನ್ನು ಉಳಿಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ರೈತರಿಗೆ ಲಾಭ ನೀಡುತ್ತದೆ. ಈ ಉತ್ಪನ್ನವು ವಿದೇಶಗಳಲ್ಲಿಯೂ ಹೆಚ್ಚಿನ ಬೇಡಿಕೆ ಹೊಂದಿದೆ. ಇಂತಹ ಅದ್ಭುತ ತಂತ್ರಜ್ಞಾನವನ್ನು ಅವಿಷ್ಕರಿಸಿದ ಯೋಗೇಶ್ ಗವಾಂಡೆ ಎಂಜಿನಿಯರಿಂಗ್‌ನ ಮೂರನೇ ವರ್ಷದಲ್ಲಿ ಅಂದ್ರೆ 2018 ರಲ್ಲಿ ನಿಯೋ ಫಾರ್ಮ್‌ಟೆಕ್‌ನ ಸ್ಥಾಪನೆ ಮಾಡಿದರು.
ಕಾಲೇಜಿನಲ್ಲಿ ಈ ಯೋಜನೆಗೆ ಮಾರ್ಗದರ್ಶನ ಪಡೆದ ಯೋಗೇಶ್ಗೆ ಮಿಲಿಂದ್ ಕಾಂಕ್, ಸುನಿಲ್, ಪ್ರಸಾದ್ ಕೋಕಿಲ್, ರಿತೇಶ್ ಮಿಶ್ರಾ ಮತ್ತು ಆಶಿಶ್ ಗಾರ್ಡೆ ಅವರಿಗೆ ವ್ಯಾಪಾರ ಮಾರ್ಗದರ್ಶನ, ಆರ್ಥಿಕ ಬೆಂಬಲ, ಮಾರುಕಟ್ಟೆ ಪ್ರವೇಶ ಮತ್ತು ಕೈಗಾರಿಕಾ ಸಂಪರ್ಕ ಒದಗಿಸಿದರು. ಕಾಲೇಜು ಹಂತದಿಂದಲೇ ಇದನ್ನು ಅದ್ಭುತ ಉತ್ಪನ್ನವಾಗಿ ಪರಿವರ್ತಿಸಲಾಯಿತು ಎಂದು ಮ್ಯಾಜಿಕ್ ನಿರ್ದೇಶಕ ಪ್ರಸಾದ್ ಕೋಕಿಲ್ ತಿಳಿಸಿದರು.
ಮ್ಯಾಜಿಕ್ ಉತ್ಪನ್ನ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಮ್ಯಾಜಿಕ್ ಸಹಾಯದಿಂದ, ನಿಯೋ ಫಾರ್ಮ್‌ಟೆಕ್ ಸೋಶಿಯಲ್ ಆಲ್ಫಾ ಮತ್ತು ಸಿಒಇ ಫಸಲ್ (ಎಸ್‌ಟಿಪಿಐ, ಐಐಟಿ ಕಾನ್ಪುರ್, ಐಐಎಂಸಿಐಪಿ) ನಂತಹ ಪ್ರಮುಖ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಿದ್ದು ಇದು ಸ್ಟಾರ್ಟ್‌ಅಪ್ ವೇಗವಾಗಿ ಬೆಳೆಯಲು ಸಹಾಯ ಮಾಡಿತು. ಇಂದು, ತನ್ನ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ.
ನಿಯೋ ಫಾರ್ಮ್‌ಟೆಕ್ ಐದು ಸಾವಿರಕ್ಕೂ ಹೆಚ್ಚು ಸೆಟ್‌ಗಳನ್ನು ಮಾರಾಟ ಮಾಡಿದೆ. ಇಂದು 100ಕ್ಕೂ ಹೆಚ್ಚು ಯುವಕರಿಗೆ ಉದ್ಯೋಗವನ್ನು ನೀಡಿದ್ದು, 3 ಕೋಟಿಗೂ ಹೆಚ್ಚು ಆದಾಯವನ್ನು ಗಳಿಸಿದೆ.
ಮ್ಯಾಜಿಕ್‌ನ ಮಾರ್ಗದರ್ಶನ ಮತ್ತು ಬೆಂಬಲವಿಲ್ಲದೆ ಈ ಯಶಸ್ಸು ಸಾಧ್ಯವಾಗುತ್ತಿರಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ನಿಯೋ ಫಾರ್ಮ್‌ಟೆಕ್ ಗೇಟ್ಸ್ ಫೌಂಡೇಶನ್‌ನ ಸಹಾಯದಿಂದ ಉತ್ತರ ಪ್ರದೇಶ ಮತ್ತು ಒಡಿಶಾದಲ್ಲಿ ತನ್ನ ಉತ್ಪನ್ನಗಳ ಮಾರಾಟ ಹೆಚ್ಚಿಸಿದೆ. ಸಾವಿರಾರು ರೈತರಿಗೆ ನವೀನ ಕೃಷಿ ಪರಿಹಾರಗಳನ್ನು ಒದಗಿಸಿದೆ. ಈ ಪ್ರಯಾಣದುದ್ದಕ್ಕೂ ಮೌಲಾ ಅವರಿಗೆ ಮಹಾರಾಷ್ಟ್ರ ರಾಜ್ಯ ಇನ್ನೋವೇಶನ್ ಸೊಸೈಟಿ ಸಹಾಯ ಮಾಡಿದೆ ಎಂದು ಯೋಗೇಶ್ ಗಾವಂಡೆ ತಿಳಿಸಿದರು.
ಇದನ್ನೂ ಓದಿ: ಆವಿಷ್ಕಾರ, ಸಂಶೋಧನೆಗೆ ಮತ್ತಷ್ಟು ಆದ್ಯತೆ ನೀಡಲು ಐಪಿಆರ್ ಸೆಲ್ ಸ್ಥಾಪಿಸಿದ ಬೆಂಗಳೂರು ವಿವಿ