ನವದೆಹಲಿ: ಬೇಸಿಗೆಯ ಬಿಸಿ ಜನರನ್ನು ಸುಡುತ್ತಿದ್ದು, ಬಿಸಿಲ ತಾಪಕ್ಕೆ ತತ್ತರಿಸುತ್ತಿದ್ದಾರೆ. ಸೂರ್ಯ ಸುಡುವ ಬೆಂಕಿಯಂತೆ ಆಗಿದ್ದು, ಬೇಸಿಗೆ ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗೆ ಈ ಬಿಸಿಲನ್ನು ನಿಭಾಯಿಸುವುದು ದೊಡ್ಡ ಸವಾಲಾಗಿದೆ. ಈ ಬಿಸಲಿ ತಾಪ ಇದೀಗ ತಾಜ್ ಮಹಲ್ ಪ್ರವಾಸಿಗರಿಗೆ ತಟ್ಟಿದೆ.
ಆಗ್ರಾದ ತಾಜ್ಮಹಲ್ ಸೌಂದರ್ಯ ಆಹ್ಲಾದಿಸುವ ಪ್ರವಾಸಿಗರು ಬಿಸಿಲಿಗೆ ಹೈರಾಣಾಗಿದ್ದು,, ಅನೇಕರು ಪ್ರಜ್ಞೆ ತಪ್ಪಿ ಬಿದ್ದಿರುವ ಪ್ರಕರಣಗಳು ವರದಿಯಾಗಿದೆ. ಈ ಹಿನ್ನೆಲೆ ಇಲ್ಲಿನ ಪ್ರವಾಸಿಗರಿಗೆ ಶಾಖವನ್ನು ನಿವಾರಿಸಲು ಸಹಾಯ ಮಾಡಲು ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ: ವಾತಾವರಣದ ಉಷ್ಣಾಂಶ ಏರಿಕೆಯಾಗುತ್ತಿದ್ದು, ಬಿಸಿಲ ಗಾಳಿ ಹೆಚ್ಚಾಗಲಿದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಎಚ್ಚರಿಕೆಯನ್ನು ಗಮನದಲ್ಲಿರಿಸಿಕೊಂಡು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ಪ್ರವಾಸಿಗರ ಸುರಕ್ಷತೆಯನ್ನು ಕಾಪಾಡಲು ತಾಜ್ ಮಹಲ್ ಆವರಣದಲ್ಲಿ ಕನಿಷ್ಠ 54 ದೊಡ್ಡ ಕೈಗಾರಿಕಾ ಕೂಲರ್‌ಗಳನ್ನು ಇರಿಸಿದ್ದು, ಬೇಸಿಗೆ ದಗೆ ನೀಗಿಸಲು ಆರ್ಒ ನೀರು ಪೂರೈಕೆಗೂ ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ತಾಜ್ ಮಹಲ್ ವೀಕ್ಷಕರಿಗೆ ಕೂಲರ್ ವ್ಯವಸ್ಥೆ ಕಲ್ಪಿಸಲಾಗಿದೆ. ಆರೋಗ್ಯದ ಅಪಾಯ ಗುರುತಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಆವರಣದಲ್ಲಿ ಈ ರೀತಿ ಕೂಲರ್ ಎಲ್ಲ ಕಡೆ ಕಾಣಬಹುದಾಗಿದೆ. ಸುಮಾರು ಏಳು ಅಡಿ ಎತ್ತರ ಇರುವ 54 ಕೂಲರ್ ಗಳನ್ನು ಅಳವಡಿಸಲಾಗಿದೆ.
ಪ್ರತಿಕೂಲರ್ಗೆ 25 ಲಕ್ಷ ರೂ.: ಪ್ರತಿ ಕೂಲರ್‌ನ ಬೆಲೆ ಸುಮಾರು 25 ಲಕ್ಷ ರೂ ಆಗಿದ್ದು, ಇದನ್ನು ದೆಹಲಿಯಿಂದ ಕೂಲರ್‌ಗಳನ್ನು ತರಿಸಲಾಗಿದೆ. ಪ್ರವಾಸಿಗರು ಶಾಖವನ್ನು ನಿಭಾಯಿಸಲು ಸಹಾಯ ಮಾಡಲು ನಾವು ಸ್ಮಾರಕದ ಆವರಣದ ವಿವಿಧ ಪ್ರದೇಶದಲ್ಲಿ ಅಳವಡಿಸಲಾಗಿದೆ ಎಂದು ತಾಜ್‌ಮಹಲ್‌ನ ಹಿರಿಯ ಸಂರಕ್ಷಣಾ ಸಹಾಯಕ ಪ್ರಿನ್ಸ್ ವಾಜಪೇಯಿ ತಿಳಿಸಿದರು.

ಪೂರ್ವ ಮತ್ತು ಪಶ್ಚಿಮ ದ್ವಾರಗಳಲ್ಲಿ ಬುಕಿಂಗ್ ಕೌಂಟರ್‌ಗಳು, ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ಭದ್ರತಾ ತಪಾಸಣಾ ಕೇಂದ್ರ, ರಾಯಲ್ ಗೇಟ್ ಬಳಿಯ ಹಾಲ್‌ಗಳು, ಮುಖ್ಯ ಗುಮ್ಮಟ ಪ್ರದೇಶ ಮತ್ತು ಟಿಕೆಟ್ ಕಿಟಕಿಗಳು ಈ ರೀತಿ 15 ವಿವಿಧ ಪ್ರದೇಶದಲ್ಲಿ ಕೂಲರ್ ಅಳವಡಿಸಲಾಗಿದೆ.

ವೀಕ್ಷಕರು ಆಗಮಿಸುವ ಪ್ರವೇಶ, ಕಾಯುವ ಸ್ಥಳ, ವಿಶೇಷವಾಗಿ ದೀರ್ಘ ಸರತಿ ಸಾಲುಗಳಲ್ಲಿ ಈ ಕೂಲರ್‌ಗಳನ್ನು ಅಳವಡಿಸಲಾಗಿದೆ. ನಿತ್ಯ ಈ ಕೂಲರ್‌ಗಳಿಗೆ ಕನಿಷ್ಠ 11,000 ಲೀಟರ್ ನೀರನ್ನು ಬಳಕೆ ಮಾಡಲಾಗುತ್ತಿದ್ದು,, ಇದಕ್ಕಾಗಿ ನೀರಿನ ಪೂರೈಕೆ ವ್ಯವಸ್ಥೆಯನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇನ್ನು ಜನರು ಬಿಸಿಲಿನಿಂದ ನಿರ್ಜಲೀಕರಣಗೊಳ್ಳದಂತೆ ತಡೆಯಲು ಸ್ಮಾರಕದ ಒಳಗೆ ಮತ್ತು ಸುತ್ತಮುತ್ತ 25 ಆರ್ಒ ನೀರಿನ ಕೇಂದ್ರ ಸ್ಥಾಪಿಸಲಾಗಿದೆ. ಈ ಮೂಲಕ ಪ್ರವಾಸಿಗರಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಲಾಗಿದೆ. ವರದಿಗಳ ಪ್ರಕಾರ, ಆರ್ಒ ನೀರಿನ ಸರಬರಾಜನ್ನು ಕಳೆದ ವರ್ಷ 6000 ಲೀಟರ್‌ಗಳಿಂದ ಈ ವರ್ಷ 9000 ಲೀಟರ್‌ಗಳಿಗೆ ಹೆಚ್ಚಿಸಲಾಗಿದೆ.

ಎಎಸ್ಐನ ಈ ಕ್ರಮಕ್ಕೆ ಪ್ರವಾಸಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ನೀರು, ಕೂಲರ್ ವ್ಯವಸ್ಥೆಯಿಂದ ಜನರಿಗೆ ಪ್ರಯೋಜನ ಆಗಲಿದೆ. ಇದು ಬಿಸಿಲ ಶಾಖವನ್ನು ಜನರು ಪಾರಾಗಬಹುದು ಅಂತ ಪಂಜಾಬ್‌ನ ಭಟಿಂಡಾದ ಪ್ರವಾಸಿಗರಾದ ಪವನ್ ಕುಮಾರ್ ತಿಳಿಸಿದರು.
ಅಮೆರಿಕದ ಪ್ರವಾಸಿ ಮಾರ್ಟಿನ್ ಮಾತನಾಡಿ, ಈ ವ್ಯವಸ್ಥೆ ಬಿಸಿಲಿನಿಂದ ಕೊಂಚ ರಕ್ಷಣೆ ಪಡೆಯೊದಕ್ಕೆ ಸಹಾಯ ಆಗಿದೆ. ಇದು ಆರಾಮದಾಯಕವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ರಾಮೇಶ್ವರಂಗೆ ಭಕ್ತರ ದಂಡು: ಹೊಸ ಪಂಬನ್ ಸೇತುವೆ ಸ್ಥಳಕ್ಕೆ ಮತ್ತೆರಡು ರೈಲುಗಳ ಸಂಚಾರ; ಎಲ್ಲಿಂದ ಹೊರಡಲಿವೆ ಗೊತ್ತಾ?