ETV Bharat / bharat

ರಾಮಾಯಣದ 135 ಪ್ರಶ್ನೆಗಳಿಗೆ ಉತ್ತರ ಹೇಳುವ 28 ತಿಂಗಳ ಪುಟ್ಟ ಪೋರ!; ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪುಟ ಸೇರಿದ ಪುಟಾಣಿ!

28 ತಿಂಗಳ ವಯಸ್ಸಿನ ಪುಟ್ಟ ಪೋರ ತನ್ನ ಹೆಸರನ್ನು ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ಅಚ್ಚೊತ್ತಿದ್ದಾನೆ.

THREE YEAR OLD WONDER KID MOKSH
ಮೋಕ್ಷ ಅಯಾನ್ (ETV Bharat)
author img

By ETV Bharat Karnataka Team

Published : April 25, 2025 at 4:40 PM IST

2 Min Read
Choose ETV Bharat

ನಂದ್ಯಾಲ (ಆಂಧ್ರ ಪ್ರದೇಶ): ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿನಂತೆ ಆಂಧ್ರ ಪ್ರದೇಶದ ನಂದ್ಯಾಲ ಪಟ್ಟಣದ NGO ಕಾಲೋನಿಯ ಕೇವಲ 28 ತಿಂಗಳ ವಯಸ್ಸಿನ ಮೋಕ್ಷ ಅಯಾನ್ ಎಂಬ ಬಾಲಕ ಅತಿ ಚಿಕ್ಕ ವಯಸ್ಸಿನಲ್ಲಿ ವಿಶೇಷ ನೆನಪಿನ ಶಕ್ತಿ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರು ದಾಖಲಿಸಿದ್ದಾನೆ. ಹಾಗಾಗಿ ಈತನನ್ನು 'Memory Man' ಅಂತಲೇ ಕರೆಯುವದುಂಟು.

ಸದ್ಯ ಹೈದರಾಬಾದ್‌ನ ಕೇಂದ್ರೀಯ ವಿದ್ಯಾಲಯದಲ್ಲಿ ಯುಕೆಜಿ ಓದುತ್ತಿರುವ ಅಯಾನ್, ಸ್ವಪ್ನಿಕಾ ಮತ್ತು ಶಿವ ದಂಪತಿಯ ಮಗ. ಕಲಿಸಿದ ಯಾವುದೇ ವಿಷಯವನ್ನು ತಕ್ಷಣವೇ ನೆನಪಿಸಿಕೊಳ್ಳುವ ಮತ್ತು ಪಠಿಸುವ ಅದ್ಭುತ ಸಾಮರ್ಥ್ಯಕ್ಕಾಗಿ ಈ ಪುಟ್ಟ ಪ್ರತಿಭೆ ಈಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನ ಹೆಸರನ್ನು ಅಚ್ಚೊತ್ತಿದ್ದಾನೆ. ಒಮ್ಮೆ ಹೇಳಿದರೆ ಸಾಕು, ಹಾಗೆ ನೆನಪಿನಲ್ಲಿಟ್ಟುಕೊಳ್ಳುವ, ಮತ್ತೆ ಹೇಳು ಅಂದರೆ ಪಟಪಟ ಅಂತಾ ಹೇಳುವ ಸಾಮರ್ಥ್ಯ 28 ತಿಂಗಳ ವಯಸ್ಸಿನ ಈ ಪೋರನಿಗಿದೆ. ಮಗನ ಅದ್ಭುತ ಸ್ಮರಣಾ ಶಕ್ತಿಗೆ ಫೋಷಕರು ಕೂಡ ಅಚ್ಚರಿಗೊಳಗಾಗಿದ್ದಾರೆ.

37 ಪ್ರಾಣಿಗಳು, 7 ಪಕ್ಷಿಗಳು, 12 ವಾಹನಗಳು, ಇಂಗ್ಲಿಷ್ ವರ್ಣಮಾಲೆಯಲ್ಲಿನ A ನಿಂದ Z ವರೆಗಿನ ಅಕ್ಷರಗಳು, 5 ರಾಷ್ಟ್ರೀಯ ಚಿಹ್ನೆಗಳು, 12 ಬಣ್ಣಗಳನ್ನು ಗುರುತಿಸುವ ಈ ಪೋರ, 1 ರಿಂದ 10 ರವರೆಗಿನ ಸಂಖ್ಯೆಗಳನ್ನು ಎಣಿಸಬಲ್ಲನು. 6 ತೆಲುಗು ಹಾಡುಗಳನ್ನು ಹಾಡುವ ಈ ಪುಟ್ಟ ಪೋರ, 13 ಪ್ರಸಿದ್ಧ ವ್ಯಕ್ತಿಗಳನ್ನು ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರೀಯ ನಾಯಕರು, ಪ್ರಧಾನ ಮಂತ್ರಿಗಳು, ಮುಖ್ಯಮಂತ್ರಿಗಳು ಮತ್ತು ಚಲನಚಿತ್ರ ತಾರೆಯರ ಫೋಟೋ ತೋರಿಸಿದರೆ ಸಾಕು ಥಟ್​ ಅಂತ ಹೇಳುವ ಸಾಮರ್ಥ್ಯ ಗಳಿಸಿಕೊಂಡಿದ್ದಾನೆ. ಒಮ್ಮೆ ಹೇಳಿಕೊಟ್ಟರೆ ಸಾಕು ಮರೆಯದೇ ಹೇಳುವ ಜ್ಞಾಪಕ ಶಕ್ತಿ ಈತನಿಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಅದ್ಭುತ ನಿಖರತೆಯೊಂದಿಗೆ ವಿವಿಧ ಶಬ್ದಗಳನ್ನು ಉಚ್ಛರಿಸುತ್ತಾನೆ.

ಆರೂವರೆ ನಿಮಿಷದಲ್ಲಿ 67 ಪ್ರಶ್ನೆಗಳಿಗೆ ಉತ್ತರ: ರಾಮಾಯಣದ 135 ಪ್ರಶ್ನೆಗಳಿಗೆ ಅದ್ಭುತ ಉತ್ತರಗಳನ್ನು ನೀಡುವ ಮೋಕ್ಷ ಅಯಾನ್, 6:28 ಸೆಕೆಂಡುಗಳಲ್ಲಿ 67 ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯಗಳಿಸಿ ಕೊಂಡಿದ್ದಾನೆ ಮತ್ತು ಮಾಂಟೆಸ್ಸರಿ ಸ್ಲೈಡ್ ಪಜಲ್ ಅನ್ನು ಹತ್ತೂವರೆ ಸೆಕೆಂಡುಗಳಲ್ಲಿ ಪರಿಹರಿಸುವ ಅಪಾರ ನೆನಪಿನ ಶಕ್ತಿ ಹೊಂದಿದ್ದಾನೆ. ಹಲವು ಪ್ರಾಣಿಗಳು ಮತ್ತು ಪಕ್ಷಿಗಳ ಹೆಸರುಗಳು ನೆನಪಿಟ್ಟುಕೊಳ್ಳುವುದು ಮಾತ್ರವಲ್ಲದೇ, ಅವುಗಳ ರೀತಿಯ ಶಬ್ದಗಳನ್ನು ಮಾಡಬಲ್ಲನು.

ಜಸ್ಟ್​ 55 ಸೆಕೆಂಡ್​​ ನಲ್ಲಿ ಭಾರತದ ನಕ್ಷೆ ಬಿಡಿಸುವ ಪೋರ: ಬಾಲ್ಯದಿಂದಲೂ ಕ್ರಿಯಾಶೀಲನಾಗಿರುವ ಮೋಕ್ಷ, ತನಗೆ ಹೇಳಿದ್ದನ್ನೆಲ್ಲಾ ನೆನಪಿನಲ್ಲಿಟ್ಟುಕೊಳ್ಳುವುದನ್ನು ಕಂಡು ತಾಯಿ ಸ್ವಪ್ನಿಕಾ ಸಾಧ್ಯವಾದಷ್ಟು ರಾಮಾಯಣವನ್ನು ಹೇಳಿಕೊಟ್ಟಿದ್ದಾರೆ. ಇದರ ಜೊತೆ ಜೊತೆಗೆ ನಕ್ಷೆಯನ್ನು ಬಿಡಿಸುವುದನ್ನು ಕಲಿಸಿದ್ದು, ಕೇವಲ ಒಂದು ನಿಮಿಷ 55 ಸೆಕೆಂಡುಗಳಲ್ಲಿ ಭಾರತದ ನಕ್ಷೆಯನ್ನು ಬಿಡಿಸುವ ಸಾಮರ್ಥ್ಯ ಹೊಂದಿದ್ದಾನೆ. ಪ್ರತಿಯೊಂದು ವಿಷಯವನ್ನು ಕಂಠಪಾಠ ಮಾಡುವ ಹಾಗೂ ಕೇಳಿದಾಗ ಅದನ್ನು ಪುನರಾವರ್ತಿಸುವ ವಿಶೇಷ ಸಾಮರ್ಥ್ಯ ಕಂಡು ಮೋಕ್ಷ ಅಯಾನ್​ಗೆ ನಾಲ್ಕು ವಿಶ್ವ ದಾಖಲೆಗಳು ಹುಡುಕಿಕೊಂಡು ಬಂದಿದೆ.

ಈ ಅಪರೂಪದ ಪ್ರತಿಭೆಯನ್ನು ಗುರುತಿಸಿ, ಸಾಮರ್ಥ್ಯಗಳನ್ನು ಪ್ರದರ್ಶಿಸುವ ವಿಡಿಯೊಗಳನ್ನು ರೆಕಾರ್ಡ್ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸಲ್ಲಿಸಿದ್ದೆವು. ಮೌಲ್ಯಮಾಪನ ಮತ್ತು ಹಲವು ಹಂತದ ಪರೀಕ್ಷೆಗಳ ನಂತರ, ಅಯಾನ್‌ಗೆ ಪ್ರಮಾಣಪತ್ರ ಮತ್ತು ಪದಕವನ್ನು ನೀಡಿದ್ದಾರೆ. ಪ್ರತಿಯೊಬ್ಬ ಮಕ್ಕಳಲ್ಲೂ ಒಂದು ವಿಶೇಷ ಪ್ರತಿಭೆ ಇದ್ದೇ ಇರುತ್ತದೆ. ಸರಿಯಾದ ಸಮಯದಲ್ಲಿ ಗುರುತಿಸಿದರೆ ಪವಾಡಗಳನ್ನು ಹೇಗೆ ಸೃಷ್ಟಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೇ ಎಂದು ಮೋಕ್ಷ ಅಯಾನ್ ಫೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಾಲ್ಯದಲ್ಲೇ ಅಗಾಧ ನೆನಪಿನ ಶಕ್ತಿ ; ಮೂರುವರೆ ವರ್ಷದ ಪೋರನ ಸಾಧನೆಗೆ ಬೆರಗು - A SUPER KID WITH SHARP MEMORY