ETV Bharat / bharat

'ಹೈಸ್ಪೀಡ್'​ನಲ್ಲಿ ಭಾರತದ ಮೊದಲ ಬುಲೆಟ್ ರೈಲು ಯೋಜನೆ: ತಂತ್ರಜ್ಞಾನದ ಬಳಕೆಯೇ ಅಮೋಘ - TECHNOLOGY IN BULLET TRAIN PROJECT

ದೇಶದ ಮೊದಲ ಬುಲೆಟ್​ ರೈಲು ಯೋಜನೆಯಾದ ಮಹಾರಾಷ್ಟ್ರ ಮತ್ತು ಗುಜರಾತ್​ ನಡುವಿನ ಕಾರಿಡಾರ್​ನಲ್ಲಿ ತಂತ್ರಜ್ಞಾನ ಬಳಕೆಯು ಹೊಸ ಮೈಲುಗಲ್ಲು ಸಾಧಿಸಲಿದೆ.

'ಹೈಸ್ಪೀಡ್'​ನಲ್ಲಿ ಭಾರತದ ಮೊದಲ ಬುಲೆಟ್ ರೈಲು ಯೋಜನೆ
'ಹೈಸ್ಪೀಡ್'​ನಲ್ಲಿ ಭಾರತದ ಮೊದಲ ಬುಲೆಟ್ ರೈಲು ಯೋಜನೆ (IANS)
author img

By ETV Bharat Karnataka Team

Published : June 4, 2025 at 8:48 PM IST

2 Min Read

ಹೈದರಾಬಾದ್: ಜಪಾನ್​ ಮಾದರಿಯಲ್ಲಿ ಭಾರತದಲ್ಲಿ ಹೈಸ್ಪೀಡ್​​ ರೈಲು ಯೋಜನೆಯು ವೇಗ ಪಡೆದುಕೊಂಡಿದೆ. ಇದಕ್ಕಾಗಿ ಕೃತಕ ಬುದ್ಧಿಮತ್ತೆ (ಎಐ), ಯಂತ್ರ ಕಲಿಕೆ (ಎಂಎಲ್), ಲೈಟ್​ ಡಿಟೆಕ್ಷನ್​ ಅಂಡ್​ ರೇಂಜಿಂಗ್​ (LiDAR) ಆಗುಮೆಂಟೆಡ್​ ರಿಯಾಲಿಟಿ (AR), ವರ್ಚುಯಲ್ ರಿಯಾಲಿಟಿ (VR), ರೊಬೊಟಿಕ್ಸ್, ಡ್ರೋನ್‌ಗಳು, ಇತರ ಆಧುನಿಕ ನಿರ್ಮಾಣ ವಿಧಾನಗಳು ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ.

ಭಾರತದ ಮೊದಲ ಬುಲೆಟ್ ರೈಲು ಯೋಜನೆಯನ್ನು ಮಹಾರಾಷ್ಟ್ರ ಮತ್ತು ಗುಜರಾತ್​ ಮಧ್ಯೆ ಆರಂಭಿಸಲಾಗಿದೆ. ಇದು 508 ಕಿಮೀ ಉದ್ದ ಹೊಂದಿದೆ. ಮಹಾರಾಷ್ಟ್ರದ ಮುಂಬೈ ಮತ್ತು ಗುಜರಾತ್‌ನ ಅಹಮದಾಬಾದ್‌ಗೆ ಇದು ಸಂಪರ್ಕಿಸುತ್ತದೆ. ಈ ಯೋಜನೆಯಿಂದ ಈ ಎರಡೂ ನಗರಗಳ ನಡುವಿನ ಪ್ರಯಾಣ ಸಮಯ 7-8 ಗಂಟೆಗಳಿಂದ ಸುಮಾರು 2-3 ಗಂಟೆಗೆ ಇಳಿಯಲಿದೆ.

ಬುಲೆಟ್ ರೈಲು ಯೋಜನೆಯ ಮಾಹಿತಿ
ಬುಲೆಟ್ ರೈಲು ಯೋಜನೆಯ ಮಾಹಿತಿ (ETV Bharat)

ಯೋಜನೆಯಲ್ಲಿ ಜಪಾನ್‌ನ ಪಾತ್ರ ಹಿರಿದು: ಭಾರತದಲ್ಲಿ ಚಾಲ್ತಿಯಲ್ಲಿರುವ ಬುಲೆಟ್ ರೈಲು ಯೋಜನೆಗೆ ಜಪಾನ್ ಬೆಂಗಾವಲಾಗಿ ನಿಂತಿದೆ. ಹಣಕಾಸು ಮತ್ತು ತಾಂತ್ರಿಕ ಬೆಂಬಲ ನೀಡುತ್ತಿದೆ. ಇತ್ತೀಚೆಗೆ ಪ್ರಕಟಿಸಿದಂತೆ ಭಾರತಕ್ಕೆ ಯಾವುದೇ ವೆಚ್ಚವಿಲ್ಲದೇ ಎರಡು ಶಿಂಕನ್ಸೆನ್ ರೈಲು ಎಂಜಿನ್​​ಗಳನ್ನು (E5 ಮತ್ತು E3 ಸರಣಿ) ನೀಡುವುದಾಗಿ ಜಪಾನ್​ ಹೇಳಿದೆ. ಈ ಎರಡೂ ಎಂಜಿನ್​​ಗಳು ಸದ್ಯ ಜಪಾನ್​ನಲ್ಲಿ ಪ್ರಯೋಗಕ್ಕೆ ಒಳಪಟ್ಟಿವೆ. 2026 ಕ್ಕೆ ಭಾರತಕ್ಕೆ ಬರಲಿರುವ ಈ ವಾಹನಗಳು MAHSR ಕಾರಿಡಾರ್ ನಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಿವೆ.

ಈ ಪ್ರಯೋಗವು ಮೇಕ್ ಇನ್ ಇಂಡಿಯಾ ಅಡಿ ಮುಂದಿನ ಪೀಳಿಗೆಯ E10 ಸರಣಿಯ ಶಿಂಕನ್ಸೆನ್ ರೈಲುಗಳ ಉತ್ಪಾದನೆಗೆ ನೆರವಾಗಲಿವೆ. ಬೆಂಗಳೂರು ಮೂಲದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (BEML) ಸೆಪ್ಟೆಂಬರ್ 2025 ರ ವೇಳೆಗೆ ಸ್ಥಳೀಯವಾಗಿ ರೈಲುಗಳನ್ನು ತಯಾರಿಸಲು ಸಜ್ಜಾಗಿದೆ. ಡಿಸೆಂಬರ್ 2026 ರ ವೇಳೆಗೆ ಮುಂಬೈ-ಅಹಮದಾಬಾದ್ ಕಾರಿಡಾರ್‌ನಲ್ಲಿ ಅವುಗಳ ವೇಗ ಪರೀಕ್ಷೆ ನಡೆಯಲಿದೆ.

ಬುಲೆಟ್ ರೈಲು ಯೋಜನೆಯ ಮಾಹಿತಿ
ಬುಲೆಟ್ ರೈಲು ಯೋಜನೆಯ ಮಾಹಿತಿ (ETV Bharat)

ಭಾರತೀಯ ಸಂಸ್ಥೆಯಿಂದ ಹಳಿ ನಿರ್ಮಾಣ: ಭಾರತದ ಮೊದಲ ಹೈ-ಸ್ಪೀಡ್ ರೈಲು ಕಾರಿಡಾರ್​​ಗೆ ಲಾರ್ಸೆನ್ & ಟೂಬ್ರೊ (ಎಲ್ & ಟಿ) ಸಂಸ್ಥೆಯು ಹಳಿ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಹೈ-ಸ್ಪೀಡ್ ರೈಲಿಗಾಗಿ ಪ್ರಿಕಾಸ್ಟ್ ಸ್ಲ್ಯಾಬ್ ಟ್ರ್ಯಾಕ್ ವ್ಯವಸ್ಥೆ ಸೇರಿದಂತೆ ಜಪಾನ್​​ನ ಶಿಂಕನ್ಸೆನ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಮಹಾರಾಷ್ಟ್ರ, ಗುಜರಾತ್, ದಾದ್ರಾ ಮತ್ತು ನಗರ ಹವೇಲಿಯಲ್ಲಿ ವಿದ್ಯುದೀಕರಣ, ಹಳಿ ನಿರ್ಮಾಣ ಮತ್ತು ಡಿಪೋ ಸ್ಥಾಪನೆ ಸೇರಿದಂತೆ ಬಹು ಹಂತಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ಯೋಜನೆಯಲ್ಲಿ ತಂತ್ರಜ್ಞಾನದ ಬಳಕೆ: ಯೋಜನೆಯ ದಕ್ಷತೆ, ನಿಖರತೆ ಮತ್ತು ಸುರಕ್ಷತೆಯಲ್ಲಿ AI, ML, LiDAR, AR, VR, ಡ್ರೋನ್‌ಗಳು, ರೋಬೋಟ್‌ಗಳು ಮತ್ತು IoT ತಂತ್ರಜ್ಞಾನವನ್ನು ಸಾಧ್ಯಂತವಾಗಿ ಬಳಸಲಾಗುತ್ತಿದೆ. ಈ ತಂತ್ರಜ್ಞಾನಗಳು ದಕ್ಷತೆಯನ್ನು ಹೆಚ್ಚಿಸುತ್ತವೆ. ವೆಚ್ಚ ಮತ್ತು ಸಮಯವನ್ನು ಕಡಿಮೆ ಮಾಡುತ್ತವೆ. ಯೋಜನೆಯಲ್ಲಿ ಕಂಡು ಬರುವ ದೋಷಗಳನ್ನು ಶೇಕಡಾ 99.99 ರಷ್ಟು ಕಡಿಮೆ ಮಾಡುತ್ತವೆ.

ಬುಲೆಟ್ ರೈಲು ಯೋಜನೆಯ ಮಾಹಿತಿ
ಬುಲೆಟ್ ರೈಲು ಯೋಜನೆಯ ಮಾಹಿತಿ (ETV Bharat)

ಯೋಜನೆಯ ದೂರ, ವೆಚ್ಚ: 1,08,000 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ MAHSR ಯೋಜನೆಯ ಮಾರ್ಗದಲ್ಲಿ 12 ನಿಲ್ದಾಣಗಳಿವೆ. ಇದರಲ್ಲಿ ಮಹಾರಾಷ್ಟ್ರದಲ್ಲಿ ನಾಲ್ಕು ಮತ್ತು ಗುಜರಾತ್‌ನಲ್ಲಿ ಎಂಟು ನಿಲ್ದಾಣಗಳು ಹೊಂದಿವೆ. ಈ ಕಾರಿಡಾರ್ ಮಹಾರಾಷ್ಟ್ರದಲ್ಲಿ 155.76 ಕಿಮೀ, ದಾದ್ರಾ ಮತ್ತು ನಗರ ಹವೇಲಿಯಲ್ಲಿ 4.3 ಕಿಮೀ ಮತ್ತು ಗುಜರಾತ್‌ನಲ್ಲಿ 348.04 ಕಿಮೀ ವ್ಯಾಪಿಸಲಿದೆ.

ಈ ಮಾರ್ಗದಲ್ಲಿ ಬುಲೆಟ್ ರೈಲು ಗಂಟೆಗೆ 320 ಕಿಮೀ ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಆರಂಭ ನಿಲ್ದಾಣದಿಂದ ಕೊನೆಯ ನಿಲ್ದಾಣದವರೆಗಿನ ದೂರವನ್ನು 2 ಗಂಟೆ 58 ನಿಮಿಷಗಳಲ್ಲಿ ಕ್ರಮಿಸುತ್ತದೆ.

ಬುಲೆಟ್ ರೈಲು ಯೋಜನೆಯ ಮಾಹಿತಿ
ಬುಲೆಟ್ ರೈಲು ಯೋಜನೆಯ ಮಾಹಿತಿ (ETV Bharat)

ಇತರ ಹೈಸ್ಪೀಡ್ ಕಾರಿಡಾರ್‌ಗಳು: ರೈಲ್ವೆ ಸಚಿವಾಲಯವು ದೇಶದಲ್ಲಿ ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಗುರುತಿಸಿದೆ.

  • ದೆಹಲಿ-ವಾರಾಣಸಿ: 813 ಕಿ.ಮೀ
  • ದೆಹಲಿ-ಅಹಮದಾಬಾದ್: 872 ಕಿ.ಮೀ
  • ಮುಂಬೈ-ನಾಗ್ಪುರ: 767 ಕಿ.ಮೀ
  • ಮುಂಬೈ-ಹೈದರಾಬಾದ್: 671 ಕಿ.ಮೀ
  • ಚೆನ್ನೈ-ಬೆಂಗಳೂರು- ಮೈಸೂರು: 464 ಕಿ.ಮೀ
  • ದೆಹಲಿ- ಚಂಡೀಗಢ- ಅಮೃತಸರ: 476 ಕಿ.ಮೀ
  • ವಾರಾಣಸಿ- ಹೌರಾ: 752 ಕಿ.ಮೀ

ಇದನ್ನೂ ಓದಿ: ಮುಂಬೈ - ಅಹಮದಾಬಾದ್ ಬುಲೆಟ್ ರೈಲು: 386 ಕಿಮೀ ಪಿಯರ್ ಫೌಂಡೇಶನ್ ಕಾಮಗಾರಿ ಪೂರ್ಣ

ಮುಂಬೈ ಹೈದರಾಬಾದ್ ನಡುವೆ ಬುಲೆಟ್ ರೈಲು.. 14 ಗಂಟೆ ಅಲ್ಲ 3 ತಾಸಲ್ಲಿ ಪ್ರಯಾಣ

2027ಕ್ಕೆ ಗುಜರಾತ್​- ಅಹಮದಾಬಾದ್​ ಹೈಸ್ಪೀಡ್ ಬುಲೆಟ್​​ ರೈಲು ಜನ ಸೇವೆಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.