ನವದೆಹಲಿ: ಐದು ವರ್ಷಗಳ ಬಳಿಕ ಪುನರ್ ಆರಂಭವಾಗುತ್ತಿರುವ ಕೈಲಾಸ ಮಾನಸ ಸರೋವರ ಯಾತ್ರೆಗೆ 5561 ಯಾತ್ರಿಕರು ಅರ್ಜಿ ಸಲ್ಲಿಸಿದ್ದು, ಇದರಲ್ಲಿ 750 ಯಾತ್ರಿಕರು ಮಾತ್ರ ಆಯ್ಕೆಯಾಗಿದ್ದಾರೆ. ಈ ಯಾತ್ರಿಕರು ಜೂನ್ನಿಂದ ಆಗಸ್ಟ್ವರೆಗೆ ಈ ಯಾತ್ರೆ ನಡೆಸಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಸಚಿವಾಲಯ ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕಿರ್ತಿ ವರ್ಧನ್ ಸಿಂಗ್, ಇಂದು ನೋಂದಣಿಯಾದ ಅರ್ಜಿಗಳಲ್ಲಿ 750 ಅನ್ನು ಕಂಪ್ಯೂಟರೀಕೃತ ಡ್ರಾ ನಡೆಸುವ ಮೂಲಕ ಆಯ್ಕೆ ಮಾಡಲಾಯಿತು. ಒಟ್ಟು 5561 ಯಾತ್ರಿಗಳು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ್ದು, 4,024 ಪುರುಷರು, 1,537 ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಎರಡು ಮಾರ್ಗಗಳ ಮೂಲಕ ಪ್ರಯಾಣ: ಈ ಪ್ರಯಾಣವು ಎರಡು ಮಾರ್ಗಗಳ ಮೂಲಕ ಸಾಗುತ್ತದೆ. ಒಂದು ಲಿಪುಲೇಖ್ ಪಾಸ್ (ಉತ್ತರಾಖಂಡ) ಇನ್ನೊಂದು ನಾಥು ಲಾ ಪಾಸ್ (ಸಿಕ್ಕಿಂ).750 ಯಾತ್ರಿಕರು 50 ಜನರಂತೆ 5 ಬ್ಯಾಚ್ನಲ್ಲಿ ಲಿಪೌಲೆಕ್ ಮಾರ್ಗವಾಗಿ ಪ್ರಯಾಣಿಸಲಿದ್ದು, 50 ಯಾತ್ರಿಕರ 10 ಬ್ಯಾಚ್ ನಾಥು ಲಾ ಮಾರ್ಗವಾಗಿ ಪ್ರಯಾಣ ಬೆಳೆಸಲಿದ್ದಾರೆ. ಈ ಎರಡು ಮಾರ್ಗಗಳೂ ಸಂಪೂರ್ಣವಾಗಿ ಪ್ರಯಾಣಕ್ಕೆ ಯೋಗ್ಯವಾಗಿದ್ದು, ಸಣ್ಣ ಪ್ರಮಾಣದ ಟ್ರೆಕ್ಕಿಂಗ್ ಒಳಗೊಂಡಿರಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಇಮೇಲ್ ಮತ್ತು ಎಸ್ಎಂಎಸ್ ಮೂಲಕ ವಿಷಯ ತಿಳಿಸಲಾಗುತ್ತದೆ ಎಂದರು.
ಇದನ್ನೂ ಓದಿ: ಕೈಲಾಸ ಮಾನಸ ಸರೋವರ ಯಾತ್ರೆ, ನೇರ ವಿಮಾನ ಸಂಪರ್ಕ ಪುನರಾರಂಭಿಸಲು ಭಾರತ-ಚೀನಾ ನಿರ್ಧಾರ
ಈ ಆಯ್ಕೆಯನ್ನು ಪಾರದರ್ಶಕವಾಗಿ ಮತ್ತು ಕಂಪ್ಯೂಟರೀಕೃತವಾಗಿ ನಡೆಸಲಾಗಿದೆ. ಯಾತ್ರಿಗಳಿಗೆ ಸುರಕ್ಷತೆ ಭರವಸೆ ನೀಡಲಾಗುವುದು. ಯಾತ್ರಿಗಳು ಕೂಡ ಜವಾಬ್ದಾರಿಯುತವಾಗಿ, ಮಾನವೀಯವಾಗಿ ಮತ್ತು ಎಚ್ಚರಿಕೆಯಿಂದ ಈ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು. ಒಬ್ಬರನ್ನು ಒಬ್ಬರು ಕಾಳಜಿ ಮಾಡುತ್ತಾ ಪರಿಸರಕ್ಕೆ ಹಾನಿ ಮಾಡದೆ ರಕ್ಷಣೆ ಮಾಡುತ್ತಾ ಯಾತ್ರೆ ನಡೆಸುವ ಭರವಸೆಯನ್ನು ಅವರು ನೀಡಿದರು.
ಕೈಲಾಸ ಮತ್ತು ಮಾನಸ ಸರೋವರ ಯಾತ್ರೆಯನ್ನು 2020ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಅದಾದ ನಂತರ, ಗಲ್ವಾನ್ ಘರ್ಷಣೆಯಿಂದಾಗಿ ಚೀನಾ ಮತ್ತು ಭಾರತದ ನಡುವಿನ ಸಂಬಂಧಗಳು ಹದಗೆಟ್ಟವು. ಇದು ಕೂಡ ಯಾತ್ರೆಯ ಪುನಾರಂಭಕ್ಕೆ ಅವಕಾಶ ನೀಡಲಿಲ್ಲ. ಇತ್ತೀಚಿಗೆ, ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ವೃದ್ಧಿಸಿದ್ದು, ಯಾತ್ರೆಯು ಪುನಾರಂಭಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಕೈಲಾಸ ಮಾನಸ ಸರೋವರ ಯಾತ್ರೆ: ಇಲ್ಲಿದೆಯಾ ಅತಿಮಾನುಷ ಶಕ್ತಿ, ಇದು ಮಾನವ ನಿರ್ಮಿತವೇ?; ಹೀಗಿದೆ ವೈಜ್ಞಾನಿಕ, ಧಾರ್ಮಿಕ ಮಹತ್ವ!