ETV Bharat / bharat

ಭಾರತದ 'ಆಪರೇಷನ್​ ಸಿಂಧೂರ'​​ ದಾಳಿಯಲ್ಲಿ ಪಾಕಿಸ್ತಾನದ 9 ವಿಮಾನ, 10 ಆತ್ಮಹತ್ಯಾ ಡ್ರೋನ್​ಗಳು ನಾಶ - HEAVY LOSSES FOR PAKISTAN

ಭಾರತ ನಡೆಸಿದ ಆಪರೇಷನ್​ ಕಾರ್ಯಾಚರಣೆಯಲ್ಲಿ ಪಾಕಿಸ್ತಾನವು ಭಾರಿ ನಷ್ಟ ಅನುಭವಿಸಿದೆ ಎಂಬುದಕ್ಕೆ ದತ್ತಾಂಶಗಳ ತಾಂತ್ರಿಕ ವಿಶ್ಲೇಷಣೆಯಲ್ಲಿ ಬಯಲಾಗಿದೆ.

ನಾಶವಾದ ಪಾಕಿಸ್ತಾನದ ಡ್ರೋನ್​ಗಳ ಚಿತ್ರ ಬಿಡುಗಡೆ ಮಾಡಿದ್ದ ಭಾರತೀಯ ವಾಯುಪಡೆ
ನಾಶವಾದ ಪಾಕಿಸ್ತಾನದ ಡ್ರೋನ್​ಗಳ ಚಿತ್ರ ಬಿಡುಗಡೆ ಮಾಡಿದ್ದ ಭಾರತೀಯ ವಾಯುಪಡೆ (ANI VIDEO GRAB)
author img

By ETV Bharat Karnataka Team

Published : June 4, 2025 at 3:34 PM IST

1 Min Read

ನವದೆಹಲಿ : ಭಾರತೀಯ ಸೇನಾ ಪಡೆಗಳು ನಡೆಸಿದ ಆಪರೇಷನ್​ ಸಿಂಧೂರ್​ ಕಾರ್ಯಾಚರಣೆಯಲ್ಲಿ ಪಾಕಿಸ್ತಾನವು ಭಾರಿ ನಷ್ಟ ಅನುಭವಿಸಿದ ಬಗ್ಗೆ ಮಾಹಿತಿ ಹೊರಬಿದ್ದಿದೆ. ಪಾಕ್​ನ 9 ವಿಮಾನಗಳು, 10 ಕ್ಕೂ ಹೆಚ್ಚು ಆತ್ಮಹತ್ಯಾ ಡ್ರೋನ್​ಗಳು, ಕ್ಷಿಪಣಿಗಳನ್ನು ಭಾರತೀಯ ಸೇನೆಯು ಹೊಡೆದು ಹಾಕಿದೆ ಎಂದು ತಿಳಿದು ಬಂದಿದೆ.

ಕಾರ್ಯಾಚರಣೆಯ ವೇಳೆ ಪಾಕಿಸ್ತಾನದ ವಾಯುಪಡೆಯ 6 ಯುದ್ಧ ವಿಮಾನಗಳನ್ನು ಆಕಾಶದಲ್ಲೇ ಹೊಡೆದುರುಳಿಸಲಾಗಿದೆ. ಎರಡು ಇತರ ವಿಮಾನಗಳು, 1 ಸಿ-130 ಸಾರಿಗೆ ವಿಮಾನ ನಾಶಪಡಿಸಲಾಗಿದೆ ಎಂದು ಭಾರತೀಯ ವಾಯುಪಡೆ ನೀಡಿದ ದತ್ತಾಂಶಗಳ ತಾಂತ್ರಿಕ ವಿಶ್ಲೇಷಣೆಯಲ್ಲಿ ಗೊತ್ತಾಗಿದೆ.

ಸುದರ್ಶನ ಚಕ್ರಕ್ಕೆ ಸಿಲುಕಿದ ಪಾಕ್: ಎಚ್ಚರಿಕೆಗೂ ಬಗ್ಗದೇ ಭಾರತದ ಗಡಿಯಲ್ಲಿ ಹಾರಾಡುವಾಗ ಪಾಕಿಸ್ತಾನದ ಅಧಿಕ ಮೌಲ್ಯದ ವಿಮಾನವನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆಯಾದ ಸುದರ್ಶನ್​ 300 ಕಿಮೀ ದೂರದಲ್ಲಿ ಅದನ್ನು ಹೊಡೆದು ಹಾಕಿದೆ. ಭೋಲಾರಿ ವಾಯುನೆಲೆಯಲ್ಲಿ ಆಕಾಶದಿಂದ ಭೂಮಿಗೆ ಹಾರುವ ಕ್ಷಿಪಣಿಗಳನ್ನು ಬಳಸಿ ನಡೆಸಿದ ದಾಳಿಯಲ್ಲಿ ಸ್ವೀಡನ್​​ ಮೂಲದ ಮತ್ತೊಂದು ವಿಮಾನವನ್ನು ಪಾಕಿಸ್ತಾನ ಕಳೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ದಾಳಿಗೀಡಾಗಿ ನಾಶವಾಗಿರುವ ಯುದ್ಧ ವಿಮಾನಗಳ ಅವಶೇಷಗಳನ್ನು ಪಾಕಿಸ್ತಾನ ಹೊರತೆಗೆಯುತ್ತಿಲ್ಲ. ಹೀಗಾಗಿ, ಅವರ ನಿಖರವಾದ ಲೆಕ್ಕ ಸಿಗುತ್ತಿಲ್ಲ. ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಯ ರಾಡಾರ್‌ಗಳು ಮತ್ತು ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳು ಪತ್ತೆ ಮಾಡಿದವು. ತಕ್ಷಣವೇ ಅವುಗಳ ಮೇಲೆ ದಾಳಿ ನಡೆಸಿದಾಗ, ಕಣ್ಮರೆಯಾದವು ಎಂದು ವರದಿಯಾಗಿದೆ.

ಪಾಕ್​ ವಿಮಾನದ ಮೇಲೆ ಭಾರತ ಡ್ರೋನ್​ ದಾಳಿ: ಭಾರತೀಯ ವಾಯುಪಡೆ ನಡೆಸಿದ ಡ್ರೋನ್ ದಾಳಿಗಳಲ್ಲಿ ಪಾಕಿಸ್ತಾನ ವಾಯುಪಡೆಯ ಸಿ -130 ಸಾರಿಗೆ ವಿಮಾನವು ಅಲ್ಲಿನ ಪಂಜಾಬ್‌ ಪ್ರಾಂತ್ಯದಲ್ಲಿ ನಾಶವಾಗಿದೆ. ಪಾಕಿಸ್ತಾನಿ ನೆಲೆಗಳ ಮೇಲೆ ದಾಳಿ ಮಾಡಲು ಭಾರತೀಯ ವಾಯುಪಡೆಯು ವಾಯು ಉಡಾವಣಾ ಕ್ರೂಸ್ ಕ್ಷಿಪಣಿಗಳನ್ನು ಮಾತ್ರ ಬಳಸಿತು. ಇದಕ್ಕಾಗಿ, ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಲಾಗಿಲ್ಲ ಎಂದು ಹೇಳಲಾಗಿದೆ.

ರಫೇಲ್ ಮತ್ತು ಸುಕೋಯ್​-30 ಯುದ್ಧ ವಿಮಾನಗಳು ದಾಳಿ ನಡೆಸಿ ಚೀನಾ ಮೂಲದ ವಿಂಗ್ ಲೂಂಗ್ ಸರಣಿಯ ಡ್ರೋನ್‌ಗಳನ್ನು ನಾಶಪಡಿಸಲಾಗಿದೆ. ಪಾಕಿಸ್ತಾನದ ವಾಯುಪ್ರದೇಶದಲ್ಲೇ ಅದರ 10 ಕ್ಕೂ ಹೆಚ್ಚು ಆತ್ಮಹತ್ಯಾ ಡ್ರೋನ್​​ಗಳನ್ನು ಹೊಡೆದುರುಳಿಸಲಾಗಿದೆ. ವಿವಿಧ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳನ್ನು ಹಾರಿಸಿ ಹಾನಿ ಉಂಟು ಮಾಡಲಾಗಿದೆ ಎಂದು ವಿಶ್ಲೇಷಣೆಯಲ್ಲಿ ತಿಳಿದು ಬಂದಿದೆ.

ಇದನ್ನೂ ಓದಿ: ಜ್ಯೋತಿ ಮಲ್ಹೋತ್ರಾ ಸಂಪರ್ಕದಲ್ಲಿದ್ದ ಪಂಜಾಬ್​ ಯೂಟ್ಯೂಬರ್​ ಬಂಧನ

ಅಗ್ನಿವೀರರಿಗೆ ಪೊಲೀಸ್​ ಇಲಾಖೆಯಲ್ಲಿ ಶೇ 20ರಷ್ಟು ಮೀಸಲಾತಿ ಘೋಷಿಸಿದ ಯೋಗಿ ಸರ್ಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.