ETV Bharat / bharat

ಒಂದೇ ವರ್ಷದಲ್ಲಿ 175 ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ 15ರ ಬಾಲಕಿ! ಪುಟ್ಟ ಪೋರಿಯ ಸಂದರ್ಶನ ನಡೆಸಿದ ಡಿಸ್ನಿ - CERTIFICATE COURSES

10ನೇ ತರಗತಿಯನ್ನು ಪೂರ್ಣಗೊಳಿಸಿರುವ ವಿದ್ಯಾರ್ಥಿನಿಯೊಬ್ಬಳು ಒಂದು ವರ್ಷದಲ್ಲಿ 175 ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದು, ಆಕೆಯ ಸಾಧನೆಯನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಸಂದರ್ಶನ ಮಾಡಿದೆ.

PRAVALLIKA COMPLETES 175 COURSES
ವಿದ್ಯಾರ್ಥಿನಿ ಪ್ರವಳಿಕಾ (ETV Bharat)
author img

By ETV Bharat Karnataka Team

Published : April 26, 2025 at 4:42 PM IST

Updated : April 26, 2025 at 6:31 PM IST

4 Min Read

ವಿಜಯವಾಡ, ಆಂಧ್ರಪ್ರದೇಶ: 15 ವರ್ಷದ ವಿದ್ಯಾರ್ಥಿನಿಯೊಬ್ಬಳು ವೃತ್ತಿಪರ ಅಗತ್ಯಗಳನ್ನು ಪೂರೈಸುವ ಹಾಗೂ ಉದ್ಯೋಗ ಕೌಶಲ್ಯಗಳನ್ನು ತಿಳಿಸುವ 175 ವಿಶೇಷ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಕೇವಲ ಒಂದು ವರ್ಷದೊಳಗೆ ಪೂರ್ಣಗೊಳಿಸುವ ಮೂಲಕ ಮಾದರಿಯಾಗಿದ್ದಾಳೆ.

ವಿಶಾಖಪಟ್ಟಣದ ಬಂಡಾರು ಪ್ರವಳಿಕಾ ಮಾದರಿ(Model)ವಿದ್ಯಾರ್ಥಿನಿ. ಲಗೋರಿ, ಚೆನ್ನೆಮಣೆ, ಚಿನ್ನಿದಾಂಡು, ಕುಂಟೆ ಬಿಲ್ಲೆ ಆಟವಾಡಬೇಕಾದ ಈ ಪುಟ್ಟ ಪೋರಿಯ ಸಾಧನೆ ಕಂಡು ಜನಪ್ರಿಯ ಆನ್‌ಲೈನ್ ವಿಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಈ ವಿದ್ಯಾರ್ಥಿನಿಯ ವಿಶೇಷ ಸಂದರ್ಶನ ಸಹ ನಡೆಸಿದೆ. ಸದ್ಯ ವಿದ್ಯಾರ್ಥಿಯ ಸಾಧನೆಯನ್ನು ಶಾಲಾ ಶಿಕ್ಷಕರು ಫೋಷಕರು ಕೊಂಡಾಡುತ್ತಿದ್ದಾರೆ.

ಇದು ಪಕ್ಕಾ ಗ್ರಾಮೀಣ ಪ್ರತಿಭೆ: ವಿಶಾಖಪಟ್ಟಣದ ಭೀಮಿಲಿಯಲ್ಲಿರುವ ಕಸ್ತೂರ್ಬಾ ಗಾಂಧಿ ವಿದ್ಯಾಲಯದಲ್ಲಿ 10ನೇ ತರಗತಿಯನ್ನು ಪೂರ್ಣಗೊಳಿಸಿರುವ ಪ್ರವಳಿಕಾ, ಮೂಲತಃ ಅನಕಪಲ್ಲಿ ಜಿಲ್ಲೆಯ ಕೊನೆಂಪಲೆಂ ಎಂಬ ಗ್ರಾಮದವಳು. ಬಿಡುವಿನ ವೇಳೆಯಲ್ಲಿ ತರಗತಿಗಳಿಗೆ ಹಾಜರಾಗುತ್ತಲೇ ಭವಿಷ್ಯದಲ್ಲಿ ತನಗೆ ಸಹಕಾರಿಯಾಗಬಲ್ಲ ವಿಶೇಷ ಸರ್ಟಿಫಿಕೇಟ್ ಕೋರ್ಸ್‌ಗಳತ್ತ ಗಮನ ಹರಿಸುವ ಮೂಲಕ ಇತರರಿಗಿಂತ ವಿಭಿನ್ನ ಎಂದು ತೋರಿಸಿಕೊಟ್ಟಿದ್ದಾಳೆ.

PRAVALLIKA COMPLETES 175 COURSES
ವಿದ್ಯಾರ್ಥಿನಿ ಪ್ರವಳಿಕಾ (ETV Bharat)

ಸಹಜವಾಗಿ ಹಲವರು ಹೆಚ್ಚು ಅಂಕಗಳಿಗೆ ಮೊರೆ ಹೋದರೆ, ಇವಳದ್ದು ಮಾತ್ರ ವಿಭಿನ್ನ ದಾರಿ: ತನ್ನೊಂದಿಗೆ ಓದುವ ಭಾಗಶಃ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಪಡೆಯುವತ್ತ ಗಮನಹರಿಸಿದರೆ, ಪ್ರವಳಿಕಾ ಮಾತ್ರ ಭವಿಷ್ಯದಲ್ಲಿ ಅನುಕೂಲವಾಗುವಂತಹ ಅರ್ಥಪೂರ್ಣ ವಿಶೇಷ ಕೋರ್ಸ್‌ಗಳತ್ತ ಗಮನ ನೀಡುವ ಮೂಲಕ ಮಾದರಿಯಾಗಿದ್ದಾಳೆ. 9ನೇ ತರಗತಿ ಓದುತ್ತಿದ್ದಾಗ ಇನ್ಫೋಸಿಸ್ ಪರಿಚಯಿಸಿದ ಆನ್‌ಲೈನ್ ಕೋರ್ಸ್‌ಗಳಿಂದ ಆಸಕ್ತಿ ಹೊಂದಿ ಪ್ರವಳಿಕಾ ವಿಶೇಷ ಕೋರ್ಸ್‌ಗಳತ್ತ ಹೆಜ್ಜೆ ಹಾಕಿದ್ದು, ಅಂದಿನಿಂದ ಆರಂಭಗೊಂಡ ಈ ಕೋರ್ಸ್‌ಗಳ ಯಾತ್ರೆ ವರ್ಷದಲ್ಲಿ ಇದೀಗ 175ಕ್ಕೆ ಬಂದು ನಿಂತಿದೆ.

ಪ್ರವಳಿಕಾ ಏನೇನೆಲ್ಲ ಕಲಿತಿದ್ದಾಳೆ ಎಂದರೆ!: ಸಮಯ ನಿರ್ವಹಣೆ, ಎಲೆಕ್ಟ್ರಾನಿಕ್ಸ್, ಹಾರ್ಡ್‌ವೇರ್, ಸಾಫ್ಟ್‌ವೇರ್, ಡ್ರೋನ್ ತಂತ್ರಜ್ಞಾನ, ರೊಬೊಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಹಲವು ವಿಷಯಗಳ ಕೋರ್ಸ್‌ಗಳನ್ನು ಒಂದೇ ವರ್ಷದಲ್ಲಿ ಪೂರ್ಣಗೊಳಿಸಿರುವುದು ಪ್ರವಳಿಕಾಳ ಸಾಧನೆ. ಪ್ರತಿಯೊಂದು ಕೋರ್ಸ್ ಕಲಿಯಲು ಮೂರು ಗಂಟೆಗಳಿಂದ ದಿನ ಪೂರ್ತಿ ಕಲಿತಿರುವುದು ವಿಶೇಷ. ಪ್ರವಳಿಕಾಳ ಸಾಧನೆ ಕಂಡು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಪ್ರತಿನಿಧಿಗಳು ವಿದ್ಯಾರ್ಥಿಯನ್ನು ಅಭಿನಂದಿಸಿದಲ್ಲದೇ ದೆಹಲಿಯಿಂದ ಬಂದು ಒಂದು ವಿಶೇಷ ಸಂದರ್ಶನ ಕೂಡ ನಡೆಸಿದರು.

PRAVALLIKA COMPLETES 175 COURSES
ಶಾಲಾ ಶಿಕ್ಷಕರೊಂದಿಗೆ ವಿದ್ಯಾರ್ಥಿನಿ ಪ್ರವಳಿಕಾ (ETV Bharat)

ಇವುಗಳನ್ನೆಲ್ಲ ಕಲಿಯಲು ಆಸಕ್ತಿ ಬಂದಿದ್ದು ಹೇಗೆ?- ಹೀಗಿದೆ ಬಾಲಕಿ ಉತ್ತರ: "ಶಾಲಾ ಶಿಕ್ಷಕರ ಪ್ರೋತ್ಸಾಹದಿಂದ ಪ್ರತಿಯೊಂದು ಕೋರ್ಸ್ ಕಲಿಯಲು ಪ್ರಾರಂಭಿಸಿದೆ. ಸಮಯ ನಿರ್ವಹಣೆ, ಎಲೆಕ್ಟ್ರಾನಿಕ್ಸ್, ಹಾರ್ಡ್‌ವೇರ್, ಸಾಫ್ಟ್‌ವೇರ್, ಡ್ರೋನ್, ರೊಬೊಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ಭವಿಷ್ಯದಲ್ಲಿ ಯೋಗ್ಯ ಅನ್ನಿಸುವ 175 ಕೋರ್ಸ್‌ಗಳನ್ನು ಪೂರ್ಣಗೊಳಿಸಿರುವೆ. ನನ್ನೊಂದಿಗೆ ಅನೇಕ ಇತರ ಸಹಪಾಠಿಗಳು ಸರ್ಟಿಫಿಕೇಟ್​ ಕೋರ್ಸ್ ಮಾಡಲು ಮುಂದೆ ಬಂದರು. ಆದರೆ, 175 ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದು ನಾನು ಮಾತ್ರ.

ಇನ್ಫೋಸಿಸ್ ವೇದಿಕೆಯಲ್ಲಿ ಹಲವು ಕೋರ್ಸ್‌ಗಳಿವೆ. ಆನ್​ಲೈನ್​ ಮತ್ತು ಆಫ್​ಲೈನ್​ ಎರಡು ಅವಕಾಶ ಇದ್ದು, ನಾವು ನಮ್ಮ ಆಯ್ಕೆಯ ಕೋರ್ಸ್ ಅನ್ನು ತೆಗೆದುಕೊಳ್ಳಬೇಕು. ಒಂದು ಕೋರ್ಸ್ ಕಲಿಯಲು ಗಮನ ಕೊಟ್ಟು ಕೇಳಿದ್ದೇ ಆದಲ್ಲಿ ಎರಡರಿಂದ ಮೂರು ಗಂಟೆಗಳು ಬೇಕಾಗುತ್ತದೆ. ಕೋರ್ಸ್ ಮುಗಿಸಿದ ನಂತರ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಉತ್ತೀರ್ಣರಾದರೆ ಮಾತ್ರ ಪ್ರಮಾಣಪತ್ರ ನೀಡಲಾಗುತ್ತದೆ. ಈ ರೀತಿಯಾಗಿ, ನಾನು 175 ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದೇನೆ. 50 ಪ್ರಮಾಣಪತ್ರ ಕೋರ್ಸ್‌ಗಳನ್ನು ಪೂರ್ಣಗೊಳಿಸುವುದು ಗುರಿಯಾಗಿತ್ತು. ಆಂಧ್ರಪ್ರದೇಶದ ಶಿಕ್ಷಣ ಮತ್ತು ಐಟಿ ಸಚಿವ ನಾರಾ ಲೋಕೇಶ್ ನಮ್ಮ ಶಾಲೆಗೆ ಭೇಟಿ ನೀಡಿದ್ದಲ್ಲದೇ ನನ್ನನ್ನು ಅಭಿನಂದಿಸಿದರು ಎಂದು ಸಂತಸ ವ್ಯಕ್ತಪಡಿಸಿದ್ದಾಳೆ ಬಾಲಕಿ.

PRAVALLIKA COMPLETES 175 COURSES
ವಿದ್ಯಾರ್ಥಿನಿ ಪ್ರವಳಿಕಾ (ETV Bharat)

ಇತರ ಅಧಿಕಾರಿಗಳು, ಶಾಲಾ ಶಿಕ್ಷಕರು, ಸಂಬಂಧಿಕರು, ಪೋಷಕರು, ಗ್ರಾಮಸ್ಥರು ಸೇರಿದಂತೆ ಹಲವರು ನನಗೆ ಅಭಿನಂದನೆ ಸಲ್ಲಿಸುವ ಮೂಲಕ ಪ್ರೋತ್ಸಾಹ ಕೂಡ ನೀಡಿದ್ದಾರೆ. ಈ ಸಾಧನೆಯ ಹಿಂದೆ ಹಲವರ ಶ್ರಮ ಇದೆ" ಎಂದು ವಿದ್ಯಾರ್ಥಿನಿ ಪ್ರವಲ್ಲಿಕಾ ತನ್ನ ಕಲಿಕಾ ವಿಧಾನದ ಬಗ್ಗೆ ಪ್ರವಳಿಕಾ ಹೇಳಿಕೊಂಡಿದ್ದಾಳೆ.

ಬಾಲಕಿ ಸಾಧನೆ ಹೊಗಳಿದ ಇನ್ಫೋಸಿಸ್​: 175 ಸರ್ಟಿಫಿಕೇಟ್​ ಕೋರ್ಸ್‌ಗಳನ್ನು ಪೂರ್ಣಗೊಳಿಸಿರುವ ಪ್ರವಳಿಕಾಳ ಪ್ರತಿಭೆಯನ್ನು ಶ್ಲಾಘಿಸಿರುವ ಇನ್ಫೋಸಿಸ್, "ಬಿ.ಟೆಕ್ ಮತ್ತು ಎಂ.ಟೆಕ್ ಪದವಿ ಪಡೆದ ಪದವೀಧರರಿಗೂ ಸಹ ಸವಾಲಾಗಿರುವ 175 ಕೋರ್ಸ್‌ಗಳನ್ನು ಈ ವಿದ್ಯಾರ್ಥಿನಿ ಪೂರ್ಣಗೊಳಿಸಿರುವುದು ಗಮನಾರ್ಹ. ಅದು ಕೇವಲ ಕೇವಲ ಒಂದು ವರ್ಷದಲ್ಲಿ" ಎಂದು ಪ್ರಶಂಸೆ ವ್ಯಕ್ತಪಡಿಸಿದೆ.

ಕ್ರೀಡೆಯಲ್ಲೂ ಈಕೆಯದ್ದು ಎತ್ತಿದ ಕೈ: ಪ್ರವಳಿಕಾಳ ಸಾಧನೆ ಸರ್ಟಿಫಿಕೇಟ್​ ಕೋರ್ಸ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಕ್ರೀಡೆಯಲ್ಲೂ ಪ್ರತಿಭಾವಂತೆ. ಆಕೆಗೆ ಕ್ರಿಕೆಟ್​ ಅಂದರೆ ಅಚ್ಚುಮೆಚ್ಚು. ಶಾಲಾ ಕ್ರಿಕೆಟ್ ತಂಡದ ಉಪನಾಯಕಿಯಾಗಿದ್ದಳು. ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ತಂಡವನ್ನು ಪಾಲ್ಗೊಳ್ಳುವಂತೆ ಮಾಡಿದ್ದಲ್ಲದೇ ಪದಕಗಳನ್ನು ಸಹ ಗೆದ್ದಕೊಂಡು ಬಂದಿದ್ದಾರೆ ಎಂದು ಆಕೆಯ ಶಿಕ್ಷಕರು ಹೆಮ್ಮೆ ವ್ಯಕ್ತಪಡಿಸಿದರು. ಪೋಷಕರು ಕೂಡ ಮಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ತಮ್ಮ ಮಗಳು ಇಷ್ಟೊಂದು ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದು ಖುಷಿ ವಿಚಾರ. ಅವಳು ಎಲ್ಲಿಯವರೆಗೆ ಓದುಬೇಕು ಅಂತ ಅಂದುಕೊಂಡಿದ್ದಾಳೊ ಅಲ್ಲಿಯವರೆಗೆ ಓದಿಸುತ್ತೇವೆ ಎನ್ನುತ್ತಾರೆ ಪ್ರವಳಿಕಾಳ ಫೋಷಕರು. ಶ್ರೀ ಚೈತನ್ಯ ವಿದ್ಯಾಸಂಸ್ಥೆ ಆಕೆಯ ಅಸಾಧಾರಣ ಪ್ರತಿಭೆಯನ್ನು ಗುರುತಿಸಿದ್ದು, ಹೆಚ್ಚಿನ ಅಧ್ಯಯನಕ್ಕಾಗಿ ಉಚಿತ ಸೀಟು ನೀಡುವುದಾಗಿ ತಿಳಿಸಿದೆ.

PRAVALLIKA COMPLETES 175 COURSES
ವಿದ್ಯಾರ್ಥಿನಿ ಪ್ರವಳಿಕಾಗೆ ಮೆಚ್ಚುಗೆ (ETV Bharat)

ನಾಗರಿಕ ಸೇವೆಗಳಿಗೆ ಸೇರುವ ಹೆಬ್ಬಯಕೆ: ಬಿ.ಟೆಕ್‌ನಲ್ಲಿ ಸಿವಿಲ್ ಎಂಜಿನಿಯರಿಂಗ್ ಮಾಡಲು ಯೋಜಿಸುತ್ತಿರುವ ಪ್ರವಳಿಕಾ, ಭವಿಷ್ಯದಲ್ಲಿ ನಾಗರಿಕ ಸೇವೆಗಳಿಗೆ ಸೇರುವ ಗುರಿಯನ್ನು ಹೊಂದಿದ್ದಾರೆ. ಅವರ ಸಮರ್ಪಣೆ, ಪರಿಶ್ರಮ ಮತ್ತು ಮಹತ್ವಾಕಾಂಕ್ಷೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪವಿದ್ದರೆ, ಎಲ್ಲವೂ ಸಾಧ್ಯ ಎಂದು ತೋರಿಸುತ್ತದೆ. ಕೋವಿಡ್ ಸಮಯದಲ್ಲಿ ಅವರ ತಂದೆ ನಿಧನರಾಗಿದ್ದು, ನನ್ನ ತಾಯಿ ಬಟ್ಟೆ ಕಂಪನಿಯಲ್ಲಿ ಕೆಲಸ ಮಾಡುತ್ತಲೇ ಕುಟುಂಬ ನಿರ್ವಹಣೆ ಮಾಡುತ್ತಾರೆ.

ಇದನ್ನೂ ಓದಿ:

ಇಂಗ್ಲೀಷ್​ ಕಾದಂಬರಿ ಬರೆದ 15 ವರ್ಷದ ಬಾಲಕ: ದೇಶ, ವಿದೇಶಿ ಓದುಗರಿಂದ ಮೆಚ್ಚುಗೆ, ಸಿಕ್ಕಿದೆ 5ಸ್ಟಾರ್​ ರೇಟಿಂಗ್​!! - ENGLISH NOVEL

ರಾಮಾಯಣದ 135 ಪ್ರಶ್ನೆಗಳಿಗೆ ಉತ್ತರ ಹೇಳುವ 28 ತಿಂಗಳ ಪುಟ್ಟ ಪೋರ!; ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪುಟ ಸೇರಿದ ಪುಟಾಣಿ! - THREE YEAR OLD WONDER KID MOKSH

ಇಲ್ಲಿ ತರಬೇತಿ ಪಡೆದ ಎಲ್ಲ 30 ಬಡಮಕ್ಕಳು JEE ಮುಖ್ಯ ಪರೀಕ್ಷೆಯಲ್ಲಿ ಯಶಸ್ವಿ: ಯಾವುದು ಈ ಕೇಂದ್ರ? - OIL PRAGYAN SUPER 30 SUCCUSS

Last Updated : April 26, 2025 at 6:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.