ಪೊಲೀಸರ ಮೇಲೆ ಕಲ್ಲು ತೂರಾಡಿದ ಇರಾಣಿ ಗ್ಯಾಂಗ್: ಸಿಸಿ ಕ್ಯಾಮೆರಾದಲ್ಲಿ ಕೃತ್ಯ ಸೆರೆ

By

Published : Jun 11, 2022, 1:49 PM IST

thumbnail

ಗಾಂಜಾ ರೇಡ್​​​ ಮಾಡುವಾಗ ಇರಾನಿ ಗ್ಯಾಂಗ್ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬುಧವಾರ ನಡೆದಿದ್ದು, ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ. ಬೀದರ್ ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗಾಂಜಾ ಸಂಗ್ರಹಿಸಿಟ್ಟಿದ್ದ ಮಾಹಿತಿ ಪಡೆದ ಗಾಂಧಿ ಗಂಜ್ ಪೊಲೀಸರು ಇರಾಣಿ ಕಾಲೊನಿಗೆ ರೇಡ್​​ ಮಾಡಲು ತೆರಳಿದ್ದಾರೆ. ಪೊಲೀಸರು ಬರುತ್ತಿರುವುದನ್ನು ಕಂಡ ಯುವಕರು ಗುಂಪು ಗುಂಪಾಗಿ ಪೊಲೀಸರ ಮೇಲೆ ಕಲ್ಲು ತೂರಾಡಿದ್ದಾರೆ. ಇದರ ನಡುವೆಯೂ ಕಾಲೊನಿಗೆ ನುಗ್ಗಿದ ಪೊಲೀಸರು 5 ಕೆ.ಜಿ.ಗೂ ಹೆಚ್ಚು ಗಾಂಜಾ ವಶಪಡಿಸಿಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಡೆದ ಕೃತ್ಯದ ಸಿಸಿ ಕ್ಯಾಮೆರಾ ದೃಶ್ಯ ಈಗ ಬಹಿರಂಗವಾಗಿದೆ. ಕಲ್ಲು ತೂರಾಡಿದ ಪುಂಡರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.