40% ಲಂಚ, ಮಂಚ ಬಿಜೆಪಿಗೆ ಸಿಕ್ಕಿರುವ ಮೂಲಭೂತ ಬಳುವಳಿ: ಡಿ ಕೆ ಶಿವಕುಮಾರ್ ವ್ಯಂಗ್ಯ

By

Published : Sep 28, 2022, 11:00 AM IST

thumbnail

ಚಿತ್ರದುರ್ಗ: ಬಿಜೆಪಿ ಪಕ್ಷ ಇಡೀ ದೇಶ ಮತ್ತು ರಾಜ್ಯಕ್ಕೆ ಕೆಟ್ಟ ಹೆಸರು ತಂದಿದೆ. ನಾನು ಯಾವುದೇ ಅಪಾದನೆಗಳನ್ನು ಮಾಡಿಲ್ಲ. ಮೂರು ವರ್ಷಗಳಿಂದ ಅವರಿಗೆ ಏನೂ ಮಾಡಲಿಕ್ಕೆ ಆಗಿಲ್ಲ, ಮುಂದೆಯೂ ಆಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು. ಐಟಿ ದಾಳಿ ಮಾಡಿ ಕೇಸ್ ಹಾಕಿದ್ದಾರೆ. ಇದು 40% ಕಮಿಷನ್ ಸರ್ಕಾರ. ಲಂಚ, ಮಂಚ ಬಿಜೆಪಿಗೆ ಮೂಲಭೂತ ಬಳುವಳಿ. ಈ ಕೆಟ್ಟ ಭ್ರಷ್ಟ ಸರ್ಕಾರ ಮನೆಗೆ ಕಳಿಸಿ ರಾಜ್ಯವನ್ನು ಉಳಿಸುವ ಕೆಲಸ ಮಾಡುತ್ತೇವೆ ಎಂದರು. ಜೊತೆಗೆ ರಾಹುಲ್ ಗಾಂಧಿ ಗೋ ಬ್ಯಾಕ್ ಎಂಬ ಬಿಜೆಪಿ ಅಭಿಯಾನಕ್ಕೆ ಟಾಂಗ್ ನೀಡಿದ ಡಿಕೆಶಿ, ಗೋಬ್ಯಾಕ್ ಆದ್ರೂ ಮಾಡಲಿ, ಕಂ ಬ್ಯಾಕ್ ಆದ್ರೂ ಮಾಡಲಿ. ಇದು ಕಾಂಗ್ರೆಸ್ ಪಕ್ಷ ಎಂದು ಟಾಂಗ್​ ನೀಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.