ಮುರುಗ ಇಷ್ಟೊಂದು ಮಾತನಾಡೋದನ್ನ ನೋಡಿ ನಂಗೆ ಆಶ್ಚರ್ಯ ಆಯ್ತು : ಇಶಿತಾ

By

Published : Jul 19, 2021, 3:52 PM IST

thumbnail

'ರಾಜ ರಾಣಿ' ರಿಯಾಲಿಟಿ ಶೋ ಆರಂಭವಾಗಿ ನಿಧಾನವಾಗಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಮಾಯಾ ಪಾತ್ರ ನಿರ್ವಹಿಸಿದ್ದ ಇಶಿತಾ ಡ್ಯಾನ್ಸ್​ ಮಾಸ್ಟರ್​​ ಮರುಗ ಎಂಬುವರನ್ನು ವಿವಾಹವಾಗಿದ್ದಾರೆ. ಮದುವೆಯಾಗಿ ಒಂದೂವರೆ ವರ್ಷವಾದರೂ ಇಬ್ಬರಿಗೂ ಜೊತೆಯಲ್ಲಿರಲು ಸಮಯದ ಅಭಾವವಿತ್ತು. ಆದರೆ, ಈ ಶೋ ಮೂಲಕ ಇಬ್ಬರಿಗೂ ಪರಸ್ಪರ ಮಾತನಾಡಲು ಅವಕಾಶ ಸಿಕ್ಕಿದೆ. ಮುರುಗ ತೆರೆಯ ಹಿಂದೆ ಕೆಲಸ ಮಾಡುವವರು. ಮೈಕ್ ಮುಂದೆ ಎಂದು ಮಾತನಾಡಿದವರಲ್ಲ. ಆದರೆ, ಈ ಕಾರ್ಯಕ್ರಮದಲ್ಲಿ ಹೆಚ್ಚು ಮಾತನಾಡುತ್ತಿದ್ದಾರೆ. ಇದನ್ನು ನೋಡಿ ನನಗೆ ಸರ್ಪ್ರೈಸ್​ ಆಯ್ತು. ಈ ಕಾರ್ಯಕ್ರಮದ ಮೂಲಕ ಇಬ್ಬರೂ ಹೆಚ್ಚಾಗಿ ಜೊತೆ ಇರಲು ಸಾಧ್ಯವಾಗುತ್ತಿದೆ ಎಂದು ಇಶಿತಾ ಸಂತಸ ವ್ಯಕ್ತಪಡಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.