ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಫೋಟೋಗೆ ಅಭಿಮಾನಿಗಳಿಂದ ಹಾಲಿನ ಅಭಿಷೇಕ- ವಿಡಿಯೋ
ಮಹಾರಾಷ್ಟ್ರ: ಭಾರತ ತಂಡದ ಸ್ಟಾರ್ ಪ್ಲೇಯರ್ಗಳಾದ ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಮತ್ತು ಹಿಟ್ಮ್ಯಾನ್ ರೋಹಿತ್ ಶರ್ಮಾ ಅವ ಫೋಟೋಗಳಿಗೆ ಮಹಾರಾಷ್ಟ್ರದ ಪುಣೆಯ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದರು. ಭಾರತ ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿಯಲಿ ಎಂದು ಪ್ರಾರ್ಥಿಸಿದರು.
ಪುಣೆಯಲ್ಲಿ ಇಬ್ಬರೂ ಆಟಗಾರರ ದೊಡ್ಡ ಬ್ಯಾನರ್ಗಳನ್ನು ಹಾಕಿರುವ ಅಭಿಮಾನಿಗಳು ಅದರ ಮುಂದೆ ಜಮಾಯಿಸಿ ಭಾರತ ಗೆಲ್ಲಲಿದೆ ಎಂದು ಘೋಷಣೆ ಕೂಗಿದರು. ಬಳಿಕ ಬ್ಯಾನರ್ಗಳಿಗೆ ಹಾಲನ್ನು ಎರೆದು ಅಭಿಮಾನ ತೋರ್ಪಡಿಸಿದರು. ಟೂರ್ನಿಯಲ್ಲಿ ಅಸಾಧಾರಣ ಪ್ರದರ್ಶನ ನೀಡುತ್ತಿರುವ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ 10 ಪಂದ್ಯಗಳಲ್ಲಿ 711 ರನ್ ಗಳಿಸಿದ್ದಾರೆ. ನಾಯಕ ರೋಹಿತ್ ಶರ್ಮಾ ಪವರ್ಪ್ಲೇನಲ್ಲಿ ಸಾಟಿಯಿಲ್ಲದ ಬ್ಯಾಟ್ ಬೀಸುತ್ತಿದ್ದಾರೆ. ಇಬ್ಬರು ಆಟಗಾರರನ್ನು ಕಟ್ಟಿಹಾಕಲು ಎದುರಾಳಿ ತಂಡಗಳು ಪರದಾಡುತ್ತಿವೆ.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದರೆ ಮೂರನೇ ಏಕದಿನ ವಿಶ್ವಕಪ್ ಎತ್ತಿಹಿಡಿಯಲಿದೆ. ಆಸ್ಟ್ರೇಲಿಯಾ ಗೆದ್ದಲ್ಲಿ ಆರನೇ ಟ್ರೋಫಿ ತನ್ನದಾಗಿಸಿಕೊಳ್ಳಲಿದೆ.
ಇದನ್ನೂ ಓದಿ: ಫೈನಲ್ ಪಂದ್ಯದತ್ತ ದಿಟ್ಟ ಹೆಜ್ಜೆ ಹಾಕಿದ ಟೀಂ ಇಂಡಿಯಾ; ಸ್ಟೇಡಿಯಂ ಸುತ್ತ ಜನಸಾಗರ! -ವಿಡಿಯೋ