ಮುರುಘಾ ಶ್ರೀ ಭೇಟಿಯಾದ ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ: ವಿಡಿಯೋ
ದಾವಣಗೆರೆ: ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರು ಮರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ದಾವಣಗೆರೆ ನಗರದ ದೊಡ್ಡಪೇಟೆಯಲ್ಲಿರುವ ವಿರಕ್ತಮಠದಲ್ಲಿ ವಾಸ್ತವ್ಯ ಹೂಡಿರುವ ಶ್ರೀಗಳನ್ನು ಭೇಟಿಯಾಗಿ ಧೈರ್ಯ ತುಂಬಿದರು.
14 ತಿಂಗಳು ಜೈಲುವಾಸ ಅನುಭವಿಸಿದ ಶ್ರೀಗಳು ಇತ್ತೀಚೆಗೆ ಬಿಡುಗಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಮಠದ ಭಕ್ತರೂ ಆಗಿರುವ ವೀರೇಂದ್ರ ಪಪ್ಪಿ, ಸ್ವಾಮೀಜಿಗಳನ್ನು ಭೇಟಿಯಾಗಿ ಕೆಲಹೊತ್ತು ಮಾತನಾಡಿದರು. ಕಾಂಗ್ರೆಸ್ ಮುಖಂಡ ಮುರಳಾರಾಧ್ಯ ಜೊತೆಗಿದ್ದರು.
ಬಳಿಕ ಮಾತನಾಡಿದ ಶಾಸಕ, "ಶ್ರೀಯವರ ಜೊತೆ ಮಾತನಾಡಿದ್ದೇನೆ. ನಾವು ಅವರ ಆರೋಗ್ಯಕ್ಕಿಂತ ಅವರೇ ನಮ್ಮ ಆರೋಗ್ಯದ ಬಗ್ಗೆ ವಿಚಾರಿಸಿದರು. ನಮ್ಮ ತಾತನ ಕಾಲದಿಂದಲೂ ನಾವು ಚಿತ್ರದುರ್ಗ ಮುರುಘಾ ಮಠದ ಭಕ್ತರು. ಇದಕ್ಕೂ ಮೇಲಾಗಿ ಮುರಘಾಮಠ ನನ್ನ ಕ್ಷೇತ್ರದಲ್ಲೇ ಬರುತ್ತದೆ. ಅವರು ಜೈಲಿನಿಂದ ಬಂದರೂ ಮುಖದ ಮೇಲಿನ ಕಳೆ ಮಾತ್ರ ಕಡಿಮೆ ಆಗಿಲ್ಲ. ಈ ಪ್ರಕರಣದ ಬಗ್ಗೆ ನ್ಯಾಯಾಲಯ ಏನು ಕ್ರಮ ಕೈಗೊಳ್ಳುತ್ತದೋ ಅದಕ್ಕೆ ನಾವು ತಲೆಬಾಗಬೇಕು. ಅತ್ಯಂತ ಪುರಾತನ ಮಠ ಮುರಘಾ ಮಠ. ನಾವು ಭಕ್ತರೆಲ್ಲಾ ಸೇರಿ ಈ ಮಠವನ್ನು ಉಳಿಸಿಕೊಳ್ಳಬೇಕಾಗಿದೆ" ಎಂದರು.
ಇದನ್ನೂ ಓದಿ: ಮುರುಘಾ ಶರಣರ ಗದ್ದುಗೆಗೆ ಭೇಟಿ ಕೊಟ್ಟು ಆಶೀರ್ವಾದ ಪಡೆದ ಶಿವಮೂರ್ತಿ ಮುರುಘಾ ಶರಣರು