ಐಲ್ಯಾಂಡ್​ನಲ್ಲಿ ಜ್ವಾಲಾಮುಖಿ ಸ್ಫೋಟ: ಸಾರ್ವಜನಿಕ ಪ್ರವೇಶಕ್ಕೆ ನಿಷೇಧ - VIDEO

By

Published : Mar 23, 2021, 2:25 PM IST

thumbnail

ರೇಕ್‌ಜಾವಿಕ್: ವಾರಗಳ ನಿರೀಕ್ಷೆಯ ನಂತರ, ಐಲ್ಯಾಂಡಿಕ್ ಜ್ವಾಲಾಮುಖಿ ಅಂತಿಮವಾಗಿ ಸ್ಫೋಟಗೊಳ್ಳುತ್ತಿದೆ. ಕಳೆದ ಮೂರು ವಾರಗಳಲ್ಲಿ 50,000 ಕ್ಕೂ ಹೆಚ್ಚು ಭೂಕಂಪಗಳು ಸಂಭವಿಸಿದ ನಂತರ ಮಾರ್ಚ್ 19 ರಂದು ಸಂಜೆ ಪ್ರಾರಂಭವಾಗಿದೆ. ಐಲ್ಯಾಂಡ್​ನ ರಾಜಧಾನಿ ರೇಕ್‌ಜಾವಿಕ್ ಬಳಿಯ ಗೆಲ್ಡಿಂಗಡಲೂರಿನಲ್ಲಿ ಸ್ಫೋಟವು ಕಂಡು ಬಂದಿದೆ. ಜ್ವಾಲಾಮುಖಿ ನೋಡಲು ನೂರಾರು ಜನರು 8 ಕಿಲೋಮೀಟರ್ ನಡೆದು ಹೋಗಿದ್ದಾರೆ. 100 ಕ್ಕೂ ಹೆಚ್ಚು ಪಾರುಗಾಣಿಕಾ ಸಿಬ್ಬಂದಿ ನಿನ್ನೆ ರಾತ್ರಿ ಪ್ರಯಾಣಿಕರು ತಮ್ಮ ಕಾರುಗಳಿಗೆ ಸುರಕ್ಷಿತವಾಗಿ ಮರಳಲು ಸಹಾಯ ಮಾಡಿದರು. ಕೆಟ್ಟ ಹವಾಮಾನದಿಂದಾಗಿ ಸ್ಫೋಟದ ಸ್ಥಳವನ್ನು ಈಗ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.