Watch-ಸುಂಟರಗಾಳಿಗೆ ಅಮೆರಿಕ ಧೂಳಿಪಟ : ಏರುತ್ತಲೇ ಇದೆ ಮೃತರ ಸಂಖ್ಯೆ.. ಅಲ್ಲಿನ ಅವಸ್ಥೆ ನೋಡಿ

By

Published : Dec 12, 2021, 3:13 PM IST

thumbnail

ವಾಷಿಂಗ್ಟನ್ : ಅಮೆರಿಕದ ಅರ್ಕಾನ್ಸಾಸ್, ಮಿಸಿಸಿಪ್ಪಿ, ಇಲಿನಾಯ್ಸ್, ಕೆಂಟುಕಿ, ಟೆನ್ನೆಸ್ಸಿ ಮತ್ತು ಮಿಸೌರಿ - ಈ ಆರು ರಾಜ್ಯಗಳಲ್ಲಿ ಭಯಂಕರ ಸುಂಟರಗಾಳಿ ಬೀಸಿದೆ. ನೂರಾರು ಜನರು ಬಲಿಯಾಗಿದ್ದಾರೆ. ಸಾವಿನ ನಿಖರ ಮಾಹಿತಿ ದೊರೆತಿಲ್ಲ. ಆದರೆ, ಕೆಂಟುಕಿ ಒಂದರಲ್ಲೇ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದು ತಿಳಿದು ಬಂದಿದೆ. ಇಲಿನಾಯ್ಸ್‌ನಲ್ಲಿರುವ ಅಮೆಜಾನ್​ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ 6 ಜನರು ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮೃತರ ಸಂಖ್ಯೆ ಏರುತ್ತಲೇ ಇದೆ. ಸುಂಟರಗಾಳಿ ಅಬ್ಬರಕ್ಕೆ ಮನೆ-ಮಠ-ಕಟ್ಟಡಗಳು ನಾಶವಾಗಿರುವ ದೃಶ್ಯ ಇಲ್ಲಿದೆ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.