ಲಂಚಕ್ಕೆ ಬೇಡಿಕೆ: ಹೋಟೆಲ್​​​​ಗೆ ನುಗ್ಗಿ ಗ್ರಾಹಕರು, ಸಿಬ್ಬಂದಿಗೆ ಥಳಿಸಿದ ಸಬ್​ ಇನ್ಸ್​​ಪೆಕ್ಟರ್​​: ವಿಡಿಯೋ

By

Published : Apr 12, 2021, 5:47 PM IST

Updated : Apr 12, 2021, 5:55 PM IST

thumbnail

ಕೊಯಮತ್ತೂರು: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಬ್​ ಇನ್ಸ್​​ಪೆಕ್ಟರ್​​​ವೊಬ್ಬರು ಹೋಟೆಲ್​ನಲ್ಲಿ ದಾಂಧಲೆ ನಡೆಸಿರುವ ಘಟನೆ ನಡೆದಿದ್ದು, ಅದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿವೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಈ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದ್ದು, ಗ್ರಾಹಕರು ಹಾಗೂ ಸಿಬ್ಬಂದಿ ಮೇಲೆ ಎಸ್​​ಐ ಹಲ್ಲೆ ನಡೆಸಿದ್ದಾರೆ. ಕಳೆದ ವಾರ ಹೋಟೆಲ್​ನಲ್ಲಿ ಊಟ ಮಾಡಿದ್ದ ಎಸ್​ಐ ಹಣ ನೀಡದೇ ಹೋಗುತ್ತಿದ್ದಾಗ ಬಿಲ್​ ಕಟ್ಟುವಂತೆ ಕೇಳಿದ್ದಾರೆ. ಆ ವೇಳೆ, ಲಂಚಕ್ಕೆ ಬೇಡಿಕೆ ಇಟ್ಟಿದ್ದನು. ನಿನ್ನೆ ಅಲ್ಲಿಗೆ ತೆರಳಿ ಹಣ ನೀಡುವಂತೆ ಕೇಳಿ ದಾಂಧಲೆ ನಡೆಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕ ಪ್ರಕರಣ ದಾಖಲು ಮಾಡಿದ್ದಾರೆ.

Last Updated : Apr 12, 2021, 5:55 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.