WATCH : ಪಂಜಾಬ್​​ನ ಅಟ್ಟಾರಿ-ವಾಘಾ ಬಾರ್ಡರ್​​ನಲ್ಲಿ ಬೀಟಿಂಗ್ ರಿಟ್ರೀಟ್​​ ಸಮಾರಂಭ

By

Published : Aug 15, 2021, 9:13 PM IST

thumbnail

ಇಂದು 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ. ಈ ಹಿನ್ನೆಲೆ ಪಂಜಾಬ್​​ನ ಅಟ್ಟಾರಿ-ವಾಘಾ ಬಾರ್ಡರ್​​ನಲ್ಲಿ ಸೇನೆ, ಬೀಟಿಂಗ್ ರಿಟ್ರೀಟ್​​ ಸಮಾರಂಭ ನಡೆಸಿತು. ಅಟ್ಟಾರಿ-ವಾಘಾ ಗಡಿಯಲ್ಲಿ ಗಡಿ ಭದ್ರತಾ ಪಡೆಗಳಿಂದ ಸಂಗೀತ ವಾದ್ಯ ಪ್ರದರ್ಶನ ನಡೆಯಿತು. ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳ ರಾಷ್ಟ್ರಧ್ವಜಗಳನ್ನು ಕೆಳಗಿಳಿಸುವ ಕ್ಷಣವನ್ನು ಹಲವಾರು ಜನರು ಕಣ್ತುಂಬಿಕೊಂಡರು. ಈ ವೇಳೆ ಭಾರತ ಹಾಗೂ ಪಾಕಿಸ್ತಾನದ ಸೇನೆಯ ಯೋಧರು, ಗಡಿಯ ಗೇಟ್​ ಬಳಿ ಬಂದು ಪರಸ್ಪರ ಶೇಕ್​ ಹ್ಯಾಂಡ್​ ಮಾಡಿದರು. ಅಟ್ಟಾರಿ-ವಾಘಾ ಗಡಿಯಲ್ಲಿ ಧ್ವಜ ಸಮಾರಂಭವನ್ನು ಇಳಿಸುವುದು ದಿನನಿತ್ಯದ ಮಿಲಿಟರಿ ಅಭ್ಯಾಸ. ಭಾರತ ಮತ್ತು ಪಾಕಿಸ್ತಾನದ ಭದ್ರತಾ ಪಡೆಗಳು 1959ರಿಂದ ಜಂಟಿಯಾಗಿ ಅನುಸರಿಸುತ್ತಿವೆ. ಇದನ್ನು ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆಯ (ಐಎಎಫ್) ತಂಡಗಳು ನಿರ್ವಹಿಸುತ್ತವೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಮತ್ತು ದೆಹಲಿ ಪೊಲೀಸರ ಬ್ಯಾಂಡ್‌ಗಳ ಸಾಮೂಹಿಕ ರಚನೆಯೊಂದಿಗೆ ರೈಸಿನಾ ಹಿಲ್ಸ್‌ನಲ್ಲಿರುವ ಭಾರತೀಯ ವಾಯು ಪಡೆಗಳು ಪ್ರದರ್ಶನವನ್ನು ನೀಡುತ್ತವೆ.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.