ವಿಡಿಯೋ| ನೀರು ತುಂಬಿದ ಲೋಟಾ ಹಿಡಿದು ಓಡಿ ಬಯಲು ಶೌಚಮುಕ್ತ ಸಮಾಜಕ್ಕೆ ಪ್ರತಿಜ್ಞೆ

By

Published : Oct 13, 2021, 6:55 AM IST

thumbnail

ಮಧ್ಯಪ್ರದೇಶ: ಬಯಲು ಶೌಚವನ್ನು(open defecation) ಸಂಪೂರ್ಣವಾಗಿ ತೊಲಗಿಸುವ ಉದ್ದೇಶದಿಂದ ಮಂಗಳವಾರ ಭೋಪಾಲ್ ಜಿಲ್ಲಾಡಳಿತವು ಫಂಡಾ ಎಂಬ ಗ್ರಾಮದಲ್ಲಿ ಲೋಟಾ-ದೌಡ್ (ಲೋಟಾ ರೇಸ್) ಎಂಬ ವಿಶೇಷ ಕುತೂಹಲಕಾರಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 18 ವೃದ್ಧೆಯರು ಪಾಲ್ಗೊಂಡು ನೀರು ತುಂಬಿದ ಸಣ್ಣ ಪಾತ್ರೆಯನ್ನು ಹಿಡಿದು ಓಡಿ ಹೋಗಿ ಅಂತಿಮ ಗೆರೆ ತಲುಪಿದರು. ಆ ಬಳಿಕ ಲೋಟವನ್ನು ಎಸೆದರು. ಈ ವೇಳೆ ಅತ್ತೆಯಂದಿರ ಕೊರಳಿಗೆ ಹೂಮಾಲೆ ಹಾಕಿ ಸೊಸೆಯರು ಅಭಿನಂದಿಸಿದರು. ಇದೇ ಸಮಯದಲ್ಲಿ ಬಯಲು ಶೌಚಕ್ಕೆ ಹೋಗುವುದಿಲ್ಲ ಎಂದು ನೆರೆದಿದ್ದವರು ಪ್ರತಿಜ್ಞೆ ಮಾಡಿದರು. ದೇಶವನ್ನು ಬಯಲು ಶೌಚಮುಕ್ತ ಮಾಡುವ ನಿಟ್ಟಿನಲ್ಲಿ ವಿವಿಧೆಡೆ ಈ ರೀತಿಯ ಜನಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.