ಕೋಡಿ ಬಿದ್ದ ಕಂತನಹಳ್ಳಿ ಕೆರೆ: ಕೊಚ್ಚಿ ಹೋದ ರಸ್ತೆ
Published on: Aug 5, 2022, 12:37 PM IST

ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಕಂತನಹಳ್ಳಿ ಗ್ರಾಮದ ಕೆರೆ ಕೋಡಿ ಬಿದ್ದ ಪರಿಣಾಮ ಸನಿಹದಲ್ಲೇ ಇದ್ದ ರಸ್ತೆ ಕೊಚ್ಚಿ ಹೋಗಿದೆ. ಇದರಿಂದಾಗಿ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೆರೆಯಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗುತ್ತಿರುವುದರಿಂದ ಸ್ಥಳೀಯರು ಜೆಸಿಬಿ ಮೂಲಕ ಕೆರೆಯ ಒಡ್ಡನ್ನು ಸರಿಪಡಿಸುತ್ತಿದ್ದು, ನೀರು ನುಗ್ಗದಂತೆ ಕ್ರಮ ವಹಿಸಲಾಗುತ್ತಿದೆ.
Loading...