ಗಣಪತಿಗೆ 2 ಕೆಜಿ ಚಿನ್ನ ಲೇಪಿತ ಆಕರ್ಷಕ ತೊಟ್ಟಿಲು ಅರ್ಪಣೆ: ವಿಡಿಯೋ
Published on: Jan 24, 2023, 1:48 PM IST

ಪುಣೆ(ಮಹಾರಾಷ್ಟ್ರ): 2 ಕೆಜಿ 280 ಗ್ರಾಂ ಚಿನ್ನದಿಂದ ಮಾಡಲಾದ ಆಕರ್ಷಕ ತೊಟ್ಟಿಲನ್ನು ಇಲ್ಲಿನ ದಗ್ದುಶೇತ್ ಗಣೇಶ ದೇವಸ್ಥಾನಕ್ಕೆ ಭಕ್ತರು ಕಾಣಿಕೆಯಾಗಿ ನೀಡಿದ್ದಾರೆ. ನಾಳೆ(ಜನವರಿ 25 ರಂದು) ನಡೆಯುವ ಗಣೇಶ ಜಯಂತ್ಯುತ್ಸವವನ್ನು ಇದೇ ತೊಟ್ಟಿಲಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಮಧ್ಯಾಹ್ನ 12 ಗಂಟೆಗೆ ಗಣೇಶ ಜಯಂತಿ ನಡೆಯಲಿದೆ. ಇದೇ ತೊಟ್ಟಿಲಿನಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಬಂಗಾರಲೇಪಿತ ತೊಟ್ಟಿಲು 5 ಅಡಿ ಎತ್ತರವಿದೆ. ಇದಕ್ಕೆ ತೇಗದ ಮರದ ಸ್ಟ್ಯಾಂಡ್, 8.5 ಕೆಜಿ ಬೆಳ್ಳಿ ಬಳಸಲಾಗಿದೆ. ಚಿನ್ನದಿಂದ ಪಾಲಿಶ್ ಮಾಡಲಾದ 16x 24 ಇಂಚಿನ ತೊಟ್ಟಿಲು ಇದು.
ಇದನ್ನೂ ಓದಿ: ಐತಿಹಾಸಿಕ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಗೆ ವಿದ್ಯುಕ್ತ ಚಾಲನೆ..
Loading...