ಮೂಡಿಗೆರೆಗೆ ಆಗಮಿಸಿದ ಡಿಕೆಶಿ... ಸೇಬಿನ ಹಾರ ಹಾಕಿ ಅದ್ದೂರಿ ಸ್ವಾಗತ
Published on: Nov 29, 2022, 3:24 PM IST

ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮೂಡಿಗೆರೆಗೆ ಆಗಮಿಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಸೇಬಿನ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಡಿಕೆಶಿಯನ್ನು ಬರಮಾಡಿಕೊಳ್ಳಲು ನಗರದಲ್ಲಿ ಕೈ ಬಣಗಳ ಪೈಪೋಟಿ ನಡೆದಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ನಯನಾ ಮೋಟಮ್ಮ ಮತ್ತು ನಾಗರತ್ನ ಬೆಂಬಲಿಗರಿಂದ ಪ್ರತ್ಯೇಕವಾಗಿ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತ ಮಾಡಲಾಗಿದೆ. ಈ ವೇಳೆ ಜನಸಾಗರವೇ ಹರಿದುಬಂದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಡಿಕೆಶಿಯನ್ನು ಬರಮಾಡಿಕೊಂಡಿದ್ದಾರೆ.
Loading...