ಚಿಕ್ಕಬಳ್ಳಾಪುರದಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣ- ವಿಡಿಯೋ

By

Published : Jan 16, 2023, 10:03 AM IST

Updated : Feb 3, 2023, 8:39 PM IST

thumbnail

ಚಿಕ್ಕಬಳ್ಳಾಪುರ: ಜಗತ್ತಿನ ಅತೀ ದೊಡ್ಡ ಆದಿಯೋಗಿ ಪ್ರತಿಮೆಯು ತಮಿಳುನಾಡಿನ ಕೊಯಮತ್ತೂರಿನಲ್ಲಿದ್ದು, ಇದೀಗ ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿಯೂ ಸ್ಥಾಪಿಸಲಾಗಿದೆ. 112 ಅಡಿ ಎತ್ತರವಿರುವ ಪ್ರತಿಮೆಯನ್ನು ಮಕರ ಸಂಕ್ರಾಂತಿಯ ಶುಭದಿನದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹಬ್ಬದ ದಿನದಂದೇ ಪ್ರತಿಮೆಯ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸಿದ್ದರು. ವರ್ಣರಂಜಿತ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹಾಗೂ ಸದ್ಗುರು ಜಗ್ಗಿ ವಾಸುದೇವ್​ ಉಪಸ್ಥಿತರಿದ್ದರು. ಚಿಕ್ಕಬಳ್ಳಾಪುರದ ಆವಲಗುರ್ಕಿ ಬಳಿ ಆದಿಯೋಗಿ ಮೂರ್ತಿಯನ್ನು ಈಶ ಫೌಂಡೇಶನ್​ ನಿರ್ಮಿಸಿದೆ. ಈ ಸ್ಥಳಕ್ಕೆ ಸದ್ಗುರು ಸನ್ನಿಧಿ ಎಂದು ಹೆಸರಿಡಲಾಗಿದೆ. 

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.