ಖಾನಾಪುರದಲ್ಲಿ ಆನೆಗಳ ಹಿಂಡು ಪ್ರತ್ಯಕ್ಷ: ಗೋದೋಳಿ ಗ್ರಾಮಸ್ಥರಲ್ಲಿ ಆತಂಕ
Published on: Jan 25, 2023, 1:31 PM IST

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಗೋದೋಳಿ ಗ್ರಾಮದಲ್ಲಿ ನಸುಕಿನ ಜಾವ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಗೋದೋಳಿ ಗ್ರಾಮದ ಕೆಲ ರೈತರ ಬೆಳೆಗಳನ್ನು ಆನೆಗಳು ನಾಶ ಪಡಿಸಿವೆ. ಕಾಡಾನೆಗಳು ಕೃಷಿ ಜಮೀನಲ್ಲಿ ಬರುತ್ತಿದ್ದಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ, ಕಾಡಾನೆಗಳನ್ನು ಮರಳಿ ಕಾಡಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂಓದಿ:ದೇವಸ್ಥಾನದ ಆನೆಗಾಗಿ 8.40 ಲಕ್ಷ ರೂ ವೆಚ್ಚದ ಈಜುಕೊಳ ನಿರ್ಮಾಣ..
Loading...